ಪ್ರಶಾಂತ್ ಕಿಶೋರ್ 
ದೇಶ

Bihar elections 2025: BJP ಸೋಲಿಸಲು ಹಿಂದೂ-ಮುಸ್ಲಿಮರು ಒಂದಾಗಬೇಕು; Prashant Kishor

ಪ್ರಶಾಂತ್ ಕಿಶೋರ್ ರ ಈ ಘೋಷಣೆಯು ಸಾಂಪ್ರದಾಯಿಕವಾಗಿ ಅಲ್ಪಸಂಖ್ಯಾತರ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಆರ್‌ಜೆಡಿ-ಕಾಂಗ್ರೆಸ್-ಎಡ ಮೈತ್ರಿಕೂಟವನ್ನು ಕೆರಳಿಸಿದೆ ಎಂದು ವರದಿಯಾಗಿದೆ.

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲು ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಬೇಕು ಎಂದು ಖ್ಯಾತ ರಾಜಕೀಯ ತಂತ್ರಜ್ಞ ಮತ್ತು ಜನ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ನಿಮಿತ್ತ ತಮ್ಮ ಜನಸೂರಜ್ ಪಕ್ಷ ಆಯೋಜಿಸಿರುವ ಪಾದಯಾತ್ರೆಯಲ್ಲಿ ಮುಸ್ಲಿಂ ನಾಯಕರೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, 'ದೇಶದಲ್ಲಿನ ಅರ್ಧಕ್ಕಿಂತ ಹೆಚ್ಚು ಹಿಂದೂಗಳು ಸೈದ್ಧಾಂತಿಕವಾಗಿ ಬಿಜೆಪಿಯ ಜೊತೆ ಇಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ ಅವರನ್ನು ಅನುಸರಿಸುವ ಹಿಂದೂಗಳು ಬಿಜೆಪಿಯನ್ನು ಸೋಲಿಸಲು ಮುಸ್ಲಿಮರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂದು' ಒತ್ತಾಯಿಸಿದರು.

'ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟಿರುವ ಹಿಂದೂಗಳು ಮತ್ತು ಮುಸ್ಲಿಂ ಸಮುದಾಯದ ನಡುವೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಸೋಲಿಸಬೇಕು. ಎಲ್ಲಾ ಹಿಂದೂಗಳು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ವಾಸ್ತವವಾಗಿ, ಬಹುಪಾಲು ಹಿಂದೂಗಳು ಬಿಜೆಪಿಯೊಂದಿಗೆ ಇದ್ದಾರೆ ಎಂದು ಹೇಳಲಾಗುವುದಿಲ್ಲ. ನಾವು ಸಿದ್ಧಾಂತ ಆಧಾರಿತ ಮೈತ್ರಿಯನ್ನು ನಿರ್ಮಿಸಲು ನೋಡುತ್ತಿದ್ದೇವೆ" ಎಂದರು.

"ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಮೈತ್ರಿ ಮಾಡಿಕೊಳ್ಳಲು ನಾವು ಬಯಸುತ್ತೇವೆ. ಅಂತಹ ಸಮೀಕರಣವು ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದು ಎಂದು ಹೇಳಿದ್ದಾರೆ.

ಗಮನಾರ್ಹವಾಗಿ, ಒಂದು ವರ್ಷಕ್ಕಿಂತ ಕಡಿಮೆ ಹಳೆಯದಾದ ತಮ್ಮ ಪಕ್ಷವು 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 40 ಮುಸ್ಲಿಮರನ್ನು ಕಣಕ್ಕಿಳಿಸಲಿದೆ ಎಂದು ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.

ಪ್ರಶಾಂತ್ ಕಿಶೋರ್ ರ ಈ ಘೋಷಣೆಯು ಸಾಂಪ್ರದಾಯಿಕವಾಗಿ ಅಲ್ಪಸಂಖ್ಯಾತರ ಮತಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಆರ್‌ಜೆಡಿ-ಕಾಂಗ್ರೆಸ್-ಎಡ ಮೈತ್ರಿಕೂಟವನ್ನು ಕೆರಳಿಸಿದೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ, ಮನೆ ಖಾಲಿ ಮಾಡಲು ಬಿಗ್‌ಬಾಸ್‌ ಸ್ಪರ್ಧಿಗಳಿಗೆ 1 ಗಂಟೆ ಗಡುವು!

ತಮ್ಮದೇ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಹರಿಯಾಣ ಎಡಿಜಿಪಿ ಆತ್ಮಹತ್ಯೆ!

CM ಬದಲಾವಣೆ ಹೇಳಿಕೆಗಳಿಗೆ 'ಬ್ರೇಕ್ ಹಾಕಿ': ಕಾಂಗ್ರೆಸ್ ಹೈಕಮಾಂಡ್​​ಗೆ ಹಿರಿಯ ಸಚಿವರ ಆಗ್ರಹ

ಮಾರಣಾಂತಿಕ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ, ಬಿಜೆಪಿ ಸಂಸದನ ಆರೋಗ್ಯ ವಿಚಾರಿಸಿದ ಮಮತಾ

ಇದು 'ಮೋದಾನಿ-ನಿರ್ಭರ್ ಭಾರತ': ಸರ್ಕಾರದ ಹಳದಿ ಬಟಾಣಿ ಆಮದು ನೀತಿ ಟೀಕಿಸಿದ ಕಾಂಗ್ರೆಸ್

SCROLL FOR NEXT