ವಿಜಯ್ 
ದೇಶ

2026ರ ತಮಿಳುನಾಡು ಚುನಾವಣೆಯಲ್ಲಿ ರಾಜ್ಯಾದ್ಯಂತ ಏಕಾಂಗಿ ಹೋರಾಟ: ವಿಜಯ್ ಪ್ರತಿಜ್ಞೆ

ತಮ್ಮ ಭಾಷಣದ ಉದ್ದಕ್ಕೂ, ವಿಜಯ್ ತಮಿಳುನಾಡು ರಾಜಕೀಯದಲ್ಲಿ ತಮ್ಮನ್ನು ತಾವು ಏಕೈಕ ಶಕ್ತಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸಿದರು.

ಮಧುರೈ: "ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ" ಎಂದು ಪುನರುಚ್ಚರಿಸಿದ ನಟ-ರಾಜಕಾರಣಿ ವಿಜಯ್ ಅವರು, ತಮಿಳುನಾಡಿನಲ್ಲಿ 2026ರ ಚುನಾವಣೆಯಲ್ಲಿ ಡಿಎಂಕೆ ಮತ್ತು ತಮಿಳಗ ವೆಟ್ರಿ ಕಳಗಂ(ಟಿವಿಕೆ) ನಡುವೆ ನೇರ ಹೋರಾಟ ನಡೆಯಲಿದೆ ಎಂದು ಗುರುವಾರ ಒತ್ತಿ ಹೇಳಿದರು.

ಇಂದು ಮಧುರೈ ಜಿಲ್ಲೆಯ ಪರಪತಿಯಲ್ಲಿ ನಡೆದ ಪಕ್ಷದ ಎರಡನೇ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಟಿವಿಕೆ ಮುಖ್ಯಸ್ಥ, ತಮಿಳುನಾಡು ರಾಜಕೀಯದ ಮೂರು ಪ್ರಮುಖ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿಯನ್ನು ತಮ್ಮ ಪಕ್ಷದ ಸೈದ್ಧಾಂತಿಕ ಎದುರಾಳಿ ಎಂದು ಬಿಂಬಿಸಿದ ಟಿವಿಕೆ ನಾಯಕ, ಅದು ತಮಿಳುನಾಡಿನ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ ಮತ್ತು ಆರ್‌ಎಸ್‌ಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ತಮಿಳುನಾಡು ಮೀನುಗಾರರ ಬಂಧನ ಮತ್ತು ನೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, ಕೇಂದ್ರ ಸರ್ಕಾರ ರಾಜ್ಯದ ಅಗತ್ಯಗಳ ಬಗ್ಗೆ ಅಸಡ್ಡೆ ಹೊಂದಿದೆ. ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಹೊಂದಿದೆ ಸಹ ಆರೋಪಿಸಿದರು.

ಇದೇ ವೇಳೆ ಆಡಳಿತರೂಢ ಡಿಎಂಕೆ ವಿರುದ್ಧವೂ ವಾಗ್ದಾಳಿ ನಡೆಸಿದ ವಿಜಯ್, "ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಹಿಳೆಯರು, ರೈತರು ಮತ್ತು ಮೀನುಗಾರರಿಗೆ ದ್ರೋಹ ಮಾಡಿದ್ದಾರೆ" ಎಂದು ಆರೋಪಿಸಿದರು.

ತಮ್ಮ ಭಾಷಣದ ಉದ್ದಕ್ಕೂ, ವಿಜಯ್ ತಮಿಳುನಾಡು ರಾಜಕೀಯದಲ್ಲಿ ತಮ್ಮನ್ನು ತಾವು ಏಕೈಕ ಶಕ್ತಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸಿದರು. ತನ್ನನ್ನು ತಾನು ವ್ಯಾಪಕ ಘರ್ಜನೆ ಮಾಡುವ ಸಿಂಹಕ್ಕೆ ಹೋಲಿಸಿಕೊಂಡು, ಟಿವಿಕೆ ಜನರ ಧ್ವನಿಯಾಗಿದೆ ಎಂದು ಹೇಳಿದರು.

ಟಿವಿಕೆ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ವಿಜಯ್ ಘೋಷಿಸಿದರು. ಇಡೀ ರಾಜ್ಯಾದ್ಯಂತ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೀಳಿಸುವ ಮೂಲಕ, ಟಿವಿಕೆಯ ಹೋರಾಟ ಕೆಲವು ಪ್ರದೇಶಗಳಿಗೆ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಮತ್ತು ಇದು ಪರಿವರ್ತನೆಯ ಗುರಿ ಹೊಂದಿದೆ ಎಂದು ಒತ್ತಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ