ಪಾಕಿಸ್ತಾನ ಬೆಂಬಲಿಗರು  
ದೇಶ

ವಿಭಜನೆಯ ಅಂಚಿನಲ್ಲಿ ಪಾಕಿಸ್ತಾನ: ಭಾರತದ ವಿರುದ್ಧ ದ್ವೇಷದ ಮೂಲಕ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ- RSS

ಕ್ರೌರ್ಯಕ್ಕೆ ಮಿತಿಯಿಲ್ಲದಂತಾಗಿದೆ. ಆದ್ದರಿಂದ, ಎಷ್ಟೇ ಖಂಡಿಸಿದರೂ ಸಾಕಾಗಲ್ಲ. ಇದರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವವರಿಗೆ ತಕ್ಕ ಪಾಠ ಕಲಿಸಬೇಕು.

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ನಾಯಕ ಇಂದ್ರೇಶ್ ಕುಮಾರ್, ಇದು "ನಾಚಿಕೆಗೇಡಿನ, ಅಸಹ್ಯ ಮತ್ತು ಅವಮಾನಕರ" ಎಂದು ಬಣ್ಣಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ಕ್ರೌರ್ಯಕ್ಕೆ ಮಿತಿಯಿಲ್ಲದಂತಾಗಿದೆ. ಆದ್ದರಿಂದ, ಎಷ್ಟೇ ಖಂಡಿಸಿದರೂ ಸಾಕಾಗಲ್ಲ. ಇದರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿರುವವರಿಗೆ ತಕ್ಕ ಪಾಠ ಕಲಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲು ನಾವು ಹಿಂದೂಸ್ತಾನಿಗಳು ಎಂದು ಧ್ವನಿ ಎತ್ತಬೇಕು. ನಂತರ ನಾವು ಕಾಶ್ಮೀರಿ, ಡೋಗ್ರಿ, ಪಂಡಿತ್ ಅಂತಾ ಹೇಳಬೇಕು. ಈ ಧ್ವನಿಯೊಂದಿಗೆ ಸೂಕ್ತ ಪ್ರತಿಕ್ರಿಯೆ ನೀಡಬೇಕಾಗಿದೆ ಎಂದರು.

ಸಿಂಧ್, ಬಲೂಚಿಸ್ತಾನ್, ಖೈಬರ್ ಪಖ್ತುಂಖ್ವಾ, ಪಿಒಜೆಕೆ ಮತ್ತು ಪಂಜಾಬ್‌ನಂತಹ ಪ್ರದೇಶಗಳು ಸ್ವಾತಂತ್ರ್ಯವನ್ನು ಬಯಸುತ್ತಿರುವಾಗ ಪಾಕಿಸ್ತಾನ ವಿಭಜನೆಯ ಅಂಚಿನಲ್ಲಿದೆ. ಭಾರತದ ವಿರುದ್ಧ ದ್ವೇಷವನ್ನು ಬೆಳೆಸುವ ಪಾಕಿಸ್ತಾನದ ಪ್ರಯತ್ನಗಳು ಅದರ ಪತನವನ್ನು ತಡೆಯಲು ಆಗಲ್ಲ ಎಂದು ಹೇಳಿದರು.

ಸಿಂಧ್, ಬಲೂಚಿಸ್ತಾನ್, ಖೈಬರ್ ಪಖ್ತುಂಖ್ವಾ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಂಜಾಬ್ ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಕೋರುತ್ತಿವೆ. ಪಾಕಿಸ್ತಾನ ವಿಭಜನೆಯ ಅಂಚಿನಲ್ಲಿದೆ. ಭಾರತದ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತೇವೆ ಎಂದು ಅವರು ಭಾವಿಸುತ್ತಿದ್ದಾರೆ ಆದರೆ ಇದು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡರೊಬ್ಬರು, ಇತ್ತೀಚಿನ ಭಯೋತ್ಪಾದಕ ಘಟನೆಯ ಬಗ್ಗೆ ತೀವ್ರ ತನಿಖೆಯ ಅಗತ್ಯವನ್ನು ಒತ್ತಿ ಹೇಳಿದರು.

ಕಳೆದ 30-40 ವರ್ಷಗಳಲ್ಲಿ, ಅಸಂಖ್ಯಾತ ಅಮಾಯಕರು ಕೊಲ್ಲಲ್ಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯಲ್ಲಿ, ಯಾರೂ ಗುರ್ಬಾನಿ ಅಥವಾ ಗೀತಾವನ್ನು ಪಠಿಸಿಲ್ಲ. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಎಂದು ನಾವು ನಿಜವಾಗಿಯೂ ನಂಬಿದರೆ, ಈ ತತ್ವವನ್ನು ನಿರಂತರವಾಗಿ ಎತ್ತಿಹಿಡಿಯಬೇಕು. ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಉಳಿದ ಭಾಗಗಳು ಎಲ್ಲಾ ರೀತಿಯ ಭಯೋತ್ಪಾದನೆಯಿಂದ ನಿಸ್ಸಂದಿಗ್ಧವಾಗಿ ಬೇರ್ಪಡಿಸಬೇಕೆಂದು ಅವರು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT