ಕ್ಸಿ- ಜಿನ್ ಪಿಂಗ್, ಪುಟಿನ್ ಹಾಗೂ ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ದೇಶ

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಅಮೆರಿಕ ಇತ್ತೀಚೆಗೆ ಉಕ್ಕು, ಜವಳಿ ಮತ್ತು ಕೃಷಿ ಉತ್ಪನ್ನಗಳನ್ನೊಳಗೊಂಡಂತೆ ವ್ಯಾಪಕ ಪ್ರಮಾಣದ ಭಾರತೀಯ ರಫ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಕೆಲವು ಸಂದರ್ಭಗಳಲ್ಲಿ ಸುಂಕಗಳು ಶೇ. 50 ರಷ್ಟು ಹೆಚ್ಚಿವೆ.

ನವದೆಹಲಿ: ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಪ್ರಯೋಗಿಸಿದ ನಂತರ ಅಮೆರಿಕಕ್ಕೆ ಸೆಡ್ಡು ಹೊಡೆದು ಚೀನಾ ಹಾಗೂ ರಷ್ಯಾ ದೇಶಗಳೊಂದಿಗೆ ಬಾಂಧವ್ಯ ವೃದ್ಧಿಗೆ ಭಾರತ ಯತ್ನಿಸುತ್ತಿದೆ. ಶಾಂಘೈ ಸಹಕಾರ ಸಂಘಟನೆ(SCO)ಶೃಂಗಸಭೆಗೆ ಮುಂದಿನ ವಾರ ಚೀನಾದ ಟಿಯಾಂಜಿನ್ ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 31 ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಸೆಪ್ಟೆಂಬರ್ 1 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಉಕ್ರೇನ್‌ನಲ್ಲಿ ಯುದ್ಧದ ಮಧ್ಯೆ ಭಾರತದ ನಿರಂತರ ತೈಲ ಖರೀದಿಯ ಬಗ್ಗೆ ಪದೇ ಪದೇ ಬೆದರಿಕೆಗಳು ಮತ್ತು ಆಕ್ಷೇಪಣೆಗಳ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಶೇ.50 ರಷ್ಟು ಸುಂಕ ಹೆಚ್ಚಳದಿಂದ ಅಮೆರಿಕ ಜೊತೆಗಿನ ಭಾರತದ ಆರ್ಥಿಕ ಪಾಲುದಾರಿಕೆಯು ಆಘಾತಕ್ಕೊಳಗಾಗಿರುವ ವೇಳೆ ಮೂವರು ದಿಗ್ಗಜರ ಸಮಾಗವನ್ನು ಜಗತ್ತು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಅಮೆರಿಕ ಇತ್ತೀಚೆಗೆ ಉಕ್ಕು, ಜವಳಿ ಮತ್ತು ಕೃಷಿ ಉತ್ಪನ್ನಗಳನ್ನೊಳಗೊಂಡಂತೆ ವ್ಯಾಪಕ ಪ್ರಮಾಣದ ಭಾರತೀಯ ರಫ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಕೆಲವು ಸಂದರ್ಭಗಳಲ್ಲಿ ಸುಂಕಗಳು ಶೇ. 50 ರಷ್ಟು ಹೆಚ್ಚಿವೆ.

ಚೀನಾ ಜೊತೆಗೆ ಸಂಬಂಧದಲ್ಲಿ ಸುಧಾರಣೆ: ನವದೆಹಲಿ ಪ್ರತೀಕಾರದ ಕ್ರಮಗಳಿಗೆ ಬೆದರಿಕೆ ಹಾಕಿದೆ ಮತ್ತು ವಿಶ್ವ ವ್ಯಾಪಾರ ಸಂಸ್ಥೆ (WTO) ನಲ್ಲಿ ಸಮಾಲೋಚನೆಗಳನ್ನು ಪ್ರಾರಂಭಿಸಿದೆ. ಆದರೆ ರಫ್ತುದಾರರು ಪೂರೈಕೆಯಲ್ಲಿ ಅಡಚಣೆ ಮತ್ತು ಸಾಗರೋತ್ತರ ಮಾರಾಟ ಕ್ಷೀಣದ ಬಗ್ಗೆ ಎಚ್ಚರಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಚೀನಾ ಜೊತೆಗಿನ ಸಂಬಂಧಗಳು ಮತ್ತಷ್ಟು ದುರ್ಬಲವಾಗಿದ್ದರೂ, ವರ್ಷಗಳ ಸಂಘರ್ಷದ ನಂತರ ಸಾಕಷ್ಟು ಸುಧಾರಣೆಯಾಗಿರುವುದು ಕಂಡುಬಂದಿದೆ.

ಗಾಲ್ವಾನ್ ಕಣಿವೆ ಘರ್ಷಣೆ ನಂತರ ಹದೆಗೆಟ್ಟಿದ್ದ ಸಂಬಂಧ:

ಜೂನ್ 2020 ರಲ್ಲಿ ನಡೆದ ಮಾರಣಾಂತಿಕ ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿತ್ತು. ಆದರೆ ಮಿಲಿಟರಿ ಮತ್ತು ರಾಜತಾಂತ್ರಿಕ ಸರಣಿ ಸಭೆ ನಂತರ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (LAC) ಪ್ರಮುಖ ಘರ್ಷಣೆಯ ಬಿಂದುಗಳಿಂದ ಪರಸ್ಪರ ಸೇನೆ ಹಿಂತೆಗೆದುಕೊಳ್ಳುವಿಕೆಗೆ ಕಾರಣವಾಗಿದೆ.

ಇನ್ನೂ ಭಾರಿ ಸೇನೆ ನಿಯೋಜನೆ: ಇನ್ನೂ ಭಾರಿ ಸೇನೆ ನಿಯೋಜನೆ ಇದೆ. ಆದರೆ ಎರಡೂ ಸರ್ಕಾರಗಳು ಉಲ್ಬಣಗೊಳ್ಳುವ ತಕ್ಷಣದ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಇತ್ತೀಚಿನ ಮಾತುಕತೆ ಸಂಬಂಧಗಳಲ್ಲಿ ಅನುಸರಿಸಿದ ವಿಧಾನ, ನಿರ್ವಹಿಸಿದ ರೀತಿ ಇದಕ್ಕೆ ಸಾಕ್ಷಿ ಎನ್ನುವಂತಾಗಿದೆ. ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಮೊದಲ ಚೀನಾ ಭೇಟಿ ಇದಾಗಿದೆ. ಅವರು 2018 ರಲ್ಲಿ ಅನೌಪಚಾರಿಕ ಶೃಂಗಸಭೆಗಾಗಿ ವುಹಾನ್‌ನಲ್ಲಿ ಕ್ಸಿ ಅವರನ್ನು ಭೇಟಿಯಾಗಿದ್ದರು.

ಮಹತ್ವದ ಪುಟಿನ್ ಭೇಟಿ: ಪುಟಿನ್ ಅವರೊಂದಿಗಿನ ಭೇಟಿಯು ಅಷ್ಟೇ ಮಹತ್ವದ್ದಾಗಿದೆ. ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ನಿರ್ಬಂಧ ಎದುರಿಸುತ್ತಿರುವ ರಷ್ಯಾ, ಭಾರತದೊಂದಿಗೆ ತನ್ನ ಸಾಂಪ್ರದಾಯಿಕ ಪಾಲುದಾರಿಕೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಇದೇ ವೇಳೆ ಚೀನಾದೊಂದಿಗೆ ತನ್ನ ಕಾರ್ಯತಂತ್ರವನ್ನು ಮತ್ತಷ್ಟು ಬಲಗೊಳಿಸುತ್ತಿದೆ.

ಭಾರತ ಮತ್ತು ಚೀನಾವನ್ನು ಒಳಗೊಂಡ ತ್ರಿಪಕ್ಷೀಯ ಚರ್ಚೆಯ ಸಾಧ್ಯತೆಯ ಬಗ್ಗೆ ಮಾಸ್ಕೋ ಇತ್ತೀಚೆಗೆ ಸುಳಿವು ನೀಡಿದೆ. ಇದು ಟಿಯಾಂಜಿನ್‌ನಲ್ಲಿ ಮೋದಿಯವರೊಂದಿಗೆ ಪುಟಿನ್ ಅವರ ಮಾತುಕತೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಟಿಯಾಂಜಿನ್‌ನಲ್ಲಿ ನಡೆಯುವ SCO ಶೃಂಗಸಭೆಯು ಮಧ್ಯ ಏಷ್ಯಾ, ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾದ 20 ಕ್ಕೂ ಹೆಚ್ಚು ನಾಯಕರನ್ನು ಒಂದೆಡೆಗೆ ಸೇರಿಸುತ್ತಿದೆ. ಚೀನಾಕ್ಕೆ ಗ್ಲೋಬಲ್ ಸೌತ್‌ ನಾಯಕತ್ವವನ್ನು ಪ್ರದರ್ಶಿಸಲು ಮತ್ತು ರಾಜತಾಂತ್ರಿಕವಾಗಿ ಸಭೆಯು ರಷ್ಯಾಗೆ ಒಂದು ಅವಕಾಶವಾಗಿದೆ. ಭಾರತಕ್ಕೆ ಇದು ಬಹುಪಕ್ಷೀಯ ರಾಷ್ಟ್ರಗಳಿಗೆ ತನ್ನ ನಿರಂತರ ಬದ್ಧತೆಯನ್ನು ಸೂಚಿಸಲು ಮತ್ತು ಬದಲಾಗುತ್ತಿರುವ ಜಾಗತಿಕ ಹೊಂದಾಣಿಕೆಗಳ ನಡುವೆ ಸಮತೋಲನ ಶಕ್ತಿಯಾಗಿ ತನ್ನನ್ನು ತಾನು ಇರಿಸಿಕೊಳ್ಳಲು ಅವಕಾಶ ನೀಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ ರೂ. 28,000 ಕೋಟಿ ಸಾಲ ವಿತರಣೆಯ ಗುರಿ: ಸಿಎಂ ಸಿದ್ದರಾಮಯ್ಯ

SCROLL FOR NEXT