ಪ್ರಧಾನಿ ಮೋದಿ 
ದೇಶ

79ನೇ ಸ್ವಾತಂತ್ರ್ಯೋತ್ಸವ: ವರ್ಣರಂಜಿತ ಕೇಸರಿ ರುಮಾಲು ಧರಿಸಿ ಎಲ್ಲರ ಗಮನ ಸೆಳೆದ ಪ್ರಧಾನಿ ಮೋದಿ

ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೋದಿ ಶ್ವೇತವಸ್ತ್ರಧಾರಿಯಾಗಿ ಜೋಧ್ಪುರಿ ರುಮಾಲು ಧರಿಸುವುದು ವಾಡಿಕೆ.

ನವದೆಹಲಿ: ರಾಷ್ಟ್ರೀಯ ಹಬ್ಬಗಳಲ್ಲಿ ಭಾರತದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸುವ ಪದ್ಧತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲೂ ಮುಂದುವರೆಸಿದ್ದಾರೆ.

ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು, ಬಿಳಿ ಬಣ್ಣದ ಶರ್ಟ್, ಬಿಳಿ ಮತ್ತು ಕೇಸರಿ ಬಾರ್ಡರ್ ಇರುವ ಶಾಲು, ಕೇಸರಿ ಬಣ್ಣದ ಬಂದೆಜ್ ಸಫಾ ಪೇಟಾ ಧರಿಸಿದ್ದು, ಸತತ 12ನೇ ಬಾರಿಗೆ ದೆಹಲಿಯ ಕೆಂಪು ಕೋಟೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಲಿದ್ದಾರೆ.

ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೋದಿ ಶ್ವೇತವಸ್ತ್ರಧಾರಿಯಾಗಿ ಜೋಧ್ಪುರಿ ರುಮಾಲು ಧರಿಸುವುದು ವಾಡಿಕೆ. ಪ್ರಧಾನಮಂತ್ರಿಗಳಾದ ಬಳಿಕ ಮೋದಿಯವರು ಪ್ರತೀ ಬಾರಿ ರಾಷ್ಟ್ರೀಯ ಹಬ್ಬಗಳಲ್ಲಿ ಬಣ್ಣ ಬಣ್ಣದ ಜೋಧ್ಪುರಿ ರುಮಾಲುಗಳನ್ನು ಧರಿಸಿ ವಿಶೇಷ ಗಮನ ಸೆಳೆಯುತ್ತಾರೆ.

ಗಾಢ ಕೇಸರಿ ಬಣ್ಣದ ರುಮಾಲು ಮತ್ತು ಹಳದಿ ಶ್ವೇತ ಬಣ್ಣದ ವಸ್ತ್ರದೊಂದಿಗೆ ಶಿಸ್ತುಬದ್ಧವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿಯವರು ಎಂದಿನಂತೆ ಎಲ್ಲರಿಗೂ ಶುಭ ಕೋರುವಂತೆ, ಭಾರತೀಯ ಸಂಪ್ರದಾಯದಂತೆ ನಮಸ್ಕರಿಸುತ್ತಾ ಆಗಮಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಭಾರತದ ಜಲ ಬಾಂಬ್‌ಗೆ ಪಾಕ್ ನಡುಕ": ನಮ್ಮ ಪಾಲಿನ ನೀರು ಮುಟ್ಟಿದರೆ ಆ ಕೈಗಳನ್ನೇ ಕತ್ತರಿಸುತ್ತೇವೆ- ಶತ್ರು ರಾಷ್ಟ್ರದಿಂದ ಮತ್ತೆ ಗೊಡ್ಡು ಬೆದರಿಕೆ..!

'One Nation, One Election' ಮಸೂದೆ ಮತ್ತಷ್ಟು ವಿಳಂಬ?: ಮುಂಗಾರು ಅಧಿವೇಶನದಲ್ಲೂ JPC ವರದಿ ಅನುಮಾನ..!

ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿ: ಪ್ರಧಾನಿ ಮೋದಿಗೆ ಮತ್ತೆ ಅಮೆರಿಕ ಆಹ್ವಾನ, ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ..!

JDS ನಲ್ಲಿ ಇರೋದೆ 18 ಶಾಸಕರು, ಅವರಿಗೆ 70-80 ಕ್ಷೇತ್ರ ಬೇಕಂತೆ! ಸ್ವರೂಪ್ ರಾಜಕೀಯಕ್ಕೆ ಹೊಸಬ- ಪ್ರತಿದಿನ 'ಲಾಟರಿ' ಹೊಡೆಯಲ್ಲ; ಪ್ರೀತಂಗೌಡ

BJP vs BJP: ಮುತ್ತಪ್ಪ ರೈ ಕೈಕೆಳಗೆ ಲೂಟಿ ಹೊಡೆಯುತ್ತಿದ್ದ ವ್ಯಕ್ತಿಗೆ ದುಡ್ಡಿನ ಅಮಲು; ವಿಶ್ವನಾಥ್ ವಿರುದ್ಧ ಡಿವಿಎಸ್ ವಾಗ್ದಾಳಿ