ಸ್ಯಾಮ್ಯುಯೆಲ್ ನಥಾನಿಯಲ್ 
ದೇಶ

ಪಹಲ್ಗಾಮ್ ಉಗ್ರ ದಾಳಿ: ಕಲ್ಮಾ ಓದಲು ವಿಫಲ; ಮಗಳ ಮುಂದೆ ಸ್ಯಾಮ್ಯುಯೆಲ್ ನಥಾನಿಯಲ್ ತಲೆಗೆ ಗುಂಡಿಕ್ಕಿದ ಉಗ್ರರು!

ಭಯೋತ್ಪಾದಕರು ಮೊದಲು ಸ್ಯಾಮ್ಯುಯೆಲ್ ನನ್ನು ಮೊಣಕಾಲುಗಳ ಮೇಲೆ ಕೂರಿಸಿದರು ಎಂದು ಅವರ ಸಹೋದರ ವಿಕಾಸ್ ಕುಮಾವತ್ ಹೇಳಿದ್ದಾರೆ.

ಇಂದೋರ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಬೈಸರನ್ ಕಣಿವೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಇಂದೋರ್‌ನ ಸುಶೀಲ್ ನಥಾನಿಯಲ್ ಕೂಡ ಸಾವನ್ನಪ್ಪಿದರು. ಅವರ ಮಗಳು ಆಕಾಂಕ್ಷಾ ಗಾಯಗೊಂಡಿದ್ದಾರೆ. ಅವರು ತಮ್ಮ ಪತ್ನಿ ಜೆನ್ನಿಫರ್ ಹುಟ್ಟುಹಬ್ಬವನ್ನು ಆಚರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದರು. ಭಯೋತ್ಪಾದಕರು ಮೊದಲು ಸುಶೀಲ್‌ನನ್ನು ಮೊಣಕಾಲುಗಳ ಮೇಲೆ ಕೂರಿಸಿ ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮಧ್ಯಪ್ರದೇಶದ ಅಲಿರಾಜ್‌ಪುರದ ಜೋಬಾಟ್‌ನ ನಿವಾಸಿ ಸುಶೀಲ್ ನಥಾನಿಯಲ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿದ ನಂತರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬ ಸದಸ್ಯರು ಪ್ರಧಾನಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಕೊಲ್ಲಬೇಕು ಎಂದು ಹೇಳಿದ್ದಾರೆ.

ಭಯೋತ್ಪಾದಕರು ಮೊದಲು ಸ್ಯಾಮ್ಯುಯೆಲ್ ನನ್ನು ಮೊಣಕಾಲುಗಳ ಮೇಲೆ ಕೂರಿಸಿದರು ಎಂದು ಅವರ ಸಹೋದರ ವಿಕಾಸ್ ಕುಮಾವತ್ ಹೇಳಿದ್ದಾರೆ. ಅದಾದ ನಂತರ, ಅವರನ್ನು ಕಲ್ಮಾ ಪಠಿಸುವಂತೆ ಒತ್ತಾಯಿಸಲಾಯಿತು. ಅವನು ತನ್ನ ಧರ್ಮ ಕ್ರಿಶ್ಚಿಯನ್ ಎಂದು ಹೇಳಿದಾಗ, ಭಯೋತ್ಪಾದಕರು ಅವನಿಗೆ ಗುಂಡಿಕ್ಕಿ ಕೊಂದರು. ಮಾಹಿತಿಯ ಪ್ರಕಾರ, ಸುಶೀಲ್ ಅವರ ಮಗಳ ಮೇಲೂ ಗುಂಡು ಹಾರಿಸಲಾಗಿದ್ದು, ಅದು ಅವರ ಕಾಲಿಗೆ ತಗುಲಿದೆ. ಘಟನೆಗೂ ಮುನ್ನ, ಸುಶೀಲ್ ತನ್ನ ಹೆಂಡತಿಯನ್ನು ಬಚ್ಚಿಟ್ಟು ನಂತರ ಸ್ವತಃ ಭಯೋತ್ಪಾದಕರ ಮುಂದೆ ನಿಂತು ಮಾತನಾಡಿದ್ದರು.

ಸುಶೀಲ್ ನಥಾನಿಯಲ್ ಅವರ ಕುಟುಂಬ ಮೂಲತಃ ಮಧ್ಯಪ್ರದೇಶದ ಅಲಿರಾಜ್‌ಪುರದ ಜೋಬಾಟ್‌ನಿಂದ ಬಂದಿದೆ. ಆದಾಗ್ಯೂ, ಅವರು ಪ್ರಸ್ತುತ ಇಂದೋರ್‌ನ MR 10 ರ ಅಭಿನಂದನ್ ನಗರದಲ್ಲಿ ವಾಸಿಸುತ್ತಿದ್ದಾರೆ. ಸುಶೀಲ್ ಅವರನ್ನು ಅಲಿರಾಜ್‌ಪುರದಲ್ಲಿರುವ ಎಲ್‌ಐಸಿಯ ಉಪಗ್ರಹ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ನೇಮಿಸಲಾಗಿತ್ತು. ಸುಶೀಲ್ ನಾಲ್ಕು ದಿನಗಳ ಹಿಂದೆ ತಮ್ಮ ಪತ್ನಿ ಜೆನ್ನಿಫರ್ ಹುಟ್ಟುಹಬ್ಬವನ್ನು ತಮ್ಮ 21 ವರ್ಷದ ಮಗ ಆಸ್ಟನ್ ಮತ್ತು 30 ವರ್ಷದ ಮಗಳು ಆಕಾಂಕ್ಷಾ ಜೊತೆ ಆಚರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್