ಅಲಹಾಬಾದ್ ಹೈಕೊರ್ಟ್ online desk
ದೇಶ

Rahul Gandhi ವಿರುದ್ಧದ ದ್ವಿಪೌರತ್ವ ಪ್ರಕರಣ: ಬಿಜೆಪಿ ಕಾರ್ಯಕರ್ತನಿಗೆ ಭದ್ರತೆ ಒದಗಿಸಲು ಅಲಹಾಬಾದ್ ಹೈಕೊರ್ಟ್ ಸೂಚನೆ

ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎಂದು ಆರೋಪಿಸಿ. ಅರ್ಜಿದಾರರಾದ ಎಸ್ ವಿಘ್ನೇಶ್ ಶಿಶಿರ್ ಅವರು ಗಾಂಧಿಯವರ ಚುನಾವಣೆಯನ್ನು ಸಹ ಪ್ರಶ್ನಿಸಿದ್ದಾರೆ.

ಅಲಹಾಬಾದ್: ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿರುವ ಕರ್ನಾಟಕ ಬಿಜೆಪಿ ಕಾರ್ಯಕರ್ತನಿಗೆ ಭದ್ರತೆ ಒದಗಿಸುವಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಪ್ರಕರಣಗಳನ್ನು ಮುಂದುವರಿಸುತ್ತಿರುವ ಕರ್ನಾಟಕದ ಬಿಜೆಪಿ ಕಾರ್ಯಕರ್ತನಿಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ದಿನದ 24 ಗಂಟೆಗಳ ಭದ್ರತೆಯನ್ನು ಆದೇಶಿಸಿದೆ.

ರಾಹುಲ್ ಗಾಂಧಿಯವರ ಭಾರತೀಯ ಪೌರತ್ವ ರದ್ದತಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಅವರು ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ ಎಂದು ಆರೋಪಿಸಿ. ಅರ್ಜಿದಾರರಾದ ಎಸ್ ವಿಘ್ನೇಶ್ ಶಿಶಿರ್ ಗಾಂಧಿಯ ಲೋಕಸಭಾ ಸದಸ್ಯತ್ವವನ್ನೂ ಸಹ ಪ್ರಶ್ನಿಸಿದ್ದಾರೆ.

ಶಿಶಿರ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ಸಂಗೀತಾ ಚಂದ್ರ ಮತ್ತು ನ್ಯಾಯಮೂರ್ತಿ ಬಿ.ಆರ್. ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ. ಕಳೆದ ವರ್ಷ, ಶಿಶಿರ್ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದರು, ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಸಾಬೀತುಪಡಿಸಲು ಪುರಾವೆಗಳೊಂದಿಗೆ ಬ್ರಿಟಿಷ್ ಸರ್ಕಾರದಿಂದ ದಾಖಲೆಗಳು ಮತ್ತು ಇಮೇಲ್‌ಗಳು ತಮ್ಮ ಬಳಿ ಇವೆ ಎಂದು ಪ್ರತಿಪಾದಿಸಿದರು.

ನಿಜವಾಗಿದ್ದರೆ, ರಾಹುಲ್ ಗಾಂಧಿ ಭಾರತದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಥವಾ ಲೋಕಸಭಾ ಸದಸ್ಯ ಸ್ಥಾನವನ್ನು ಹೊಂದಲು ಅನರ್ಹರಾಗುತ್ತಾರೆ ಎಂದು ಅವರು ವಾದಿಸಿದರು. ರಾಹುಲ್ ಗಾಂಧಿಯವರ ದ್ವಿಪೌರತ್ವದ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಎರಡು ದೂರುಗಳನ್ನು ಕಳುಹಿಸಿದ್ದೇನೆ ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಶಿಶಿರ್ ಹೇಳಿದರು.

ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಂಡ ನಂತರ ತನಗೆ ಬೆದರಿಕೆಗಳು ಬರುತ್ತಿವೆ ಮತ್ತು ಬಲವಂತದ ಕ್ರಮಗಳನ್ನು ಎದುರಿಸುತ್ತಿದ್ದೇನೆ ಎಂದು ಶಿಶಿರ್ ಇತ್ತೀಚಿನ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಜೂನ್ 2024 ರಲ್ಲಿ ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆಯಾಗಿ ಸಿಬಿಐ ತನಿಖೆ ನಡೆಸುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿಯವರ ಬ್ರಿಟಿಷ್ ಪೌರತ್ವಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸಿ ನವದೆಹಲಿಯಲ್ಲಿ ಸಿಬಿಐ ಮುಂದೆ ಹಲವು ಬಾರಿ ಹಾಜರಾಗಿದ್ದೇನೆ ಎಂದು ಶಿಶಿರ್ ಹೇಳಿದ್ದಾರೆ. ಭದ್ರತೆ ಕೋರಿ ಪ್ರಧಾನಿ ಕಚೇರಿಗೆ ಪತ್ರ ಬರೆದರೂ, ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ನ್ಯಾಯಾಲಯವನ್ನು ಸಂಪರ್ಕಿಸಿದರು.

ತನ್ನ ಮಧ್ಯಂತರ ಆದೇಶದಲ್ಲಿ, "ಅರ್ಜಿದಾರರು ಅತ್ಯಂತ ಪ್ರಭಾವಿ ವ್ಯಕ್ತಿಯ ವಿರುದ್ಧ ತಮ್ಮ ಪ್ರಕರಣಗಳನ್ನು ಮುಂದುವರಿಸುತ್ತಿರುವುದರಿಂದ ಮತ್ತು ನಿರಂತರ ಬೆದರಿಕೆಗಳನ್ನು ಎದುರಿಸುತ್ತಿರುವುದರಿಂದ, ಈ ವಿಷಯ ಪರಿಗಣನೆಯ ಅಗತ್ಯವಿದೆ ಎಂದು ನಾವು ಪ್ರಾಥಮಿಕವಾಗಿ ತೃಪ್ತಿ ಹೊಂದಿದ್ದೇವೆ" ಎಂದು ಪೀಠ ಗಮನಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅವರು ಸಾಕ್ಷಿಗಳ ರಕ್ಷಣಾ ಯೋಜನೆ ಜಾರಿಯಲ್ಲಿದೆ ಎಂದು ಉಲ್ಲೇಖಿಸಿದ್ದಾರೆ. ಅರ್ಜಿದಾರರ ವಿರುದ್ಧ ಸ್ಪಷ್ಟ ಬೆದರಿಕೆಗಳನ್ನು ನೀಡಲಾಗುತ್ತಿದ್ದು, ಅವರಿಗೆ ಭದ್ರತೆ ಒದಗಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.

ನಂತರ ನ್ಯಾಯ ಪೀಠ ಶಿಶಿರ್ ಅವರಿಗೆ ಮಧ್ಯಂತರ ಭದ್ರತೆ ಒದಗಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು ಮತ್ತು ಈ ವಿಷಯದಲ್ಲಿ ಪ್ರತಿ-ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಸೂಚನೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9 ರಂದು ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ, ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

SCROLL FOR NEXT