ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 
ದೇಶ

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಭ್ರಷ್ಟಾಚಾರ, ಅಪರಾಧ ಮತ್ತು ತೃಣಮೂಲ ಕಾಂಗ್ರೆಸ್ ಸಮಾನಾರ್ಥಕ ಪದಗಳು' ಎಂದು ಹೇಳಿದ್ದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಬ್ಯಾನರ್ಜಿ, "ನಾನು ಪ್ರಧಾನಿಯಿಂದ ಇದನ್ನು ನಿರೀಕ್ಷಿಸುವುದಿಲ್ಲ.

ಕೋಲ್ಕತ್ತಾ: ನನ್ನ ಕುರ್ಚಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನೀಡಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ. ನಮ್ಮನ್ನು "ಕಳ್ಳರು" ಎಂದು ಕರೆಯುವ ಮೂಲಕ ಇಡೀ ರಾಜ್ಯವನ್ನು ಅಗೌರವಿಸುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

'ಭ್ರಷ್ಟಾಚಾರ, ಅಪರಾಧ ಮತ್ತು ತೃಣಮೂಲ ಕಾಂಗ್ರೆಸ್ ಸಮಾನಾರ್ಥಕ ಪದಗಳು' ಎಂದು ಹೇಳಿದ್ದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಬ್ಯಾನರ್ಜಿ, "ನಾನು ಪ್ರಧಾನಿಯಿಂದ ಇದನ್ನು ನಿರೀಕ್ಷಿಸುವುದಿಲ್ಲ. ನಾನು ಅವರ ಕುರ್ಚಿಯನ್ನು ಗೌರವಿಸುತ್ತೇನೆ. ಆದರೆ ಅವರು ನಮ್ಮ ಕುರ್ಚಿಯನ್ನು ಗೌರವಿಸಬೇಕು. "ಬಂಗಾಳದಲ್ಲಿ ಕಳ್ಳರಿರುವುದರಿಂದ ಅನುದಾನ ನಿಲ್ಲಿಸಿದೆ" ಎಂದು ಪ್ರಧಾನಿ ಯಾಕೆ ಹೇಳಿದರು ಎಂದು ಪ್ರಶ್ನಿಸಿದರು.

ಆಗಸ್ಟ್ 22 ರಂದು ಕೋಲ್ಕತ್ತಾದ ಡಮ್ ಡಮ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕೇಂದ್ರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಳುಹಿಸುವ ಹಣ ಜನರಿಗೆ ತಲುಪುವುದಿಲ್ಲ ಆದರೆ ಸಂಪೂರ್ಣವಾಗಿ ಟಿಎಂಸಿ ಕಾರ್ಯಕರ್ತರು ಕಬಳಿಸುತ್ತಾರೆ ಎಂಬ ಆರೋಪದ ವಿರುದ್ಧ ಕಿಡಿಕಾರಿದ ಮಮತಾ, ಇದು ಪಶ್ಚಿಮ ಬಂಗಾಳದ ಜನರಿಗೆ ಮಾಡಿದ ಅಪಮಾನ ಎಂದು ಹೇಳಿದರು.

ಬುರ್ದ್ವಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾನರ್ಜಿ, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ನ್ಯಾಯಸಮ್ಮತ ಹಾಗೂ ಸಮಂಜಸವಾಗಿ ಅನುದಾನ ನೀಡುತ್ತಿಲ್ಲ. ಅದರ ಮಲತಾಯಿ ಧೋರಣೆಯಿಂದ ರಾಜ್ಯದ ಬೊಕ್ಕಸಕ್ಕೆ "ಭಾರಿ ಆಗಿದೆ ಎಂದು ಆರೋಪಿಸಿದರು.

ನಮ್ಮ ಆಡಳಿತದ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ. 76 ಮತ್ತು ನಗರ ಪ್ರದೇಶಗಳಲ್ಲಿ ಶೇ. 78 ರಷ್ಟು ನೀರು ಪೂರೈಸಿದ್ದೇವೆ. ಇದಕ್ಕಾಗಿ ರೂ. 38,000 ಕೋಟಿ ವೆಚ್ಚ ಮಾಡಿದ್ದೇವೆ. ಉಚಿತವಾಗಿ ಭೂಮಿ ನೀಡಿದ್ದೇವೆ. ಕೇಂದ್ರದಿಂದ ಇನ್ನೂ ರೂ. 65,000 ಕೋಟಿ ಬರಬೇಕಾಗಿದೆ. ಅವರು ಇಲ್ಲಿಂದ ತೆರಿಗೆ ಸಂಗ್ರಹಿಸುತ್ತಾರೆ. ಆದರೆ ಅನುದಾನ ನೀಡಲ್ಲ. ಈಗ ನಮಗೆ ಜಿಎಸ್ ಟಿ ತೆರಿಗೆ ಮಾತ್ರ ಇದೆ. ಐದು ಯೋಜನೆಗಳ ಹಣವನ್ನು ನಿಲ್ಲಿಸಲಾಗಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರ ರಾಜ್ಯಗಳು ಅತಿದೊಡ್ಡ ಕಳ್ಳ ರಾಜ್ಯಗಳು. ಬಂಗಾಳಕ್ಕೆ ಕೆಟ್ಟ ಹೆಸರನ್ನು ತರಲು 186 ತಂಡಗಳನ್ನು ಅವರು ಕಳುಹಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ವಲಸೆ ಹಕ್ಕಿಯಂತೆ ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಾರೆ ಎಂದು ಆರೋಪಿಸಿದ ಮಮತಾ ಬ್ಯಾನರ್ಜಿ, ಕೇಂದ್ರದ ಎಲ್ಲಾ ಮಾಹಿತಿಗಳಿಗೆ ಪಶ್ಚಿಮ ಬಂಗಾಳ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT