ದೆಹಲಿ ಸಿಎಂ ರೇಖಾ ಗುಪ್ತಾ 
ದೇಶ

MCD ಉಪಚುನಾವಣೆ ಫಲಿತಾಂಶ: ಬಿಜೆಪಿ 7, ಎಎಪಿ 3ರಲ್ಲಿ ಗೆಲುವು; ಖಾತೆ ತೆರೆದ ಕಾಂಗ್ರೆಸ್

ಕಾಂಗ್ರೆಸ್ ಮತ್ತು ಎಐಎಫ್‌ಬಿ ತಲಾ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ದೆಹಲಿ ಮಹಾನಗರ ಪಾಲಿಕೆಯಲ್ಲಿ ತಮ್ಮ ಖಾತೆ ತೆರೆದಿವೆ.

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ 12 ವಾರ್ಡ್‌ಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿತರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಏಳು ಸ್ಥಾನಗಳನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ(ಎಎಪಿ) ಮೂರು ಸ್ಥಾನಗಳನ್ನು ಗೆದ್ದಿದೆ.

ಕಾಂಗ್ರೆಸ್ ಮತ್ತು ಎಐಎಫ್‌ಬಿ ತಲಾ ಒಂದು ಸ್ಥಾನವನ್ನು ಗೆಲ್ಲುವ ಮೂಲಕ ದೆಹಲಿ ಮಹಾನಗರ ಪಾಲಿಕೆಯಲ್ಲಿ ತಮ್ಮ ಖಾತೆ ತೆರೆದಿವೆ.

ಬಿಜೆಪಿಯ ಮನೀಷಾ ದೇವಿ ದ್ವಾರಕಾ ವಾರ್ಡ್‌ನಿಂದ, ಸರಳಾ ಚೌಧರಿ ವಿನೋದ್ ನಗರದಿಂದ, ವೀಣಾ ಅಸಿಜಾ ಅಶೋಕ್ ವಿಹಾರ್‌ನಿಂದ, ಅಂಜುಮ್ ಮಂಡಲ್ ಗ್ರೇಟರ್ ಕೈಲಾಶ್‌ನಿಂದ, ರೇಖಾ ರಾಣಿ ಧಿಚಾವ್ ಕಲಾನ್‌ನಿಂದ, ಅನಿತಾ ಜೈನ್ ಶಾಲಿಮಾರ್ ಬಾಗ್‌ನಿಂದ ಮತ್ತು ಸುಮನ್ ಕುಮಾರ್ ಗುಪ್ತಾ ಅವರು ಚಾಂದನಿ ಚೌಕ್‌ನಿಂದ ಗೆಲುವು ಸಾಧಿಸಿದ್ದಾರೆ.

ಎಎಪಿಯ ರಂಜನಾ ಅರೋರಾ, ಅನಿಲ್ ಮತ್ತು ರಾಮ್ ಸ್ವರೂಪ್ ಕನೋಜಿಯಾ ಗೆಲುವು ಸಾಧಿಸಿದ್ದು. ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಚೌಧರಿ ಸಂಗಮ್ ವಿಹಾರ್‌ನಿಂದ ಗೆದ್ದರೆ, ಎಐಎಫ್‌ಬಿಯ ಮೊಹಮ್ಮದ್ ಇಮ್ರಾನ್ ಚಾಂದನಿ ಮಹಲ್ ವಾರ್ಡ್‌ನಿಂದ ಜಯ ಗಳಿಸಿದ್ದಾರೆ.

ನವೆಂಬರ್ 30 ರಂದು ದೆಹಲಿ ಮಹಾನಗರ ಪಾಲಿಕೆಯ 12 ವಾರ್ಡ್‌ಗಳಿಗೆ ಉಪ ಚುನಾವಣೆ ನಡೆದಿತ್ತು. ಅತ್ಯಂತ ಕಡಿಮೆ ಮತದಾನ ಅಂದರೆ ಕೇವಲ ಶೇಕಡಾ 38.51 ರಷ್ಟು ಮತದಾನವಾಗಿತ್ತು. 2022 ರಲ್ಲಿ 250 ವಾರ್ಡ್‌ಗಳಿಗೆ ನಡೆದ ಎಂಸಿಡಿ ಚುನಾವಣೆಯಲ್ಲಿ ಶೇಕಡಾ 50.47 ರಷ್ಟು ಮತದಾನವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಚಾರ್ ಸಾಥಿಯಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಆದೇಶ ವಾಪಸ್: ಸಚಿವ ಸಿಂಧಿಯಾ

ಕೋಚ್ ಗಂಭೀರ್ ಜೊತೆ ಮುನಿಸು: ODI ನಲ್ಲಿ 53ನೇ ಶತಕ ಸಿಡಿಸಿ ವಿಶ್ವದ ಏಕೈಕ ಬ್ಯಾಟರ್ Virat Kohli!

ಕರ್ನಾಟಕ ರಾಜಭವನಕ್ಕೆ ಲೋಕಭವನ ಎಂದು ಮರುನಾಮಕರಣ

ಬಣ ಬಡಿದಾಟ: ಮಂಗಳೂರಿನಲ್ಲಿ ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಬೆಂಬಲಿಗರಿಂದ ಜೈಕಾರ ಘೋಷಣೆ- Video

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್; ಜೀವಾವಧಿ ಶಿಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ

SCROLL FOR NEXT