ಚೀನಾದ ರೈಫಲ್ ಸ್ಕೋಪ್ 
ದೇಶ

ಜಮ್ಮು: 6 ವರ್ಷದ ಮಗುವಿನ ಕೈಯಲ್ಲಿ ಸ್ನೈಪರ್‌ಗೆ ಬಳಸುವ ಚೀನಾದ ರೈಫಲ್ ಸ್ಕೋಪ್; NIA ಕಚೇರಿ ಬಳಿಯ ಕಸದ ತೊಟ್ಟಿಯಲ್ಲಿ ಪತ್ತೆ!

ಜಮ್ಮುವಿನ ಅಸ್ರಾರಾಬಾದ್‌ನಲ್ಲಿ 6 ವರ್ಷದ ಮಗುವೊಂದು ಸ್ನೈಪರ್‌ಗೆ ಬಳಸುವ ರೈಫಲ್‌ ಸ್ಕೋಪ್‌ ಹಿಡಿದು ಆಟವಾಡುತ್ತಿದ್ದದ್ದು ಕಂಡುಬಂದಿದೆ.

ನವದೆಹಲಿ: ‌ಜಮ್ಮು-ಕಾಶ್ಮೀರದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ಕಚೇರಿ ಬಳಿಯ ಕಸದ ತೊಟ್ಟಿಯೊಂದರಲ್ಲಿ ಚೀನಾ ನಿರ್ಮಿತ ಅಸಾಲ್ಟ್‌ ರೈಫಲ್‌ ಸ್ಕೋಪ್‌ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮುವಿನ ಅಸ್ರಾರಾಬಾದ್‌ನಲ್ಲಿ 6 ವರ್ಷದ ಮಗುವೊಂದು ಸ್ನೈಪರ್‌ಗೆ ಬಳಸುವ ರೈಫಲ್‌ ಸ್ಕೋಪ್‌ ಹಿಡಿದು ಆಟವಾಡುತ್ತಿದ್ದದ್ದು ಕಂಡುಬಂದಿದೆ. ಬಳಿಕ ಪೊಲೀಸರು ಆ ಮಗುವಿನ ಕುಟುಂಬಸ್ಥರ ವಿಚಾರಣೆ ನಡೆಸಿದಾಗ, ಕಸದ ತೊಟ್ಟಿ ಬಳಿ ಮಗುವಿಗೆ ಸಿಕ್ಕಿದ್ದು ಎಂದು ಹೇಳಿದ್ದಾರೆ. ಈ ಸ್ಕೋಪ್‌ ಅನ್ನು ದೂರದ ಗುರಿಗಾಗಿ ಸ್ನೈಪರ್‌ ರೈಫಲ್‌ಗಳಿಗೆ ಬಳಸುತ್ತಾರೆ.

ಇದು ಚೀನಾದ ಸ್ನೈಪರ್ ರೈಫಲ್‌ ಸ್ಕೋಪ್‌ ಅನ್ನೋದು ತಿಳಿಯುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಸ್ಕೋಪ್‌ ಪತ್ತೆಯಾದ ಸ್ಥಳಕ್ಕೆ ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿಗಳೂ ಭೇಟಿ ನೀಡಿದ್ದಾರೆ. ಮಹತ್ವದ ಬೆಳವಣಿಗೆ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ.

ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡಬಾರದು ಮತ್ತು ಯಾವುದೇ ಸಂಶಯಾಸ್ಪದ ವಸ್ತುಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಮ್ಮು ಪೊಲೀಸರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ