ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್  
ದೇಶ

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತಕ್ಕೆ ಭೇಟಿ; ಆಗ್ರಾದಲ್ಲಿ ಯುಪಿ ಸಿಎಂ ಯೋಗಿ ಸ್ವಾಗತ

ಅಮೆರಿಕದ ಉಪಾಧ್ಯಕ್ಷರು ಏಪ್ರಿಲ್ 21ರ ಸೋಮವಾರ ರಾತ್ರಿ ಜೈಪುರಕ್ಕೆ ಆಗಮಿಸಲಿದ್ದಾರೆ.

ಲಖನೌ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳೊಂದಿಗೆ ಏಪ್ರಿಲ್ 21 ರಿಂದ ನಾಲ್ಕು ದಿನಗಳ ಭಾರತ ಭೇಟಿಗೆ ಆಗಮಿಸುತ್ತಿದ್ದಾರೆ. ವ್ಯಾನ್ಸ್ ಅವರು ದೆಹಲಿಯಲ್ಲಿ ರಾಜಕೀಯ ಸಭೆಗಳಲ್ಲಿ ಭಾಗವಹಿಸುವ ಮೊದಲು ಕುಟುಂಬದೊಂದಿಗೆ ಭಾರತದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಅಮೆರಿಕದ ಉಪಾಧ್ಯಕ್ಷರು ಏಪ್ರಿಲ್ 21ರ ಸೋಮವಾರ ರಾತ್ರಿ ಜೈಪುರಕ್ಕೆ ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ರಾಜಸ್ಥಾನದ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಂತರ, ವ್ಯಾನ್ಸ್ ಮತ್ತು ಅವರ ಕುಟುಂಬವು ಏಪ್ರಿಲ್ 23 ರಂದು ಆಗ್ರಾಗೆ ಭೇಟಿ ನೀಡಿ ಪ್ರೀತಿಯ ಸ್ಮಾರಕ ತಾಜ್ ಮಹಲ್‌ನ ಸೌಂದರ್ಯವನ್ನು ವೀಕ್ಷಿಸಲಿದ್ದಾರೆ. ನಂತರ ಅಮೆರಿಕದ ಉಪಾಧ್ಯಕ್ಷರು ದ್ವಿಪಕ್ಷೀಯ ಮಾತುಕತೆಗಾಗಿ ದೆಹಲಿಗೆ ತೆರಳಲಿದ್ದಾರೆ.

ಮೂಲಗಳ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ಮತ್ತು ಆಗ್ರಾ ಜಿಲ್ಲಾಡಳಿತವು ಅಮೆರಿಕದ ಉಪಾಧ್ಯಕ್ಷರ ಭೇಟಿಗೆ ಸಿದ್ಧತೆ ನಡೆಸುತ್ತಿದೆ.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಆಗ್ರಾದಲ್ಲಿ ಅಮೆರಿಕದ ಉಪಾಧ್ಯಕ್ಷರನ್ನು ಸ್ವಾಗತಿಸುವ ಸಾಧ್ಯತೆಯಿದೆ. ಗಣ್ಯರ ಭೇಟಿಯ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಯುಪಿ ಪ್ರವಾಸೋದ್ಯಮ ಸಚಿವ ರಾಜವೀರ್ ಸಿಂಗ್ ಈಗಾಗಲೇ ಆಗ್ರಾದಲ್ಲಿದ್ದಾರೆ.

ಅಮೆರಿಕ ಉಪಾಧ್ಯಕ್ಷರ ಭೇಟಿಗೂ ಮುನ್ನ ಏಪ್ರಿಲ್ 22, ಮಂಗಳವಾರ ಆಗ್ರಾದಲ್ಲಿ ಯುಎಸ್ ಕಮಾಂಡೋ ಪಡೆಯ ವಿಶೇಷ ತುಕಡಿ ಲ್ಯಾಂಗ್ ಆಗುವ ನಿರೀಕ್ಷೆಯಿದೆ. ಇದಲ್ಲದೆ, ಭದ್ರತೆ ದೃಷ್ಟಿಯಿಂದ ವ್ಯಾನ್ಸ್ ಭೇಟಿಗೆ ಮೂರು ಗಂಟೆಗಳ ಮೊದಲು ತಾಜ್ ಮಹಲ್ ಅನ್ನು ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Tilak Varma Masterclass: 5 ವಿಕೆಟ್ ಗಳಿಂದ ಪಾಕ್ ಬಗ್ಗುಬಡಿದ ಭಾರತ, Asia Cup 2025 ಚಾಂಪಿಯನ್!

Asia Cup 2025 Final: ಮ್ಯಾಚ್ ಫಿನಿಶರ್ ಯಾರು ಗೊತ್ತಾ?ಈ VIDEO ನೋಡಿ..

Asia cup 2025: ಹ್ಯಾರಿಸ್ ರೌಫ್ ಗೆ ತಿರುಗೇಟು ನೀಡಿದ ಬೂಮ್ರಾ! Video ವೈರಲ್

Asia CUP 2025: ಅದು ಬೇಕಿತ್ತಾ? ಶಾಟ್ ಹೊಡೆಯಲು ಹೋಗಿ ಬೇಗನೆ ಔಟಾದ 'ಅಭಿಷೇಕ್ ಶರ್ಮಾ' ವಿರುದ್ಧ ಕೆರಳಿದ ಗವಾಸ್ಕರ್! Video

Wangchuk’s wife: ಸೇನೆಗೆ ಶೆಲ್ಟರ್ ನಿರ್ಮಿಸಿ, ಚೀನಾ ವಸ್ತುಗಳನ್ನು ಬಹಿಷ್ಕರಿಸಿದ ಆತ ಹೇಗೆ ದೇಶ ವಿರೋಧಿ ಆಗ್ತಾನೆ? ವಾಂಗ್‌ಚುಕ್ ಪತ್ನಿ

SCROLL FOR NEXT