ನವದೆಹಲಿ: ಚಳಿಗಾಲದ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ನಾಟಕದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಹಣದುಬ್ಬರ ಮತ್ತು ಮಾಲಿನ್ಯದಂತಹ ಸಾರ್ವಜನಿಕ ವಿಷಯಗಳ ಕುರಿತು ಚರ್ಚೆಯನ್ನು ತಪ್ಪಿಸುವುದು ನಿಜವಾದ ನಾಟಕ ಎಂದು ಹೇಳಿದ್ದಾರೆ. ವಾಸ್ತವವಾಗಿ, ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಪ್ರಧಾನಿ ಮೋದಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸದನವು ಗದ್ದಲ ಸೃಷ್ಟಿಸಲು ಅಲ್ಲ ಎಂದು ಹೇಳಿದರು. ನಾಟಕ ಮಾಡಲು ಸಾಕಷ್ಟು ಸ್ಥಳಗಳಿವೆ. ಆದರೆ ಅವರು ಇಲ್ಲಿಂದಲೇ ಅದನ್ನು ಮಾಡುತ್ತಿದ್ದಾರೆ ಎಂಬ ನರೇಂದ್ರ ಮೋದಿ ಹೇಳಿಕೆಗೆ ಪ್ರಿಯಾಂಕಾ ವಾದ್ರಾ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಸಮಸ್ಯೆಗಳನ್ನು ಎತ್ತುವುದು ನಾಟಕವಲ್ಲ. ಚುನಾವಣಾ ಪರಿಸ್ಥಿತಿ, ಮಾಲಿನ್ಯವು ಒಂದು ದೊಡ್ಡ ವಿಷಯ ಅದನ್ನು ಚರ್ಚಿಸೋಣ. ಸಂಸತ್ತು ಯಾವುದಕ್ಕಾಗಿ? ಇದು ನಾಟಕವಲ್ಲ. ಸಮಸ್ಯೆಗಳನ್ನು ಮಾತನಾಡುವುದು ಮತ್ತು ಎತ್ತುವುದು ನಾಟಕವಲ್ಲ.ಪ್ರಜಾಪ್ರಭುತ್ವದ ವಿಷಯಗಳ ಕುರಿತು ಚರ್ಚೆಗೆ ಅವಕಾಶ ನೀಡದಿರುವುದು ಮತ್ತು ಅವುಗಳನ್ನು ಚರ್ಚಿಸದಿರುವುದು ನಾಟಕ ಎಂದು ಪ್ರಿಯಾಂಕಾ ಹೇಳಿದರು. ಸಾರ್ವಜನಿಕರಿಗೆ ಮುಖ್ಯವಾದ ವಿಷಯಗಳ ಕುರಿತು ಪ್ರಜಾಸತ್ತಾತ್ಮಕ ಚರ್ಚೆಯನ್ನು ಅವರ ನಾಟಕ ತಡೆಯುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಜೊತೆಗೆ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಧಾನಿಯವರ "ನಾಟಕ" ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ವಿರೋಧ ಪಕ್ಷಗಳು ಎಸ್‌ಐಆರ್ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿವೆ. ಇದು ನಾಟಕವೇ? ಜನರ ಧ್ವನಿ ಎತ್ತುವುದು ನಾಟಕವಾಗಿದ್ದರೆ, ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ಉತ್ತರಿಸುತ್ತಾರೆ ಎಂದು ಅವರು ಹೇಳಿದರು. ಬಿಎಲ್‌ಒ ಸೇರಿದಂತೆ 40 ಜನರ ಸಾವಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅಭಿಷೇಕ್ ಆರೋಪಿಸಿದರು. ಸರ್ಕಾರದ ಹೊಣೆಗಾರಿಕೆ ಎಲ್ಲಿದೆ? ಹತ್ತು ವರ್ಷಗಳ ಹಿಂದೆ, ನೋಟು ರದ್ದತಿಯ ಸಮಯದಲ್ಲಿ, ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಕಪ್ಪು ಹಣದ ಹರಿವು ಹೆಚ್ಚಾಗಿದೆ, ಹೊಣೆಗಾರಿಕೆ ಎಲ್ಲಿದೆ?" ಎಂದು ಅವರು ಕೇಳಿದರು.