ಕೋಲ್ಕತ್ತಾ: ಬಿಜೆಪಿ ಜೊತೆಗೆ RSS ಹೋಲಿಕೆ ಅಥವಾ ರಾಜಕೀಯ ದೃಷ್ಟಿಯಲ್ಲಿ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ತಪ್ಪು ಗ್ರಹಿಕೆಗೆ ಕಾರಣವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ' RSS 100 ವ್ಯಾಖ್ಯಾನ್ ಮಾಲಾ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಆರ್‌ಎಸ್‌ಎಸ್ ಅನ್ನು ಕೇವಲ ಮತ್ತೊಂದು ಸೇವಾ ಸಂಸ್ಥೆಯಾಗಿ ನೋಡುವುದು ಸರಿಯಲ್ಲ. ನೀವು ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಹೋಲಿಕೆ ಮಾಡುವುದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಎಂದರು.
ಆರ್‌ಎಸ್‌ಎಸ್ ನ್ನು ಬಿಜೆಪಿ ಜೊತೆಗೆ ಹೋಲಿಕೆ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿದರು. ಅನೇಕ ಜನರು ಬಿಜೆಪಿ ಜೊತೆಗೆ ಹೋಲಿಕೆ ಮಾಡಿ 'ಸಂಘ'ವನ್ನು ಅರ್ಥಮಾಡಿಕೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಇದು ದೊಡ್ಡ ತಪ್ಪು ಎಂದು ಭಾಗವತ್ ಹೇಳಿದರು.
ಶುಕ್ರವಾರ ಸಿಲಿಗುರಿಯಲ್ಲಿ ಆರ್ ಎಸ್ ಎಸ್ ಉತ್ತರ ಬಂಗಾ ಪ್ರಾಂತದಿಂದಪ್ರಬುದ್ಧ ನಾಗರಿಕ ಸಮ್ಮೇಳನ ಆಯೋಜಿಸಲಾಗಿತ್ತು.
ಆರ್ ಎಸ್ ಎಸ್ ಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉತ್ತರ ಬಂಗಾಳದ ಎಂಟು ಜಿಲ್ಲೆಗಳ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ನೂರಕ್ಕೂ ಹೆಚ್ಚು ಪ್ರಬುದ್ಧ ಪ್ರತಿನಿಧಿಗಳು ಭಾಗವಹಿಸಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ರಾವ್ ಭಾಗವತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.