ಪ್ರಶ್ನೆ ಪತ್ರಿಕೆ ವಿವಾದ 
ದೇಶ

'ಮುಸ್ಲಿಮರ ಮೇಲಿನ ದೌರ್ಜನ್ಯ': ಪ್ರಶ್ನೆ ಪತ್ರಿಕೆ ವಿವಾದ, JMI ಪ್ರೊಫೆಸರ್ ಅಮಾನತು!

ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಚರ್ಚಿಸಿ, ಸೂಕ್ತ ಉದಾಹರಣೆಗಳನ್ನು ನೀಡುವಂತೆ ಪ್ರಶ್ನೆ ಕೇಳಲಾಗಿತ್ತು. ಪ್ರೊ.ವೀರೇಂದ್ರ ಬಾಲಾಜಿ ಶಹಾರೆ ಈ ಪ್ರಶ್ನೆ ಆಯ್ಕೆ ಮಾಡಿದ್ದರು ಎನ್ನಲಾಗಿದೆ.

ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI)ಪ್ರಾಧ್ಯಾಪಕರೊಬ್ಬರು ಸೆಮಿಸ್ಟರ್ ಪರೀಕ್ಷೆಯೊಂದಕ್ಕೆ ಆಯ್ಕೆ ಮಾಡಿದ ಪ್ರಶ್ನೆಯು ಸಾಮಾಜಿಕ ಮಾಧ್ಯಮದಲ್ಲಿ ವಿವಾದ ಹಾಗೂ ತೀವ್ರ ಆಕ್ರೋಶಕ್ಕೆ ಕಾರಣವಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ತನಿಖೆಗೆ ವಿಶ್ವವಿದ್ಯಾನಿಲಯ ತನಿಖಾ ಸಮಿತಿಯೊಂದನ್ನು ರಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ನಡೆದ BA (Hons)Social work semester Exmination ನಲ್ಲಿ ಕೇಳದ 15 ಅಂಕಗಳ ಪ್ರಶ್ನೆಗೆ ಸಂಬಂಧಿಸಿದ ವಿವಾದ ಇದಾಗಿದೆ.

ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಚರ್ಚಿಸಿ, ಸೂಕ್ತ ಉದಾಹರಣೆಗಳನ್ನು ನೀಡುವಂತೆ ಪ್ರಶ್ನೆ ಕೇಳಲಾಗಿತ್ತು. ಪ್ರೊ.ವೀರೇಂದ್ರ ಬಾಲಾಜಿ ಶಹಾರೆ ಈ ಪ್ರಶ್ನೆ ಆಯ್ಕೆ ಮಾಡಿದ್ದರು ಎನ್ನಲಾಗಿದೆ.

ದೂರುಗಳು ಬಂದ ನಂತರ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ, ಸಂಬಂಧಪಟ್ಟ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೈಕ್ಷಣಿಕ ಜವಾಬ್ದಾರಿ ಮತ್ತು ಸಾಂಸ್ಥಿಕ ಶಿಸ್ತನ್ನು ಎತ್ತಿ ಹಿಡಿಯಲು ಈ ಕ್ರಮ ಕೈಗೊಳ್ಳಲಾಗಿದೆ. ರಿಜಿಸ್ಟ್ರಾರ್ ಸಿಎ ಶೇಖ್ ಸಫಿವುಲ್ಲಾ ಅವರು ಸಹಿ ಮಾಡಿದ ಆದೇಶ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಮುಂದಿನ ಆದೇಶದವರೆಗೆ ಅಮಾನತುಗೊಳಿಸಿರುವುದನ್ನು ದೃಢಪಡಿಸಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನು ಹೊಂದಿರುವ ಕೇಂದ್ರೀಯ ವಿಶ್ವವಿದ್ಯಾನಿಲಯವಾಗಿದೆ. ಪ್ರಶ್ನೆಯು ದುರುದ್ದೇಶಪೂರಿತ ಉದ್ದೇಶವನ್ನು ತೋರಿಸುತ್ತದೆ ಎಂದು ಗುಪ್ತಾ ಎಂಬುವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವದೆಹಲಿ: ಸಿಎಂ ಬದಲಾವಣೆ ವದಂತಿ; 'ಅಡ್ಡ ಗೋಡೆ ಮೇಲೆ ದೀಪ' ಇಟ್ಟಂತೆ ಮಾತನಾಡಿದ DCM ಡಿ.ಕೆ ಶಿವಕುಮಾರ್! Video

ಸಚಿವ ಜಮೀರ್ ಖಾನ್ ಆಪ್ತನಿಗೆ ಲೋಕಾಯುಕ್ತ ಶಾಕ್: 50ಕ್ಕೂ ಹೆಚ್ಚು ಅಧಿಕಾರಿಗಳಿಂದ ಬೆಂಗಳೂರು, ಕೊಡಗು ಸೇರಿ 10 ಕಡೆ ದಾಳಿ!

Video: ಮೊರಾರ್ಜಿ ಶಾಲಾ ಆವರಣಕ್ಕೆ ನುಗ್ಗಿದ ಒಂಟಿ ಸಲಗ, ಬೆಚ್ಚಿ ಬಿದ್ದ ವಿದ್ಯಾರ್ಥಿಗಳು!

ಇಂಡಿಗೋ ಅವ್ಯವಸ್ಥೆ ನಂತರ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಅನುಮತಿ

ಸಾ** ಹೇಳಿಕೆ: 'ಉದ್ದೇಶ ಒಳ್ಳೆಯದೇ ಆಗಿತ್ತು.. ವಿವಾದ ಬೇಕಿರಲಿಲ್ಲ..': ಕೊನೆಗೂ ಕ್ಷಮೆ ಕೋರಿದ ನಟ ಶಿವಾಜಿ!

SCROLL FOR NEXT