ಸಾಂದರ್ಭಿಕ ಚಿತ್ರ 
ದೇಶ

ಮದುವೆ ವಯಸ್ಸು ತಲುಪದಿದ್ದರೂ ವಯಸ್ಕರು ಲಿವ್-ಇನ್ ಸಂಬಂಧದಲ್ಲಿರಬಹುದು: ರಾಜಸ್ಥಾನ ಹೈಕೋರ್ಟ್

ಒಪ್ಪಂದದ ಮೇರೆಗೆ ತಾವು ಇದೇ ವರ್ಷ ಅಕ್ಟೋಬರ್‌ 27ರಿಂದ ಸಹಜೀವನ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಜೋಡಿ, ಯುವತಿಯ ಕುಟುಂಬದವರು ಅದಕ್ಕೆ ಅಸಮ್ಮತಿ ಸೂಚಿಸಿದ್ದು, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

ಜೈಪುರ: ಮದುವೆಯಾಗಲು ಕಾನೂನಾತ್ಮಕವಾಗಿ ನಿಗದಿಯಾಗಿರುವ ವಯಸ್ಸನ್ನು ತಲುಪದ ಇಬ್ಬರು ವಯಸ್ಕರು, ಸಹಮತದ ಆಧಾರದ ಮೇಲೆ ಸಹಜೀವನ ನಡೆಸಲು ಅರ್ಹರು ಎಂದು ಮಹತ್ವದ ತೀರ್ಪು ಪ್ರಕಟಿಸಿರುವ ರಾಜಸ್ಥಾನ ಹೈಕೋರ್ಟ್‌, ಅವರ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ.

ಪರಸ್ಪರ ಒಪ್ಪಿಗೆಯ ಮೇರೆಗೆ ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗೆ ರಕ್ಷಣೆ ನೀಡಬೇಕು' ಎಂದು ಕೋರಿ ಕೋಟಾದ 18ರ ಯುವತಿ ಹಾಗೂ 19ರ ಯುವಕ ಸಲ್ಲಿಸಿದ್ದ ಅರ್ಜಿಯ ಮೇಲ್ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಅನೂಪ್‌ ಧಂದ್‌ ಈ ತೀರ್ಪು ನೀಡಿದ್ದಾರೆ.

ಒಪ್ಪಂದದ ಮೇರೆಗೆ ತಾವು ಇದೇ ವರ್ಷ ಅಕ್ಟೋಬರ್‌ 27ರಿಂದ ಸಹಜೀವನ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಜೋಡಿ, ಯುವತಿಯ ಕುಟುಂಬದವರು ಅದಕ್ಕೆ ಅಸಮ್ಮತಿ ಸೂಚಿಸಿದ್ದು, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಈ ಸಂಬಂಧ ಕೋಟಾ ಪೊಲೀಸರಿಗೆ ದೂರು ನೀಡಿದ್ದರೂ, ಪರಿಹಾರ ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದೆ.

ಜೋಡಿಯ ಅರ್ಜಿಯನ್ನು ವಿರೋಧಿಸಿದ ಸರ್ಕಾರಿ ವಕೀಲ ವಿವೇಕ್ ಚೌಧರಿ, ಪುರುಷರು ಮದುವೆಯಾಗಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಯುವಕನಿಗೆ ಅಷ್ಟು ವಯಸ್ಸಾಗಿಲ್ಲದ ಕಾರಣ, ಆ ವ್ಯಕ್ತಿಗೆ ಸಹಜೀವನ ನಡೆಸಲು ಅವಕಾಶ ನೀಡಬಾರದು ಎಂದು ವಾದಿಸಿದರು.

ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಕಲ್ಪಿಸಲಾಗಿರುವ ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು, ಅರ್ಜಿದಾರರಿಗೆ ಕಾನೂನುಬದ್ಧವಾಗಿ ಮದುವೆಯ ವಯಸ್ಸಾಗಿಲ್ಲ ಎಂಬ ಕಾರಣಕ್ಕೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಪ್ರತಿಯೊಬ್ಬರ ಬದುಕು ಮತ್ತು ಸ್ವಾತಂತ್ರ್ಯವನ್ನು ಕಾಪಾಡುವುದು ಸರ್ಕಾರದ ಸಾಂವಿಧಾನಿಕ ಹೊಣೆಯಾಗಿದೆ' ಎಂದಿರುವ ನ್ಯಾಯಮೂರ್ತಿಗಳು, ದೇಶದ ಕಾನೂನಿನಲ್ಲಿ ಸಹಜೀವನ ಸಂಬಂಧಕ್ಕೆ ನಿಷೇಧವಿಲ್ಲ. ಅದು ಅಪರಾಧವೂ ಅಲ್ಲ ಎಂದು ಒತ್ತಿ ಹೇಳಿದ್ದಾರೆ.

ಇದೇ ವೇಳೆ, ಅರ್ಜಿದಾರರು ಉಲ್ಲೇಖಿಸಿರುವ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸಲು ಹಾಗೂ ಅಗತ್ಯವಿದ್ದರೆ ಜೋಡಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಭಿಲ್ವಾರ ಮತ್ತು ಜೋಧಪುರ (ಗ್ರಾಮಾಂತರ) ಜಿಲ್ಲೆಗಳ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್