ದೇಶ

"ಸಂಸತ್ತೇ ಸರ್ವೋಚ್ಛ": ನ್ಯಾಯಾಂಗದ ಬಗ್ಗೆ ಜಗದೀಪ್ ಧನ್ಕರ್ ಮತ್ತೆ ಅಸಮಾಧಾನ

ಜಗದೀಪ್ ಧನ್ಕರ್, ಪ್ರಜಾಪ್ರಭುತ್ವದಲ್ಲಿ ಸಂಭಾಷಣೆಯ ಮಹತ್ವವನ್ನು ಅವರು ಮತ್ತಷ್ಟು ಒತ್ತಿ ಹೇಳಿದ್ದು ಪ್ರಜಾಪ್ರಭುತ್ವವನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನವದೆಹಲಿ: ನ್ಯಾಯಾಂಗದ ವ್ಯಾಪ್ತಿ ಮೀರಿದ ಕಾರ್ಯನಿರ್ವಹಣೆ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿರುವಾಗಲೇ ಮತ್ತೆ ಈ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮಾತನಾಡಿದ್ದಾರೆ.

ಮಂಗಳವಾರ ದೆಹಲಿ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಉಪಾಧ್ಯಕ್ಷ ಜಗದೀಪ್ ಧಂಖರ್, ನ್ಯಾಯಾಂಗದ 'ಅತಿಕ್ರಮಣ'ದ ಟೀಕೆಗಳನ್ನು ಮತ್ತಷ್ಟು ಹೆಚ್ಚಿಸಿದ್ದು "ಸಂಸತ್ತು ಸರ್ವೋಚ್ಚ" ಎಂದು ಪುನರುಚ್ಚರಿಸಿದ್ದಾರೆ.

"ಚುನಾಯಿತ ಪ್ರತಿನಿಧಿಗಳು ಸಂವಿಧಾನ ಹೇಗಿರುತ್ತದೆ ಎಂಬುದರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರಾಗಿರುತ್ತಾರೆ ಮತ್ತು ಅದರ ಮೇಲೆ ಯಾವುದೇ ಅಧಿಕಾರವಿರುವುದಿಲ್ಲ. ಸಂಸತ್ತು ಸರ್ವೋಚ್ಚ" ಎಂದು ನ್ಯಾಯಾಂಗ ಮತ್ತು ಕಾರ್ಯಾಂಗದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನ ಎರಡು ವಿರೋಧಾತ್ಮಕ ಹೇಳಿಕೆಗಳನ್ನು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. "ಒಂದು ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಪೀಠಿಕೆ ಸಂವಿಧಾನದ ಭಾಗವಲ್ಲ ಎಂದು ಹೇಳುತ್ತದೆ (ಗೋರ್ಕನಾಥ್ ಪ್ರಕರಣ) ಮತ್ತು ಇನ್ನೊಂದು ಪ್ರಕರಣದಲ್ಲಿ ಅದು ಸಂವಿಧಾನದ ಭಾಗವಾಗಿದೆ (ಕೇಶವಾನಂದ ಭಾರತಿ) ಎಂದು ಹೇಳುತ್ತದೆ."

ಜಗದೀಪ್ ಧನ್ಕರ್, ಪ್ರಜಾಪ್ರಭುತ್ವದಲ್ಲಿ ಸಂಭಾಷಣೆಯ ಮಹತ್ವವನ್ನು ಅವರು ಮತ್ತಷ್ಟು ಒತ್ತಿ ಹೇಳಿದ್ದು ಪ್ರಜಾಪ್ರಭುತ್ವವನ್ನು ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

"ನಮ್ಮ ಮೌನವು ತುಂಬಾ ಅಪಾಯಕಾರಿಯಾಗಿರಬಹುದು. ಚಿಂತನಶೀಲ ಮನಸ್ಸುಗಳು ನಮ್ಮ ಪರಂಪರೆಯನ್ನು ಸಂರಕ್ಷಿಸುವಲ್ಲಿ ಕೊಡುಗೆ ನೀಡಬೇಕು. ಸಂಸ್ಥೆಗಳನ್ನು ಹಾಳುಮಾಡಲು ಅಥವಾ ವ್ಯಕ್ತಿಗಳನ್ನು ಕಳಂಕಿಸಲು ನಾವು ಅನುಮತಿಸುವುದಿಲ್ಲ. ಸಾಂವಿಧಾನಿಕ ಪ್ರಾಧಿಕಾರದ ಪ್ರತಿಯೊಂದು ಮಾತು ಸಂವಿಧಾನದಿಂದ ಮಾರ್ಗದರ್ಶಿಸಲ್ಪಡುತ್ತದೆ."

"ನಮ್ಮ ಭಾರತೀಯತೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಮ್ಮ ಪ್ರಜಾಪ್ರಭುತ್ವವು ಅಡ್ಡಿಪಡಿಸುವಿಕೆಯನ್ನು ಸಹಿಸಿಕೊಳ್ಳಬಹುದು ಹೇಗೆ? ಸಾರ್ವಜನಿಕ ಆಸ್ತಿಯನ್ನು ಸುಡಲಾಗುತ್ತಿದೆ. ಸಾರ್ವಜನಿಕ ಸುವ್ಯವಸ್ಥೆ ಹಾಳಾಗುತ್ತಿದೆ. ನಾವು ಈ ಶಕ್ತಿಗಳನ್ನು ತಟಸ್ಥಗೊಳಿಸಬೇಕು. ಈ ಉದ್ದೇಶ ಸಾಧಿಸಲು ಮೊದಲು ಸಮಾಲೋಚನೆಯ ಮೂಲಕ ಯತ್ನಿಸಬೇಕು, ನಂತರ ಕಠಿಣ ಕ್ರಮ ಅಗತ್ಯವಿದ್ದರೆ ಅದನ್ನೂ ಕೈಗೊಳ್ಳಬೇಕು" ಎಂದು ಧನ್ಕರ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಲವಾರು ನಾಯಕರು ಮತ್ತು ಉಪರಾಷ್ಟ್ರಪತಿಗಳು ಇತ್ತೀಚೆಗೆ ಸುಪ್ರೀಂ ಕೋರ್ಟ್ ತನ್ನ ಮಿತಿಯನ್ನು ಮೀರಿ ಕಾರ್ಯಾಂಗದ ಕ್ಷೇತ್ರವನ್ನು ಅತಿಕ್ರಮಿಸಿದೆ ಎಂದು ಆರೋಪಿಸಿದ್ದರು.

ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಬಿಜೆಪಿ ನಾಯಕರ ಒಂದು ವರ್ಗದ ನ್ಯಾಯಾಂಗ ಅತಿಕ್ರಮಣ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್‌ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಜಗದೀಪ್ ಧನ್ಕರ್ ಈ ಹೇಳಿಕೆ ನೀಡಿದ್ದಾರೆ.

ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಮತ್ತು ಅರೆಸೈನಿಕ ಪಡೆಗಳ ನಿಯೋಜನೆಯನ್ನು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ಆರ್. ಗವಾಯಿ, "ಇದನ್ನು ವಿಧಿಸಲು ನಾವು ರಾಷ್ಟ್ರಪತಿಗಳಿಗೆ ಆದೇಶ ಹೊರಡಿಸಬೇಕೆಂದು ನೀವು ಬಯಸುತ್ತೀರಾ? ಈಗಾಗಲೇ, ನಾವು ಕಾರ್ಯಾಂಗದ ಮೇಲೆ ಅತಿಕ್ರಮಣ ಆರೋಪಗಳನ್ನು ಎದುರಿಸುತ್ತಿದ್ದೇವೆ" ಎಂದು ಹೇಳಿದ್ದರು.

ರಾಜ್ಯಗಳು ಅಂಗೀಕರಿಸಿದ ಮಸೂದೆಗಳಿಗೆ ರಾಷ್ಟ್ರಪತಿಗಳು ಸಹಿ ಹಾಕಲು ಸಮಯ ನಿಗದಿಪಡಿಸಿದ್ದಕ್ಕಾಗಿ ಉಪರಾಷ್ಟ್ರಪತಿ ಸುಪ್ರೀಂ ಕೋರ್ಟ್ ನ್ನು ಇತ್ತೀಚೆಗೆ ಟೀಕಿಸಿದ್ದರು.

ನ್ಯಾಯಾಂಗಕ್ಕೆ ಹೊಣೆಗಾರಿಕೆಯನ್ನು ಕೋರಿದ ಧನ್ಕರ್, "ನಮ್ಮಲ್ಲಿ ಶಾಸನ ಮಾಡುವ, ಕಾರ್ಯಾಂಗ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ನ್ಯಾಯಾಧೀಶರಿದ್ದಾರೆ ಮತ್ತು ನೆಲದ ಕಾನೂನು ಅವರಿಗೆ ಅನ್ವಯಿಸದ ಕಾರಣ ಅವರಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ" ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT