ವಿದ್ಯುತ್ ತಗುಲಿ ಮೃತಪಟ್ಟವರು 
ದೇಶ

Hyderabad: ಶೋಭಾ ಯಾತ್ರೆ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಐವರು ಸಾವು, ನಾಲ್ವರಿಗೆ ಗಾಯ

ಸ್ಥಗಿತಗೊಂಡಿದ್ದ ರಥವನ್ನು ಮುಂದಕ್ಕೆ ತಳ್ಳುತ್ತಿದ್ದಾಗ ಓವರ್ ಹೆಡ್ ವಿದ್ಯುತ್ ತಂತಿಗಳು ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ.

ಹೈದರಾಬಾದ್: ಶ್ರೀಕೃಷ್ಣ ಶೋಭಾ ಯಾತ್ರೆ ವೇಳೆ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಐವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಉಪ್ಪಳ ಪೊಲೀಸ್ ವ್ಯಾಪ್ತಿಯ ರಾಮಂತಪುರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಸ್ಥಗಿತಗೊಂಡಿದ್ದ ರಥವನ್ನು ಮುಂದಕ್ಕೆ ತಳ್ಳುತ್ತಿದ್ದಾಗ ಓವರ್ ಹೆಡ್ ವಿದ್ಯುತ್ ತಂತಿಗಳು ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಕೃಷ್ಣ (21), ಶ್ರೀಕಾಂತ್ ರೆಡ್ಡಿ (35), ಸುರೇಶ್ ಯಾದವ್ (34), ರುದ್ರ ವಿಕಾಸ್ (39), ಮತ್ತು ರಾಜೇಂದ್ರ ರೆಡ್ಡಿ (45) ಎಂದು ಗುರುತಿಸಲಾಗಿದೆ.

ಶ್ರೀಕೃಷ್ಣ ಶೋಭಾ ಯಾತ್ರೆಯ ಮೆರವಣಿಗೆ ಮುಕ್ತಾಯವಾಗುತ್ತಿದ್ದಂತೆ ರಥವನ್ನು ಹೊತ್ತ ವಾಹನವೊಂದು ನಿಂತಿತು.

ಸುಮಾರು ಹತ್ತು ಮಂದಿ ಭಕ್ತರು ರಥವನ್ನು ಮುಂದಕ್ಕೆ ತಳ್ಳಲು ಯತ್ನಿಸಿದ್ದು, ಓವರ್ ಹೆಡ್ ವಿದ್ಯುತ್ ತಂತಿಗಳು ರಥಕ್ಕೆ ಸ್ಪರ್ಶಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ತದನಂತರ ಇತರ ಕಡೆಗಳಿಗೆ ಸ್ಥಳಾಂತರಿಸಲಾಗಿದೆ.

ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಸಾರಿಗೆ ಸಚಿವ byrati suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್, Video

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!