ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಬಿಹಾರದಲ್ಲಿ ರಾಜಕೀಯ ಕೋಲಾಹಲ ನಡೆಯುತ್ತಿದೆ. ಅಲ್ಲದೆ ಮತಗಳ್ಳತನ ಆರೋಪ ಮಾಡುತ್ತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ತಮ್ಮ ರ್ಯಾಲಿಗಳಲ್ಲಿ SIR ನಿಂದಾಗಿ ಬಿಹಾರದಲ್ಲಿ ಲಕ್ಷಾಂತರ ನಾಗರೀಕರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದರ ಮಧ್ಯೆ, ರಂಜು ದೇವಿ ಎಂಬ ಮಹಿಳೆ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಳಿಸಲಾಗಿದೆ ಎಂದು ದೂರು ನೀಡಿದ್ದರು. ಈಗ ಆ ಮಹಿಳೆಯ ಸತ್ಯ ಬೆಳಕಿಗೆ ಬಂದಿದೆ. ಇದರಲ್ಲಿ ರಾಹುಲ್‌ಗೆ ಆಕೆ ನೀಡಿದ ದೂರು ಸುಳ್ಳು ಎಂದು ತಿಳಿದುಬಂದಿದೆ. ರಂಜು ದೇವಿ ಮತ್ತು ಅವರ ಕುಟುಂಬದ 6 ಮಂದಿ ಹೆಸರು ಮತದಾರರ ಪಟ್ಟಿಯಲ್ಲಿದ್ದು ಯಾವುದೇ ಕುಟುಂಬದ ಸದಸ್ಯರ ಹೆಸರನ್ನು ಕಡಿತಗೊಳಿಸಲಾಗಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.
ರೋಹ್ತಾಸ್ ಜಿಲ್ಲೆಯ ನಿವಾಸಿ ರಂಜು ದೇವಿ, ತಮ್ಮ ವಾರ್ಡ್ ಕಾರ್ಯದರ್ಶಿ ತಮ್ಮ ಮತ್ತು ತಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದು ಹೇಳಿದ್ದರು ಎಂದು ಹೇಳಿದರು. ಇದರ ಜೊತೆಗೆ, ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಯಾತ್ರೆಗೆ ಬಂದು ನಾಯಕರನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿ ಎಂದು ಕಾರ್ಯದರ್ಶಿ ಹೇಳಿದರು. ಇದಾದ ನಂತರವೇ ತಾವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕಡಿತಗೊಳಿಸಲಾಗಿದೆ ಎಂದು ದೂರು ನೀಡಿದರು.
ತಾನು ಸ್ವತಃ ಮತಪಟ್ಟಿಯನ್ನು ನೋಡಿದಾಗ, ತನ್ನ ಮತ್ತು ತನ್ನ ಕುಟುಂಬದವರ ಹೆಸರು ಅದರಲ್ಲಿತ್ತು ಎಂದು ರಂಜು ದೇವಿ ಸ್ಪಷ್ಟಪಡಿಸಿದರು. ವಾರ್ಡ್ ಕಾರ್ಯದರ್ಶಿಯ ಸೂಚನೆಯ ಮೇರೆಗೆ ಮಾತ್ರ ದೂರು ನೀಡಲು ರಾಹುಲ್ ಗಾಂಧಿಯ ಬಳಿ ಹೋಗಿದ್ದೆ ಎಂದು ಅವರು ಹೇಳಿದರು. ತಾನೂ ಹಳ್ಳಿಯಿಂದ ಬಂದಿದ್ದು ಯಾರು ಏನೇ ಹೇಳಿದರೂ ಕೇಳುತ್ತೇವೆ ಎಂದು ಅವರು ಹೇಳಿದ್ದಾರೆ. ಇನ್ನು ವೀಡಿಯೊದಲ್ಲಿ, ರಾಹುಲ್ ಗಾಂಧಿ ರಂಜು ದೇವಿ ಅವರನ್ನು ನೀವು ಮೊದಲು ಮತ ಚಲಾಯಿಸಿದ್ದೀರಾ ಎಂದು ಕೇಳುತ್ತಾರೆ. ಅದಕ್ಕೆ ಮಹಿಳೆ ಹೌದು ಎಂದು ಉತ್ತರಿಸಿದಳು. ಅದಕ್ಕೆ ರಾಹುಲ್ ಆಶ್ಚರ್ಯ ವ್ಯಕ್ತಪಡಿಸಿದ್ದು ನಂತರ ಹೆಸರನ್ನು ಅಳಿಸಲಾಗಿದೆ ಎಂದು ಹೇಳಿದರು.
ವೀಡಿಯೊವನ್ನು ಹಂಚಿಕೊಳ್ಳುವಾಗ, ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ರಾಹುಲ್ ಗಾಂಧಿಯ ಮತ ಕಳ್ಳತನ ಪಿಆರ್ ದುರಂತವಾಗಿ ಬದಲಾಗುತ್ತಿದೆ ಎಂದು ಹೇಳಿದರು. ಮೊದಲನೆಯದಾಗಿ, ಚುನಾವಣಾ ಆಯೋಗವು ಅವರಿಗೆ ಎಲ್ಲಾ ಸಂಗತಿಗಳೊಂದಿಗೆ 7 ದಿನಗಳ ಗಡುವು ನೀಡಿತ್ತು. ಈಗ ಜನರು ಅವರನ್ನು ಎಲ್ಲಾ ಕಡೆಯಿಂದ ಬಹಿರಂಗಪಡಿಸುತ್ತಿದ್ದಾರೆ. ಬಳಕೆದಾರರು ಇದನ್ನು ಸ್ಕ್ರಿಪ್ಟ್ ಮಾಡಿದ PR ಎಂದು ಹೇಳಿದ್ದಾರೆ.