ಸಾಂದರ್ಭಿಕ ಚಿತ್ರ 
ದೇಶ

ಬಿಹಾರ: 'ಮತದಾರರ ಅಧಿಕಾರ ಯಾತ್ರೆ' ವೇಳೆ ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳ ಬಳಕೆ; ವ್ಯಕ್ತಿ ಬಂಧನ

'ಈ ಪ್ರಕರಣದಲ್ಲಿ, ಸಿಮ್ರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ' ಎಂದು ಪೊಲೀಸರು ಎಕ್ಸ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ದರ್ಭಾಂಗ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ನಡೆಸಿದ 'ಮತದಾರರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿಯ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದ ಮೇಲೆ ಬಿಹಾರ ಪೊಲೀಸರು ಶುಕ್ರವಾರ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ಮೊಹಮ್ಮದ್ ರಿಜ್ವಿ ಅಲಿಯಾಸ್ ರಜಾ (20) ಎಂದು ಗುರುತಿಸಲಾಗಿದ್ದು, ದರ್ಭಾಂಗ್ ಪಟ್ಟಣದ ಸಿಂಗ್ವಾರ ಪ್ರದೇಶದಲ್ಲಿ ಬಂಧಿಸಲಾಗಿದೆ.

ಬಿಜೆಪಿಯ ದರ್ಭಾಂಗ್ ಜಿಲ್ಲಾಧ್ಯಕ್ಷ ಆದಿತ್ಯ ನಾರಾಯಣ್ ಚೌಧರಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಆರೋಪಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದರ್ಭಾಂಗ್ ಪಟ್ಟಣದಲ್ಲಿ ಯಾತ್ರೆಯ ಸಮಯದಲ್ಲಿ ವೇದಿಕೆ ಮೇಲೆ ನರೇಂದ್ರ ಮೋದಿ ವಿರುದ್ಧ ಹಿಂದಿಯ ಅಶ್ಲೀಲ ಪದವನ್ನು ಬಳಸಿ ಮಾತನಾಡುತ್ತಿರುವ ವಿಡಿಯೋವೊಂದು ಕಂಡುಬಂದಿದೆ.

ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಮೋಟಾರ್ ಸೈಕಲ್‌ಗಳಲ್ಲಿ ಮುಜಫರ್‌ಪುರಕ್ಕೆ ತೆರಳಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿ ವಿರುದ್ಧ ಬಳಸಿದ ಭಾಷೆಯನ್ನು ಖಂಡಿಸಿದರು ಮತ್ತು ಈ ಘಟನೆಯನ್ನು ದೇಶದ ಪ್ರಜಾಪ್ರಭುತ್ವದ ಮೇಲಿನ "ಕಳಂಕ" ಎಂದು ಕರೆದರು.

'ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ, ಕಾಂಗ್ರೆಸ್ ರಾಜಕೀಯವು ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. ಕಳೆದ 11 ವರ್ಷಗಳಿಂದ ಬಡ ತಾಯಿಯ ಮಗ ಪ್ರಧಾನಿ ಕುರ್ಚಿಯಲ್ಲಿ ಕುಳಿತಿದ್ದು, ಅವರ ನಾಯಕತ್ವದಲ್ಲಿ ದೇಶವನ್ನು ನಿರಂತರವಾಗಿ ಮುನ್ನಡೆಸುತ್ತಿರುವುದನ್ನು ಅವರು ಸಹಿಸಲು ಸಾಧ್ಯವಿಲ್ಲ' ಎಂದು ಅವರು X ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನ ಹಳೆಯ ರೀತಿನೀತಿಗಳು ಮತ್ತು ಸ್ವಭಾವಕ್ಕೆ ಮರಳಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಈ ಮೂಲಕ ಅದು ದೇಶದ ರಾಜಕೀಯ ಸಂಸ್ಕೃತಿಯನ್ನು ಯಾವಾಗಲೂ ವಿಷಪೂರಿತಗೊಳಿಸಿದೆ ಎಂದು ಅವರು ಹೇಳಿದರು.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಕೂಡ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಮತ್ತು ಅವರ ತಾಯಿಯ ವಿರುದ್ಧದ ನಿಂದನೆಗಳು 'ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿದೆ' ಮತ್ತು ರ್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, 'ದರ್ಭಂಗಾದಲ್ಲಿ ನಡೆದ ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಇದ್ದ ವೇದಿಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಅಸಭ್ಯ ಭಾಷೆಯ ಬಳಕೆ ಅತ್ಯಂತ ಅನುಚಿತವಾಗಿದೆ ಮತ್ತು ನಾನು ಅದನ್ನು ಖಂಡಿಸುತ್ತೇನೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಚಾರ್ ಸಾಥಿಯಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ

ದರ್ಶನ್ ಪ್ರಕರಣ: ಡಿ. 17ರಿಂದ ಸಾಕ್ಷ್ಯ ವಿಚಾರಣೆಗೆ ಕೋರ್ಟ್ ನಿರ್ಧಾರ; ರೇಣುಕಾಸ್ವಾಮಿ ತಂದೆ, ತಾಯಿಗೂ ಸಮಸ್ಸ್

Anantapur: ಶಾಸಕನ ರಾಸಲೀಲೆ Video ವೈರಲ್, ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

ದೈವವನ್ನು 'ದೆವ್ವ' ಎಂದಿದ್ದ ಬಾಲಿವುಡ್ ನಟ Ranveer Singh ಸಂಕಷ್ಟ! ಪೊಲೀಸ್ ದೂರು ದಾಖಲು!

ಛತ್ತೀಸ್‌ಗಢ: ಬಿಜಾಪುರದಲ್ಲಿ ಎನ್‌ಕೌಂಟರ್‌ಗೆ ಐವರು ನಕ್ಸಲರು ಬಲಿ; ಒಬ್ಬ ಪೊಲೀಸ್ ಹುತಾತ್ಮ

SCROLL FOR NEXT