ವಿನಯ್ ದಂಪತಿಯದ್ದು ಎನ್ನಲಾದ ವಿಡಿಯೋ 
ದೇಶ

Pahalgam terror attack: ನೌಕಪಡೆ ಅಧಿಕಾರಿ ವಿನಯ್ ದಂಪತಿಯದ್ದು ಎನ್ನಲಾದ ವಿಡಿಯೋ ನಕಲಿ! ಮಾಧ್ಯಮಗಳ ವಿರುದ್ಧ ಕಿಡಿ

ಆ ವಿಡಿಯೋದಲ್ಲಿರುವುದು ನಾವೆಂದು ಟ್ರಾವೆಲ್ ಇನ್ಫ್ಲೋಯೆನ್ಸರ್ ಗಳಾದ ಆಶಿಶ್ ಸೆಹ್ರಾವತ್ ಮತ್ತು ಯಶಿಕಾ ಶರ್ಮಾ ಖಚಿತಪಡಿಸಿದ್ದಾರೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೂ ಮುನ್ನಾ ನೌಕಪಡೆ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೊವಾಮಿ ಅವರದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಆದರೆ, ಅದರಲ್ಲಿ ಇರುವುದು ಅವರಲ್ಲ ಬೇರೆಯವರು ಎಂಬುದು ಇದೀಗ ತಿಳಿದುಬಂದಿದೆ.

ಹೌದು. ಕಾಶ್ಮೀರದ ಬೈಸರನ್ ಕಣಿವೆಯ ಸುಂದರವಾದ ಪರಿಸರದಲ್ಲಿ ಚಿತ್ರೀಕರಿಸಲಾದ 19-ಸೆಕೆಂಡ್ ಗಳ ವಿಡಿಯೋದಲ್ಲಿ ಜನಪ್ರಿಯ ಕೋಕ್ ಸ್ಟುಡಿಯೋ ಟ್ರ್ಯಾಕ್ ಜೋಲ್‌ಗೆ ದಂಪತಿಗಳು ನೃತ್ಯ ಮಾಡುತ್ತಿರುವುದಿದೆ. ಇದು ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೂ ಮುನ್ನಾ ಲೆಫ್ಟಿನೆಂಟ್ ಮತ್ತು ಅವರ ಪತ್ನಿಯ ಕೊನೆಯ ವೀಡಿಯೊ" ಎಂದು ಅನೇಕರು ತಪ್ಪಾಗಿ ಫೋಸ್ಟ್ ಮಾಡುತ್ತಿದ್ದಾರೆ.

ಆ ವಿಡಿಯೋದಲ್ಲಿರುವುದು ನಾವೆಂದು ಟ್ರಾವೆಲ್ ಇನ್ಫ್ಲೋಯೆನ್ಸರ್ ಗಳಾದ ಆಶಿಶ್ ಸೆಹ್ರಾವತ್ ಮತ್ತು ಯಶಿಕಾ ಶರ್ಮಾ ಖಚಿತಪಡಿಸಿದ್ದಾರೆ. ಏಪ್ರಿಲ್ 14 ರಂದು ಅವರ ಕಾಶ್ಮೀರ ಪ್ರವಾಸದ ಸಮಯದಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಸೆಹ್ರಾವತ್ ಹೇಳಿದ್ದಾರೆ. ತಮ್ಮ ಹೇಳಿಕೆ ಸಾಕ್ಷಿಕರಿಸುವಂತೆ ವೀಡಿಯೊದ ಮೆಟಾಡೇಟಾವನ್ನು ತೋರಿಸುವ ಸ್ಕ್ರೀನ್‌ಶಾಟ್ ಅನ್ನು ಸಹ ಒದಗಿಸಿದ್ದಾರೆ.

ಏಪ್ರಿಲ್ 22 ರಂದು ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಕಾಕತಾಳೀಯ ಎಂಬಂತೆ ಅದೇ ದಿನ ಪಹಲ್ಗಮ್ ಉಗ್ರರ ದಾಳಿ ನಡೆದಿತ್ತು. ತದನಂತರ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ನಾವು ಸುರಕ್ಷಿತವಾಗಿದ್ದು, ಜೀವಂತವಾಗಿದ್ದೇವೆ ಎಂದು ಅವರು ಪೋಸ್ಟ್ ಮೂಲಕ ತಿಳಿಸಿದ್ದಾರೆ.

'Hey guys,ನಾವು ಜೀವಂತವಾಗಿದ್ದೇವೆ. ನಾವು ಇತ್ತೀಚಿಗೆ ಪೋಸ್ಟ್ ಮಾಡಲಾದ ವಿಡಿಯೋ ದುರಾದೃಷ್ಟವಶಾತ್ ಸಾಕಷ್ಟು ತೊಂದರೆಗೀಡಾದ ಕಾರಣದಿಂದ ಅದನ್ನು ಡಿಲೀಟ್ ಮಾಡಿದ್ದೇವೆ. ಈ ವೀಡಿಯೊವನ್ನು ಹಲವಾರು ಪತ್ರಿಕೆಗಳು ಸುದ್ದಿ ವಾಹಿನಿಗಳು ದುರುಪಯೋಗಪಡಿಸಿಕೊಂಡಿವೆ. ಇದು ದಿವಂಗತ ವಿನಯ್ ಸರ್ ಮತ್ತು ಅವರ ಪತ್ನಿಯ ಕೊನೆಯ ವೀಡಿಯೊ ಎಂದು ತಪ್ಪಾಗಿ ಹೇಳಿಕೊಂಡಿದ್ದಾರೆ ಎಂದು ದಂಪತಿಗಳು ಬರೆದುಕೊಂಡಿದ್ದಾರೆ.

ನಾವು ಆ ಘಟನೆಯಲ್ಲಿ ಭಾಗಿಯಾಗಿಲ್ಲ, ಆದರೆ ಅದನ್ನು ಹೇಗೆ ಅಥವಾ ಯಾವ ಮಾಧ್ಯಮ ತೆಗೆದುಕೊಂಡಿದೆ ಎಂಬುದು ನನಗೆ ತಿಳಿದಿಲ್ಲ. ಹೇಗೋ ನಮ್ಮ ವೀಡಿಯೊ ಎಲ್ಲಾ ಸುದ್ದಿ ಚಾನೆಲ್‌ಗಳಲ್ಲಿ ವೈರಲ್ ಆಗಿದೆ ಎಂದು ಶರ್ಮಾ ಹೇಳಿದ್ದಾರೆ.

ಭಾರತದಲ್ಲಿ ಪ್ರೆಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿಲ್ಲ, ಆದರೆ ನಾವು ಬೆಳಿಗ್ಗೆಯಿಂದ ತುಂಬಾ ತೊಂದರೆಗೀಡಾಗಿದ್ದೇವೆ. ವಿನಯ್ ಕುಟುಂಬಕ್ಕೆ ನಮ್ಮ ಸಂತಾಪಗಳು ಆದರೆ ನಾವು ಜೀವಂತವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ವೀಡಿಯೊದ ಕೆಳಗಿನ ಬಲಭಾಗದಲ್ಲಿ, ದಿವಂಗತ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಎಂದು ಕರೆಯುವ ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT