ಅಮಿತ್ ಶಾ  
ದೇಶ

Vice-President Polls: ವಿರೋಧ ಪಕ್ಷಗಳ ಅಭ್ಯರ್ಥಿ ನ್ಯಾ. ರೆಡ್ಡಿ ನಕ್ಸಲಿಸಂಗೆ 'ಸಹಾಯ'; ಅಮಿತ್ ಶಾ ಆರೋಪ

ಸುದರ್ಶನ್ ರೆಡ್ಡಿ ಅವರು ಎಡಪಂಥೀಯ ಉಗ್ರವಾದ ಮತ್ತು ನಕ್ಸಲಿಸಂ ಬೆಂಬಲಿಸುವ ಸಾಲ್ವಾ ಜುಡುಮ್ ತೀರ್ಪು ನೀಡದಿದ್ದರೆ, ದೇಶದಲ್ಲಿ ತೀವ್ರವಾದಿ ಎಡಪಂಥೀಯ ಚಳುವಳಿ 2020ಕ್ಕೂ ಮೊದಲೇ ಅಂತ್ಯವಾಗುತ್ತಿತ್ತು ಎಂದು ಹೇಳಿದರು.

ಕೊಚ್ಚಿ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರು ನಕ್ಸಲಿಸಂ ಅನ್ನು "ಬೆಂಬಲಿಸುತ್ತಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಶುಕ್ರವಾರ ಆರೋಪಿಸಿದ್ದಾರೆ.

ಮಲಯಾಳ ಮನೋರಮಾ ಸಮೂಹ ಶುಕ್ರವಾರ ಆಯೋಜಿಸಿದ್ದ ಮನೋರಮಾ ನ್ಯೂಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, ಸುದರ್ಶನ್ ರೆಡ್ಡಿ ಅವರು ಎಡಪಂಥೀಯ ಉಗ್ರವಾದ ಮತ್ತು ನಕ್ಸಲಿಸಂ ಬೆಂಬಲಿಸುವ ಸಾಲ್ವಾ ಜುಡುಮ್ ತೀರ್ಪು ನೀಡದಿದ್ದರೆ, ದೇಶದಲ್ಲಿ ತೀವ್ರವಾದಿ ಎಡಪಂಥೀಯ ಚಳುವಳಿ 2020ಕ್ಕೂ ಮೊದಲೇ ಅಂತ್ಯವಾಗುತ್ತಿತ್ತು ಎಂದು ಹೇಳಿದರು.

ಎಡಪಂಥೀಯರ ಒತ್ತಡದ ಮೇರೆಗೆ ಸುಪ್ರೀಂ ಕೋರ್ಟ್‌ನಂತಹ ವೇದಿಕೆಯನ್ನು ಬಳಸಿಕೊಂಡು ಎಡಪಂಥೀಯ ಉಗ್ರವಾದ ಮತ್ತು ನಕ್ಸಲ್‌ವಾದವನ್ನು ಬೆಂಬಲಿಸಿದ ಸುದರ್ಶನ್ ರೆಡ್ಡಿಯನ್ನು ಕಾಂಗ್ರೆಸ್ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಆದರೆ ಕೇರಳ ನಕ್ಸಲಿಸಂನ ಪರಿಣಾಮ ಅನುಭವಿಸಿದೆ. ಹೀಗಾಗಿ ಕೇರಳದಲ್ಲಿ ಪಕ್ಷದ ಗೆಲುವಿನ ಸಾಧ್ಯತೆ ಮತ್ತಷ್ಟು ಕಡಿಮೆಯಾಗಿದೆ ಎಂದು ಅಮಿತ್ ಶಾ ಹೇಳಿದರು.

"ಸುದರ್ಶನ್ ರೆಡ್ಡಿ ನಕ್ಸಲ್ ವಾದಕ್ಕೆ ಸಹಾಯ ಮಾಡಿದ ವ್ಯಕ್ತಿ. ಅವರು ಸಾಲ್ವಾ ಜುಡುಮ್ ತೀರ್ಪು ನೀಡಿದರು. ಸಾಲ್ವಾ ಜುಡುಮ್ ತೀರ್ಪು ನೀಡದಿದ್ದರೆ, 2020 ರ ವೇಳೆಗೆ ನಕ್ಸಲ್ ಭಯೋತ್ಪಾದನೆ ಕೊನೆಗೊಳ್ಳುತ್ತಿತ್ತು. ಅವರು ಸಾಲ್ವಾ ಜುಡುಮ್ ತೀರ್ಪು ನೀಡಿದ ಸಿದ್ಧಾಂತದಿಂದ ಪ್ರೇರಿತರಾದ ವ್ಯಕ್ತಿ" ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.

2011ರಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುದರ್ಶನ್ ರೆಡ್ಡಿ ಮತ್ತು ಎಸ್‌ಎಸ್ ನಿಜ್ಜರ್ ಅವರ ದ್ವಿಸದಸ್ಯ ಪೀಠವು ಮಾವೋವಾದಿ ದಂಗೆಯನ್ನು ಎದುರಿಸಲು ಛತ್ತೀಸ್‌ಗಢ ಸರ್ಕಾರವು ಬುಡಕಟ್ಟು ಯುವಕರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ(ಎಸ್‌ಪಿಒ) ನೇಮಿಸಿದ ಸಾಲ್ವಾ ಜುಡುಮ್ ಅನ್ನು ವಿಸರ್ಜಿಸಿತು. ಈ ಸಂಘಟನೆಯು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಎಂದು ನ್ಯಾಯಪೀಠ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?