ಸಾಂದರ್ಭಿಕ ಚಿತ್ರ 
ದೇಶ

ಬಿಹಾರ: ಮದ್ಯ ಕಳ್ಳಸಾಗಣೆದಾರರಿಂದ ದಾಳಿ; ಹೋಮ್‌ ಗಾರ್ಡ್ ಸಾವು, ಕಾನ್‌ಸ್ಟೆಬಲ್‌ಗೆ ಗಾಯ

ಮೃತ ಹೋಮ್‌ ಗಾರ್ಡ್, ಗೋಪಾಲ್‌ಗಂಜ್ ಜಿಲ್ಲೆಯ ಕುಚಾಯ್‌ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಾಲ್ ಖಾರ್ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್ ಪಾಠಕ್(30) ಎಂದು ಗುರುತಿಸಲಾಗಿದೆ.

ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಶನಿವಾರ ಬೆಳಗಿನ ಜಾವ ಮದ್ಯ ಕಳ್ಳಸಾಗಣೆದಾರರ ಗುಂಪೊಂದು ದಾಳಿ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಹೋಮ್‌ ಗಾರ್ಡ್ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅಬಕಾರಿ ಇಲಾಖೆಯ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ.

ಮೃತ ಹೋಮ್‌ ಗಾರ್ಡ್, ಗೋಪಾಲ್‌ಗಂಜ್ ಜಿಲ್ಲೆಯ ಕುಚಾಯ್‌ಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಾಲ್ ಖಾರ್ ಗ್ರಾಮದ ನಿವಾಸಿ ಅಭಿಷೇಕ್ ಕುಮಾರ್ ಪಾಠಕ್(30) ಎಂದು ಗುರುತಿಸಲಾಗಿದೆ.

ಇಂದು ಬೆಳಗ್ಗೆ 4:30 ರ ಸುಮಾರಿಗೆ ಪಾಠಕ್ ಮತ್ತು ಇತರ ಅಬಕಾರಿ ಇಲಾಖೆಯ ಅಧಿಕಾರಿಗಳು, ನೆರೆಯ ಉತ್ತರ ಪ್ರದೇಶದಿಂದ ಅಕ್ರಮ ಮದ್ಯ ಸಾಗಿಸುತ್ತಿದ್ದರು ಎನ್ನಲಾದ ವಾಹನವನ್ನು ಬೆನ್ನಟ್ಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನಿಲ್ಲಿಸಲು ಪದೇ ಪದೇ ಸೂಚಿಸಿದರೂ, ಚಾಲಕ ವಾಹನ ನಿಲ್ಲಿಸಿಲ್ಲ.

ಅಬಕಾರಿ ತಂಡವು ಶೋಧ ಮುಂದುವರಿಸುತ್ತಿದ್ದಂತೆ, ಮದ್ಯ ಕಳ್ಳಸಾಗಣೆದಾರರು ವಿಶಾಂಭರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಪಾಯಾ ಎಂಜಿನಿಯರಿಂಗ್ ಕಾಲೇಜು ಬಳಿ ದಾಳಿ ನಡೆಸಿದರು. ಈ ದಾಳಿಯಲ್ಲಿ, ಗೃಹರಕ್ಷಕ ದಳದ ಒಬ್ಬ ಸಿಬ್ಬಂದಿ ಸಾವನ್ನಪ್ಪಿದರು ಮತ್ತು ಒಬ್ಬ ಅಬಕಾರಿ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ.

ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರನ್ನೂ ಗೋಪಾಲ್‌ಗಂಜ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅಭಿಷೇಕ್ ಕುಮಾರ್ ಪಾಠಕ್ ಮೃತಪಟ್ಟಿದ್ದಾರೆ ಎಂದು ಗೋಪಾಲ್‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಅವಧೇಶ್ ದೀಕ್ಷಿತ್ ಅವರು ತಿಳಿಸಿದ್ದಾರೆ.

ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು "ದಾಳಿಕೋರರನ್ನು ಬಂಧಿಸಲು ಪ್ರತ್ಯೇಕ ಪೊಲೀಸ್ ತಂಡಗಳು ಹುಡುಕಾಟ ಆರಂಭಿಸಿವೆ" ಎಂದು ಎಸ್ ಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

2016 ರಿಂದ ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಆದರೂ ಕಳ್ಳಸಾಗಣೆ ನಿರಂತರವಾಗಿ ಮುಂದುವರೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Big step or big threat? ರಷ್ಯಾದಿಂದ ತೈಲ ಖರೀದಿ, ಭಾರತಕ್ಕೆ ಮತ್ತೆ ಭಾರಿ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್!

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ 1,950 ಕೋಟಿ ರೂ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!

SCROLL FOR NEXT