ಸಾಂದರ್ಭಿಕ ಚಿತ್ರ 
ದೇಶ

ಮದುವೆಯಾಗಿ ಮೂರೇ ದಿನಕ್ಕೆ ವಿಚ್ಛೇದನ ಕೇಳಿದ ವಧು; ಮೊದಲ ರಾತ್ರಿಯೇ ಆಘಾತಕಾರಿ ವಿಷಯ ಬಹಿರಂಗ!

ವರ "ತಂದೆಯಾಗಲು ಸಾಧ್ಯವಿಲ್ಲ" ಎಂದು ವೈದ್ಯಕೀಯ ವರದಿ ದೃಢಪಡಿಸಿದೆ ಎಂದು ಹೇಳಿಕೊಂಡಿದೆ. ಇದರಿಂದಾಗಿ ಉಡುಗೊರೆಗಳು ಮತ್ತು ಮದುವೆಯ ವೆಚ್ಚಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದೆ.

ಗೋರಖ್‌ಪುರ: ಗೋರಖ್‌ಪುರದ ನವವಿವಾಹಿತ ಮಹಿಳೆಯೊಬ್ಬರು ಮದುವೆಯಾದ ಕೇವಲ ಮೂರು ದಿನಗಳ ನಂತರ ವಿಚ್ಛೇದನ ಕೋರಿದ್ದಾರೆ. ಮದುವೆಯಾದ ಮೊದಲ ರಾತ್ರಿಯೇ ಅವರ ಪತಿ ದೈಹಿಕವಾಗಿ ದುರ್ಬಲವಾಗಿದ್ದು, ಲೈಂಗಿಕ ಸಂಬಂಧ ಹೊಂದಲು ಅಸಮರ್ಥ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ನಂತರ ವಧುವಿನ ಕುಟುಂಬ, ವರ "ತಂದೆಯಾಗಲು ಸಾಧ್ಯವಿಲ್ಲ" ಎಂದು ವೈದ್ಯಕೀಯ ವರದಿ ದೃಢಪಡಿಸಿದೆ ಎಂದು ಹೇಳಿಕೊಂಡಿದೆ. ಇದರಿಂದಾಗಿ ಉಡುಗೊರೆಗಳು ಮತ್ತು ಮದುವೆಯ ವೆಚ್ಚಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದೆ.

ಮಹಿಳೆ ಕಳುಹಿಸಿದ ಲೀಗಲ್ ನೋಟಿಸ್‌ನಲ್ಲಿ, ಅವರು ಹೀಗೆ ಹೇಳಿದ್ದಾರೆ: "ನಾನು ದೈಹಿಕವಾಗಿ ಅಸಮರ್ಥನಾಗಿರುವ ವ್ಯಕ್ತಿಯೊಂದಿಗೆ ನನ್ನ ಜೀವನ ನಡೆಸಲು ಸಾಧ್ಯವಿಲ್ಲ. ಮದುವೆಯ ರಾತ್ರಿಯೇ ಅವರು ನನಗೆ ವಿಷಯ ಹೇಳಿದಾಗ ಆಘಾತವಾಯಿತು" ಎಂದಿದ್ದಾರೆ.

25 ವರ್ಷದ ವರ ಸಹಜನ್ವಾದಲ್ಲಿರುವ ಉತ್ತಮ ರೈತ ಕುಟುಂಬದ ಏಕೈಕ ಪುತ್ರನಾಗಿದ್ದು, ಗೋರಖ್‌ಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ(GIDA) ಕೈಗಾರಿಕಾ ಘಟಕದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ವಧುವಿನ ಕುಟುಂಬ ವಾಸಿಸುವ ಬೆಲಿಯಾಪರ್‌ನಲ್ಲಿರುವ ಸಂಬಂಧಿಕರ ಮೂಲಕ ಮದುವೆ ಮಾಡಿಸಲಾಗಿದೆ. ದಂಪತಿಗಳು ನವೆಂಬರ್ 28 ರಂದು ವಿವಾಹವಾಗಿದ್ದು,

ಡಿಸೆಂಬರ್ 1 ರಂದು ವಧುವಿನ ತಂದೆ ಅತ್ತೆಯ ಮನೆಗೆ ಸಾಂಪ್ರದಾಯಿಕ ಆಚರಣೆ(ಮೊದಲ ರಾತ್ರಿ)ಗಾಗಿ ಆಗಮಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ವರನು ನನಗೆ ಖಾಸಗಿಯಾಗಿ ಹೇಳಿದ್ದಾನೆ ಎಂದು ವಧು ಹೇಳಿಕೊಂಡಿದ್ದು, ಲೈಂಕಿಗ ಸಂಬಂಧ ಹೊಂದಲು ವೈದ್ಯಕೀಯವಾಗಿ ಅನರ್ಹ ಎಂದು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ನಂತರ ಡಿಸೆಂಬರ್ 3 ರಂದು ಬೆಲಿಯಾಪರ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಎರಡೂ ಕುಟುಂಬಗಳು ಭೇಟಿಯಾಗಿದ್ದು, ಅಲ್ಲಿ ವಧುವಿನ ಕಡೆಯವರು ವರನ ಕುಟುಂಬವು ಆತನ ವೈದ್ಯಕೀಯ ಸ್ಥಿತಿಯನ್ನು ಮರೆಮಾಚಿದೆ ಎಂದು ಆರೋಪಿಸಿದರು.

ಇದು ವರನ ಎರಡನೇ ವಿಫಲ ವಿವಾಹ ಎಂದೂ ಅವರು ಹೇಳಿದ್ದು, ಮೊದಲ ವಧು ಎರಡು ವರ್ಷಗಳ ಹಿಂದೆ ಇದೇ ರೀತಿಯ ಕಾರಣಗಳಿಂದ ಮದುವೆಯಾದ ಒಂದು ತಿಂಗಳೊಳಗೆ ಹೊರಟುಹೋದಳು ಎಂದು ವರದಿಯಾಗಿದೆ.

ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ವರನನ್ನು ವೈದ್ಯಕೀಯ ಪರೀಕ್ಷೆಗಾಗಿ ಗೋರಖ್‌ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವರದಿಯಲ್ಲಿ ಅವರು ಲೈಂಗಿಕ ಸಂಬಂಧ ಹೊಂದಲು ಅನರ್ಹರು ಮತ್ತು "ತಂದೆಯಾಗಲು ಸಾಧ್ಯವಿಲ್ಲ" ಎಂದು ವಧುವಿನ ಕುಟುಂಬ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕ್ರಿಕೆಟ್ ಅಭಿಮಾನಿಗಳಿಗೆ ಡಿಕೆಶಿ ಗುಡ್ ನ್ಯೂಸ್; ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್

ಮೈಸೂರು: ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು!

ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ: 'ನಾನು ಕೇವಲ ಪಾರ್ಟನರ್' ಎಂದ ಬಂಧಿತ ಅಜಯ್ ಗುಪ್ತಾ

MUDA: 300 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್‌ ಅಭಿವೃದ್ಧಿ; ಸಚಿವ ಬೈರತಿ ಸುರೇಶ್‌

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

SCROLL FOR NEXT