ರಾಷ್ಟ್ರಪತಿ ದ್ರೌಪದಿ ಮುರ್ಮು 
ದೇಶ

ಚಾಕೊಲೇಟ್ ಆಮಿಷವೊಡ್ಡಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಮುರ್ಮು!

ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ 2012ರ ಮಾರ್ಚ್ 6 ರಂದು ಬಾಲಕಿ ಮೇಲೆ ಅತ್ಯಾಚಾರ, ಕೊಲೆ ನಡೆದಿತ್ತು.

ನವದೆಹಲಿ: ಚಾಕೊಲೇಟ್ ನೀಡುವ ಆಮಿಷವೊಡ್ಡಿ ಎರಡು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಹತ್ಯೆಗೈದು ಜೈಲು ಶಿಕ್ಷೆಗೊಳಗಾದ ಅಪರಾಧಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

2022ರ ಜುಲೈ 25 ರಂದು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಿರಸ್ಕರಿಸಿದ ಮೂರನೇ ಕ್ಷಮದಾನ ಅರ್ಜಿ ಇದಾಗಿದೆ. ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ 2012ರ ಮಾರ್ಚ್ 6 ರಂದು ಬಾಲಕಿ ಮೇಲೆ ಅತ್ಯಾಚಾರ, ಕೊಲೆ ನಡೆದಿತ್ತು.

ಅಪರಾಧಿ ರವಿ ಅಶೋಕ್ ಘುಮಾರಿಗೆ ವಿಧಿಸಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ 2019ರ ಅಕ್ಟೋಬರ್ 3 ರಂದು ಎತ್ತಿ ಹಿಡಿದಿತ್ತು.

ಎರಡು ವರ್ಷದ ಮಗುವಿನ ಮೇಲೆ ಹೀನಕೃತ್ಯ ಆರೋಪಿಯ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೇ ಕ್ರೌರ್ಯದ ಭಯಾನಕ ಕಥೆ ಪ್ರದರ್ಶಿಸುತ್ತದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ (ಭಾರತದ ಈಗಿನ CJI) ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿತ್ತು.

2015ರ ಸೆಪ್ಟೆಂಬರ್ 16 ರಂದು ವಿಚಾರಣಾ ನ್ಯಾಯಾಲಯ ಕೀಚಕ ರವಿ ಅಶೋಕ್ ಘುಮಾರನನ್ನು ಅಪರಾಧಿ ಎಂದು ಘೋಷಿಸಿ ಮರಣ ದಂಡನೆ ವಿಧಿಸಿತ್ತು. 2016ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ಈ ಆದೇಶವನ್ನು ಎತ್ತಿಹಿಡಿದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಚುನಾವಣೆ: ಕಾಂಗ್ರೆಸ್ ಖರ್ಚು ಮಾಡಿದ್ದು ಬರೋಬ್ಬರಿ 40 ಕೋ.ರೂ, ಗೆಲುವು ಮಾತ್ರ ಶೂನ್ಯ; ಯಾವ ಪಕ್ಷಗಳು ಎಷ್ಟು ವ್ಯಯಿಸಿವೆ?

Operation Sindoor ವೇಳೆ ಭಾರತ ಸೋತಿತ್ತು: ನನ್ನ ಹೇಳಿಕೆಯಲ್ಲಿ ತಪ್ಪಿಲ್ಲ, ಕ್ಷಮೆ ಕೇಳಲ್ಲ ಎಂದ ಪೃಥ್ವಿರಾಜ್ ಚವಾಣ್

'ಭದ್ರಾ ಮೇಲ್ದಂಡೆ ಯೋಜನೆ ಅನುದಾನ, ನರೇಗಾ, ಜಲ ಜೀವನ್ ಮಿಷನ್ ಬಾಕಿ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ದಿವಾಳಿಯಾಗಿದೆಯೇ?'

ನಮಗೆ ಬಂದಿರುವುದು ಪಿತ್ರಾರ್ಜಿತ ಆಸ್ತಿ, ಇಲ್ಲದಿರುವುದು ಹುಡುಕಿ ಆರೋಪ ಮಾಡುವುದು ಅವರ ಸಂಸ್ಕೃತಿ: BJP ವಿರುದ್ಧ ಕೃಷ್ಣ ಬೈರೇಗೌಡ ಸಿಡಿಮಿಡಿ

ಬೆಳಗಾವಿ ಅಧಿವೇಶನ ಮಧ್ಯೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು: ಈಗ ಸಿಎಂ ಸಿದ್ದರಾಮಯ್ಯ ಹೇಗಿದ್ದಾರೆ?

SCROLL FOR NEXT