ಲೋಕಸಭೆ 
ದೇಶ

ಸಂಸತ್ ಅಧಿವೇಶನಕ್ಕೆ ತೆರೆ: ಲೋಕಸಭೆ, ರಾಜ್ಯಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಇಂದು ಲೋಕಸಭೆ ಕಲಾಪ ಆರಂಭವಾದ ಸ್ವಲ್ಪ ಸಮಯದ ನಂತರ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ನವದೆಹಲಿ: ಸಂಸತ್ತು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪ ಆರಂಭವಾದ ಸ್ವಲ್ಪ ಸಮಯದಲ್ಲೇ ಲೋಕಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಇಂದು ಲೋಕಸಭೆ ಕಲಾಪ ಆರಂಭವಾದ ಸ್ವಲ್ಪ ಸಮಯದ ನಂತರ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಈ ಅಧಿವೇಶನದಲ್ಲಿ ಸದನವು ಶೇಕಡಾ 111 ರಷ್ಟು ಫಲಪ್ರದವಾಗಿತ್ತು ಎಂದು ಓಂ ಬಿರ್ಲಾ ಹೇಳಿದರು.

ಇನ್ನು ರಾಜ್ಯಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಸಭಾಪತಿ ಸಿ ಪಿ ರಾಧಾಕೃಷ್ಣನ್ ಅವರು ಹೆಚ್ಚಿನ ಉತ್ಪಾದಕತೆ ಮತ್ತು ಫಲಪ್ರದ ಚರ್ಚೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಇದರೊಂದಿಗೆ 15 ದಿನಗಳ ಸಂಸತ್ ಚಳಿಗಾಲದ ಅಧಿವೇಶನಕ್ಕೆ ಅಧಿಕೃತ ತೆರೆ ಬಿದ್ದಿದೆ.

15 ದಿನಗಳ ಈ ಸಂಕ್ಷಿಪ್ತ ಅಧಿವೇಶನದಲ್ಲಿ, ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆಗಳ ಹೊರತಾಗಿಯೂ, ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025 ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು.

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ನರೇಗಾ ಯೋಜನೆ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಜಿ ರಾಮ್ ಜಿ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕಾರಿಸಲಾಯಿತು.

ಸದನವು 150 ವರ್ಷಗಳ ವಂದೇ ಮಾತರಂ ಮತ್ತು ಚುನಾವಣಾ ಸುಧಾರಣೆಗಳ ಕುರಿತು ಎರಡು ಚರ್ಚೆಗಳನ್ನು ಸಹ ಕೈಗೊಂಡಿತು - ಇದು ರಾಜಕೀಯವಾಗಿ ಉತ್ಸಾಹಭರಿತ ವಾತಾವರಣಕ್ಕೆ ಸಾಕ್ಷಿಯಾಯಿತು.

ಉನ್ನತ ಶಿಕ್ಷಣದ ನಿಯಂತ್ರಣ ಸಾಧಿಸುವ ಮಸೂದೆಯನ್ನು ಎರಡು ಸದನಗಳ ಜಂಟಿ ಸಮಿತಿಗೆ ಉಲ್ಲೇಖಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ, 5 ವರ್ಷ ನಾನೇ ಸಿಎಂ': ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಪುನರುಚ್ಛಾರ

ಬೆಂಗಳೂರು: ಮನೆ ಬಳಿ ಆಟವಾಡ್ತಿದ್ದ ಬಾಲಕನಿಗೆ 'ಕಾಲಿನಿಂದ ಒದ್ದು' ವಿಕೃತಿ! ಪಕ್ಕದ ಮನೆಯ ಆರೋಪಿ ಬಂಧನ, ಬಿಡುಗಡೆ

Video: "ಉಸಿರಾಡಲು ಆಗುತ್ತಿಲ್ಲ"; ಕಸದ ಬಿಸಿಗೆ ರೊಚ್ಚಿಗೆದ್ದ ಐಂದ್ರಿತಾ ರೇ; ಮುನಿರತ್ನಗೆ ಟ್ಯಾಗ್ ಮಾಡಿ ಆಕ್ರೋಶ!

ಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ವಿರುದ್ಧ ಮತ್ತೆ ಭುಗಿಲೆದ್ದ ಹಿಂಸಾಚಾರ; ಹಲ್ಲೆ, ಬೆಂಕಿ ಹಚ್ಚಿ ವ್ಯಕ್ತಿಯ ಕೊಲೆ!

ಪಾಕ್ ಮಹಿಳೆಯ ಪೌರತ್ವ ಅರ್ಜಿ: ವೀಸಾ ಅವಧಿ ಮುಗಿಯುವ ಮುನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ- ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

SCROLL FOR NEXT