ಡೇ ಕೇರ್ ನಲ್ಲಿ ಮಗುವಿನ ಮೇಲೆ ಹಲ್ಲೆ 
ದೇಶ

Noida Daycare Horror: 15 ತಿಂಗಳ ಮಗುವಿಗೆ ಕಚ್ಚಿ, ಥಳಿಸಿ, ನೆಲಕ್ಕೆ ಕುಕ್ಕಿ ವಿಕೃತಿ ಮೆರೆದ ಕೆಲಸದಾಕೆ; Video!

ಡೇ ಕೇರ್‌ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹೊಡೆದು ನೆಲಕ್ಕೆ ಎಸೆದು ಕೆಲಸದಾಕೆ ವಿಕೃತಿ ಮೆರೆದಿರುವ ದಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ. ನೀವು ಉದ್ಯೋಗಸ್ಥರಾಗಿದ್ದರೆ ನಿಮ್ಮ ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡುತ್ತಿದ್ದರೆ, ನೀವು ಸುದ್ದಿಯನ್ನು ನೋಡಲೇಬೇಕು.

ನೋಯ್ಡಾ: ಡೇ ಕೇರ್‌ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹೊಡೆದು ನೆಲಕ್ಕೆ ಎಸೆದು ಕೆಲಸದಾಕೆ ವಿಕೃತಿ ಮೆರೆದಿರುವ ದಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ. ನೀವು ಉದ್ಯೋಗಸ್ಥರಾಗಿದ್ದರೆ ನಿಮ್ಮ ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡುತ್ತಿದ್ದರೆ, ನೀವು ಸುದ್ದಿಯನ್ನು ನೋಡಲೇಬೇಕು. ನೋಯ್ಡಾ ಸೆಕ್ಟರ್ -137ರ ಸೊಸೈಟಿಯಲ್ಲಿರುವ ಡೇ ಕೇರ್‌ನಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದ್ದು ಇದು ಎಲ್ಲರನ್ನೂ ಚಿಂತೆಗೀಡು ಮಾಡಿದೆ.

ಡೇ ಕೇರ್ ನಲ್ಲಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆಯ ದೃಶ್ಯ ಸೆರೆಯಾಗಿದ್ದು ಬೆಚ್ಚಿಬೀಳುವಂತೆ ಮಾಡಿದೆ. ಕೆಲಸದಾಕೆಯೊಬ್ಬಳು 15 ತಿಂಗಳ ಮುಗ್ಧ ಬಾಲಕಿಯ ಕಪಾಳಕ್ಕೆ ಹೊಡೆದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೆ ಕಚ್ಚಿ, ಪ್ಲಾಸ್ಟಿಕ್ ಬೆಲ್ಟ್‌ನಿಂದ ಹೊಡೆದು ನೆಲಕ್ಕೆ ಎಸೆದಿದ್ದಾಳೆ. 2025ರ ಆಗಸ್ಟ್ 4ರಂದು ಘಟನೆ ನಡೆದಿದೆ. ಮಗುವನ್ನು ಡೇ ಕೇರ್ ನಿಂದ ಮನೆಗೆ ಕರೆದುಕೊಂಡು ಬಂದ ನಂತರ ಮಗು ನಿರಂತರವಾಗಿ ಅಳುತ್ತಿತ್ತು. ಬಟ್ಟೆ ಬದಲಾಯಿಸುವಾಗ ಬಾಲಕಿಯ ಎರಡೂ ತೊಡೆಗಳ ಮೇಲೆ ಕಚ್ಚಿರುವ ಗುರುತನ್ನು ತಾಯಿ ನೋಡಿದ್ದಾಳೆ. ಇವು ಹಲ್ಲುಗಳಿಂದ ಕಚ್ಚಿದ ಗುರುತುಗಳೆಂದು ವೈದ್ಯರು ಹೇಳಿದರು. ಅನುಮಾನದ ಮೇಲೆ, ಪೋಷಕರು ಡೇ ಕೇರ್‌ನ ಸಿಸಿಟಿವಿಯನ್ನು ನೋಡಿದಾಗ ಕೆಲಸದಾಕೆ ಬಾಲಕಿಯನ್ನು ಕ್ರೂರವಾಗಿ ಹೊಡೆದು ಎಸೆಯುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಪೋಷಕರು ಡೇ ಕೇರ್ ಮುಖ್ಯಸ್ಥರಿಗೆ ಮಾಹಿತಿ ನೀಡಿದಾಗ ಆರೋಪಿ ಕೆಲಸದಾಕೆ ವಿರುದ್ಧ ಕ್ರಮಕೈಗೊಳ್ಳುವ ಬದಲು ಡೇ ಕೇರ್ ಮುಖ್ಯಸ್ಥರು ಪೋಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಟರ್ -142 ಪೊಲೀಸ್ ಠಾಣೆ ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಪ್ರಕರಣ ಸಂಬಂಧ ಆರೋಪಿ ಕೆಲಸದಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?