ಸುಪ್ರೀಂಕೋರ್ಟ್ 
ದೇಶ

ಫೈನಲ್ ಓವರ್ ನಲ್ಲಿ ಬ್ಯಾಟರ್ ಸಿಕ್ಸರ್ ಹೊಡೆದಂತೆ 'ನಿವೃತ್ತಿಗೂ ಮುನ್ನ' ಅನೇಕ ಆದೇಶ ನೀಡುವ ಜಡ್ಜ್ ಗಳು! ಏನಿದು ಟ್ರೆಂಡ್? ಸುಪ್ರೀಂ ಆಕ್ಷೇಪ

ನಿವೃತ್ತಿಗೆ ಕೇವಲ 10 ದಿನ ಬಾಕಿ ಇರುವಂತೆಯೇ ತನ್ನನ್ನು ಅಮಾನತುಮಾಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಧ್ಯಪ್ರದೇಶದ ಪ್ರದಾನ ಮತ್ತು ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠ ನಡೆಸಿತು.

ನವದೆಹಲಿ: ಕ್ರಿಕೆಟ್ ಪಂದ್ಯವೊಂದರ ಫೈನಲ್ ಓವರ್ ನಲ್ಲಿ ಬ್ಯಾಟರ್ ಸಿಕ್ಸರ್ ಹೊಡೆದಂತೆ ನಿವೃತ್ತಿಗೂ ಮುನ್ನಾ ಜಡ್ಜ್ ಗಳು ಅನೇಕ ಆದೇಶ ನೀಡುತ್ತಿರುವ ಟ್ರೆಂಡ್ ಹೆಚ್ಚಾಗುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕೆಲ ಆಕ್ಷೇಪಾರ್ಹ ನ್ಯಾಯಿಕ ಆದೇಶಕ್ಕೆ ಸಂಬಂಧಿಸಿದಂತೆ ನಿವೃತ್ತಿಗೆ ಕೇವಲ 10 ದಿನ ಬಾಕಿ ಇರುವಂತೆಯೇ ತನ್ನನ್ನು ಅಮಾನತುಮಾಡಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಧ್ಯಪ್ರದೇಶದ ಪ್ರದಾನ ಮತ್ತು ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠ ನಡೆಸಿತು.

'ಅರ್ಜಿದಾರರು ನಿವೃತ್ತಿಗೂ ಮುನ್ನಾ ಸಿಕ್ಸರ್ ಹೊಡೆದಿದ್ದಾರೆ. ಇದೊಂದು ದುರಾದೃಷ್ಟಕರ ಟ್ರೆಂಡ್. ಇದನ್ನು ವಿಸ್ತೃತವಾಗಿ ವಿವರಿಸಲು ಹೋಗುವುದಿಲ್ಲ ಎಂದು ಜಾಯ್ಮಲ್ಯ ಬಾಗ್ಚಿ ಮತ್ತು ವಿಫುಲ್ ಎಂ. ಪಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ ಬುಧವಾರ ಹೇಳಿತು. ನಿವೃತ್ತಿಗೂ ಮುನ್ನಾ ಜಡ್ಜ್ ಗಳು ಅನೇಕ ಆದೇಶಗಳನ್ನು ನೀಡುವ ಟ್ರೆಂಡ್ ಹೆಚ್ಚಾಗುತ್ತಿದೆ ಎಂದು CJI ಆಕ್ಷೇಪ ವ್ಯಕ್ತಪಡಿಸಿದರು.

ಮಧ್ಯಪ್ರದೇಶದ ಪ್ರದಾನ ಮತ್ತು ಜಿಲ್ಲಾ ನ್ಯಾಯಾಧೀಶರು ನವೆಂಬರ್ 30 ರಂದು ನಿವೃತ್ತಿಯಾಗಬೇಕಿತ್ತು. ಆದರೆ, ಎರಡು ನ್ಯಾಯಿಕ ಆದೇಶಗಳ ಕಾರಣಕ್ಕೆ ನವೆಂಬರ್ 19 ರಂದು ಅಮಾನತು ಮಾಡಲಾಗಿತ್ತು. ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಪಿನ್ ಸಾಂಘಿ, ಅಮಾನತು ಆದೇಶದ ಕಾನೂನು ಬದ್ಧತೆಯನ್ನು ಪ್ರಶ್ನಿಸಿದರು.

ನ್ಯಾಯಿಕ ಆದೇಶ ನೀಡಿದ ಕಾರಣಕ್ಕೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ವಿಷಯವಲ್ಲ. ನ್ಯಾಯಿಕ ಆದೇಶದ ಕಾರಣಕ್ಕೆ ಅವರನ್ನು ಅಮಾನತು ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ತಪ್ಪಾದ ಆದೇಶಗಳಿಗಾಗಿ ನ್ಯಾಯಾಂಗ ಅಧಿಕಾರಿಯ ವಿರುದ್ಧ ಸಾಮಾನ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲ್ಲ ಎಂಬುದನ್ನು ಪೀಠವು ತಾತ್ವಿಕವಾಗಿ ಒಪ್ಪಿಕೊಂಡಿತು. ಇದಕ್ಕಾಗಿ ಅವರನ್ನು ಅಮಾನತು ಮಾಡಲು ಸಾಧ್ಯವಿಲ್ಲ. ಆದರೆ ಆದೇಶಗಳು ಸ್ಪಷ್ಟವಾಗಿ ಅಪ್ರಾಮಾಣಿಕವಾಗಿದ್ದರೆ ಹೇಗೆ?ಎಂದು ನ್ಯಾಯಾಂಗ ದೋಷ ಮತ್ತು ದುರ್ನಡತೆಯ ನಡುವಿನ ವ್ಯತ್ಯಾಸವನ್ನು CJI ವಿವರಿಸಿದರು.

ನವೆಂಬರ್ 20 ರಂದು ರಾಜ್ಯದಲ್ಲಿ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60 ರಿಂದ 61 ವರ್ಷಕ್ಕೆ ಹೆಚ್ಚಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು ಎಂಬುದನ್ನು ಸಿಜೆಐ ಪರಿಗಣಿಸಿದರು. ಅದರಿಂದಾಗಿ ನ್ಯಾಯಾಂಗ ಅಧಿಕಾರಿಯು ಈಗ ನವೆಂಬರ್ 30, 2026 ರಂದು ನಿವೃತ್ತರಾಗಲಿದ್ದಾರೆ. ವಿವಾದಿತ ಆದೇಶಗಳನ್ನು ಜಾರಿಗೊಳಿಸುವ ಸಮಯದಲ್ಲಿ ನಿವೃತ್ತಿ ವಯಸ್ಸಿನ ವಿಸ್ತರಣೆಯ ಬಗ್ಗೆ ಅಧಿಕಾರಿಗೆ ತಿಳಿದಿರಲಿಲ್ಲ ಎಂದ CJI ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಅಧಿಕಾರಿ ಯಾಕೆ ಹೈಕೋರ್ಟ್‌ ಮೊರೆ ಹೋಗಲಿಲ್ಲ ಎಂದು ಪ್ರಶ್ನಿಸಿದರು.

ಅಮಾನತು ಪೂರ್ಣ ನ್ಯಾಯಾಲಯದ ತೀರ್ಪನ್ನು ಆಧರಿಸಿರುವುದರಿಂದ ನೇರವಾಗಿ ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಪಡೆಯುವುದು ಹೆಚ್ಚು ಸೂಕ್ತ ಎಂಬುದು ನ್ಯಾಯಾಧೀಶರ ನಂಬಿಕೆಯಾಗಿದೆ ಎಂದು ಸಾಂಘಿ ಪ್ರತಿಕ್ರಿಯಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪೂರ್ಣ ನ್ಯಾಯಾಲಯದ ತೀರ್ಪುಗಳನ್ನು ಹೈಕೋರ್ಟ್‌ಗಳು ರದ್ದುಗೊಳಿಸಿರುವುದನ್ನು ಪೀಠವು ಗಮನಿಸಿತು. ಅಲ್ಲದೇ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿಗಳ ಮೂಲಕ ತನ್ನ ಅಮಾನತಿನ ವಿವರಗಳನ್ನು ಕೋರಿ ಅಧಿಕಾರಿಗೆ ನ್ಯಾಯಾಲಯ ವಿನಾಯಿತಿ ನೀಡಿತು.

ಆಗಾಗ್ಗೆ ಸಲ್ಲಿಸುವ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಪೀಠವು, ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನ್ಯಾಯಾಂಗ ಅಧಿಕಾರಿಗೆ ಸ್ವಾತಂತ್ರ್ಯವನ್ನು ನೀಡಿತು. ನಾಲ್ಕು ವಾರಗಳಲ್ಲಿ ಪ್ರಾತಿನಿಧ್ಯವನ್ನು ಪರಿಗಣಿಸಿ ನಿರ್ಧರಿಸುವಂತೆ ಪೀಠವು ಹೈಕೋರ್ಟ್‌ಗೆ ಸೂಚಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SHANTI Bill: ಅಣು ಶಕ್ತಿಯ ಖಾಸಗೀಕರಣ, ಸುರಕ್ಷತೆ, ಹೊಣೆಗಾರಿಕೆ ಬಗ್ಗೆ ವಿಪಕ್ಷಗಳು ಕಳವಳ: 'ಬಡತನ ಕಡಿಮೆ' ಮಾಡುತ್ತದೆ ಎಂದ ಸುಧಾ ಮೂರ್ತಿ!

'ಬೆಂಕಿ' ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಸೂದೆ ಅಂಗೀಕಾರ

ಪ್ರಧಾನಿ ಮೋದಿಗೆ ದಾಖಲೆಯ 29ನೇ ಅಂತರರಾಷ್ಟ್ರೀಯ ಗೌರವ: ಓಮನ್ ಸುಲ್ತಾನನಿಂದ 'Order of Oman' ಪ್ರದಾನ!

ನಾವು ಭಿಕ್ಷುಕರಲ್ಲ; ಕೇಂದ್ರ ಹಣ ನಿಲ್ಲಿಸಿದರೂ ಉದ್ಯೋಗ ಸೃಷ್ಟಿಸುತ್ತೇವೆ; ಉದ್ಯೋಗ ಖಾತ್ರಿ ಯೋಜನೆಗೆ ಗಾಂಧಿ ಹೆಸರು ಘೋಷಿಸಿದ ದೀದಿ!

ರಾಜ್ಯದಲ್ಲಿ ಮತ್ತೊಂದು ನೀಚ ಕೃತ್ಯ: ಪ್ರೀತಿಯ ಹೆಸರಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್, ಮೂವರ ಬಂಧನ!

SCROLL FOR NEXT