ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಗರಾಜ್‌ನಲ್ಲಿ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ, ಶೂನ್ಯ ಸಹಿಷ್ಣುತೆಯಂತಹ ನೀತಿಗಳನ್ನು ತರುವ ಮೂಲಕ ಅತೀಕ್ ಅಹ್ಮದ್‌ನಂತಹ ಅಪರಾಧಿಗಳ ಹತ್ಯೆಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
2005 ರಲ್ಲಿ ದರೋಡೆಕೋರ ಅತಿಕ್ ಅಹ್ಮದ್ ಗುಂಡಿಗೆ ಪೂಜಾ ಪಾಲ್ ಪತಿ ರಾಜು ಪಾಲ್ ಬಲಿಯಾಗಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನ್ಯಾಯ ಒದಗಿಸಿದ್ದಕ್ಕಾಗಿ ಹಾಗೂ ತನ್ನ ಬೆಂಬಲಕ್ಕಾಗಿ ನಿಂತಿದ್ದಕ್ಕಾಗಿ ಪೂಜಾ ಧನ್ಯವಾದ ಅರ್ಪಿಸಿದರು.
'ವಿಷನ್ ಡಾಕ್ಯುಮೆಂಟ್ 2047' ಕುರಿತು 24 ಗಂಟೆಗಳ ಮ್ಯಾರಥಾನ್ ಚರ್ಚೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಶ್ರೀಮತಿ ಪೂಜಾ, "ನನ್ನ ಗಂಡನನ್ನು (ರಾಜು ಪಾಲ್) ಯಾರು ಕೊಂದರು ಎಂದು ಎಲ್ಲರಿಗೂ ತಿಳಿದಿದೆ. ನನಗೆ ನ್ಯಾಯ ಒದಗಿಸಿದ್ದಕ್ಕಾಗಿ ಮತ್ತು ಬೇರೆ ಯಾರೂ ಈ ಕೆಲಸ ಮಾಡಲು ಮುಂದಾಗದಿದ್ದಾಗ , ನನ್ನ ಮಾತು ಕೇಳಿದ್ದಕ್ಕಾಗಿ ನಾನು ಮುಖ್ಯಮಂತ್ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
"ಮುಖ್ಯಮಂತ್ರಿಯವರು ಪ್ರಯಾಗ್‌ರಾಜ್‌ನಲ್ಲಿ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದರು, ಇದು ಅತಿಕ್ ಅಹ್ಮದ್‌ನಂತಹ ಅಪರಾಧಿಗಳ ಹತ್ಯೆಗೆ ಕಾರಣವಾಯಿತು. ಇಂದು, ಇಡೀ ರಾಜ್ಯವೇ ಅವರನ್ನು ನಂಬಿಕೆಯಿಂದ ನೋಡುತ್ತಿದೆ" ಎಂದು ಅವರು ಹೇಳಿದರು.
ಅತಿಕ್ ಅಹ್ಮದ್‌ನಂತಹ ಅಪರಾಧಿಗಳ ವಿರುದ್ಧ ಯಾರೂ ಹೋರಾಡಲು ಬಯಸುವುದಿಲ್ಲ ಎಂದು ತಿಳಿಯತು. ಆದರೆ ನಾನು ಧ್ವನಿ ಎತ್ತಿದೆ... ಈ ಹೋರಾಟದಿಂದ ನಾನು ಆಯಾಸಗೊಂಡಾಗ, ಸಿಎಂ ಯೋಗಿ ಆದಿತ್ಯನಾಥ್ ನನಗೆ ನ್ಯಾಯ ಒದಗಿಸಿದರು ಎಂದು ತಿಳಿಸಿದರು.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮಾಜಿ ಶಾಸಕ ರಾಜು ಪಾಲ್ ಅವರನ್ನು ಜನವರಿ 25, 2005 ರಂದು, ಪೂಜಾ ಪಾಲ್ ಅವರನ್ನು ಮದುವೆಯಾದ ಕೆಲವು ದಿನಗಳ ನಂತರ ಗುಂಡಿಕ್ಕಿ ಕೊಲ್ಲಲಾಯಿತು.
2004 ರಲ್ಲಿ ಪ್ರಯಾಗ್‌ರಾಜ್ ಪಶ್ಚಿಮ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ರಾಜು ಅವರನ್ನು ಸೋಲಿಸಿದ್ದ ದರೋಡೆಕೋರ ಅತಿಕ್ ಅಹ್ಮದ್ ಅವರ ಸಹೋದರ ಅಶ್ರಫ್ ಅವರೊಂದಿಗಿನ ರಾಜಕೀಯ ದ್ವೇಷದ ಪರಿಣಾಮವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.