ಜೂನ್ 4ರಂದು ವಿಧಾನಸೌಧದ ಬಳಿ ರಾಯಲ್ ಚಾಲೆಂಜ್ ಬೆಂಗಳೂರು IPL ತಂಡದ ವಿಜಯೋತ್ಸವವು ದುರಂತದಲ್ಲಿ ಮುಕ್ತಾಯವಾಯಿತು 
ದೇಶ

Year Ender 2025: ಭಾರತದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗಳು

ಇದರಿಂದಾಗಿ ಈ ವರ್ಷ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಈ ಕಾಲ್ತುಳಿತಗಳಿಗೆ ಕಾರಣಗಳು ಬದಲಾಗಬಹುದಾದರೂ, ಕಳಪೆ ಮಟ್ಟದಲ್ಲಿ ಜನಸಂದಣಿ ನಿರ್ವಹಣೆ ಮತ್ತು ಸರಿಯಾದ ಸಾರ್ವಜನಿಕ ಮೂಲಸೌಕರ್ಯಗಳ ಕೊರತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ.

ಧಾರ್ಮಿಕ ಹಬ್ಬಗಳಿಂದ ಕ್ರೀಡಾ ಆಚರಣೆಗಳವರೆಗೆ, ಅಭಿಮಾನಿಗಳ ಉನ್ಮಾದದಿಂದ ರಾಜಕೀಯ ಪ್ರಚಾರಗಳವರೆಗೆ, 2025 ರಲ್ಲಿ ತೀವ್ರ ಜನದಟ್ಟಣೆಯಿಂದ ಕಾಲ್ತುಳಿತ ಘಟನೆಗಳು ಸಂಭವಿಸಿವೆ.

ಇದರಿಂದಾಗಿ ಈ ವರ್ಷ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಈ ಕಾಲ್ತುಳಿತಗಳಿಗೆ ಕಾರಣಗಳು ಬದಲಾಗಬಹುದಾದರೂ, ಕಳಪೆ ಮಟ್ಟದಲ್ಲಿ ಜನಸಂದಣಿ ನಿರ್ವಹಣೆ ಮತ್ತು ಸರಿಯಾದ ಸಾರ್ವಜನಿಕ ಮೂಲಸೌಕರ್ಯಗಳ ಕೊರತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ.

ಭಾರತದಲ್ಲಿ ಸುಮಾರು ಶೇಕಡಾ 80ರಷ್ಟು ಕಾಲ್ತುಳಿತಗಳು ಧಾರ್ಮಿಕ ಸಭೆಗಳು ಅಥವಾ ತೀರ್ಥಯಾತ್ರೆಗಳಲ್ಲಿ ಸಂಭವಿಸುತ್ತವೆ. ಈ ವರ್ಷ ಸುದ್ದಿ ಮಾಡಿದ ಕೆಲವು ಪ್ರಮುಖ ಕಾಲ್ತುಳಿತ ಸುದ್ದಿಗಳು ಹೀಗಿವೆ-

ಜನವರಿ 8, 2025: ತಿರುಪತಿ

ಸಾವುನೋವುಗಳು: ಆರು ಜನರ ಸಾವು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡರು

ಕಾರಣ: ತಿರುಮಲದಲ್ಲಿ ವೈಕುಂಠ ಏಕಾದಶಿ ಉತ್ಸವದ ಟಿಕೆಟ್‌ಗಳಿಗಾಗಿ ಜನರು ನೂಕುನುಗ್ಗಲು

ಜನವರಿ 29: ಮಹಾ ಕುಂಭ

ಸಾವುನೋವುಗಳು: ಮೂವತ್ತಕ್ಕೂ ಹೆಚ್ಚು ಜನರು ಮೃತಪಟ್ಟು, 60 ಕ್ಕೂ ಹೆಚ್ಚು ಜನರು ಗಾಯಗೊಂಡರು

ಕಾರಣ: ಲಕ್ಷಾಂತರ ಯಾತ್ರಿಕರ ಒತ್ತಡದಲ್ಲಿ ಅಖಾರ ಮಾರ್ಗದಲ್ಲಿರುವ ಬ್ಯಾರಿಕೇಡ್‌ಗಳು ಕುಸಿದು ಬಿದ್ದವು, ಇದರಿಂದಾಗಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಕಾಯುತ್ತಿದ್ದ ಭಕ್ತರು ತುಳಿತಕ್ಕೊಳಗಾದರು.

ಫೆಬ್ರವರಿ 15: ನವದೆಹಲಿ ರೈಲು ನಿಲ್ದಾಣ

ಸಾವುನೋವುಗಳು: ಕನಿಷ್ಠ 18 ಜನರು ಮೃತಪಟ್ಟು, ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡರು

ಕಾರಣ: ಮಹಾ ಕುಂಭದಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ರೈಲುಗಳನ್ನು ಹತ್ತಲು ಕಾಯುತ್ತಿದ್ದ ಪ್ರಯಾಣಿಕರ ಗುಂಪಿನಲ್ಲಿ ಕಾಲ್ತುಳಿತ ಸಂಭವಿಸಿತು.

ಮೇ 3: ಗೋವಾ

ಸಾವುನೋವುಗಳು: ಕನಿಷ್ಠ ಏಳು ಜನರು ಮೃತಪಟ್ಟು, 80 ಜನರು ಗಾಯಗೊಂಡರು

ಕಾರಣ: ಶ್ರೀ ಲೈರೈ ದೇವಿ ದೇವಸ್ಥಾನದಲ್ಲಿ ವಾರ್ಷಿಕ 'ಲೈರೈ ಜಾತ್ರೆ'ಯಲ್ಲಿ ಭಾಗವಹಿಸಲು ಲಕ್ಷಾಂತರ ಭಕ್ತರು ಸೇರಿದ್ದರು.

ಜೂನ್ 4: ಬೆಂಗಳೂರು

ಸಾವುನೋವುಗಳು: 11 ಸಾವು, 50 ಕ್ಕೂ ಹೆಚ್ಚು ಜನರಿಗೆ ಗಾಯ

ಕಾರಣ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದ ವಿಜಯೋತ್ಸವದ ಸಂಭ್ರಮಾಚರಣೆ ದುರಂತಮಯವಾಗಿ ಮಾರ್ಪಟ್ಟಿತು. ಸುಮಾರು 32,000 ಆಸನ ಸಾಮರ್ಥ್ಯವಿರುವ ಸ್ಥಳದಲ್ಲಿ 2.5 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರಿಂದ ಗೇಟ್‌ಗಳಲ್ಲಿ ಅಸ್ತವ್ಯಸ್ತವಾದ ಕಾಲ್ತುಳಿತ ಉಂಟಾಯಿತು.

ಸೆಪ್ಟೆಂಬರ್ 27: ಕರೂರ್

ಸಾವುನೋವುಗಳು: 41 ಜನರ ಸಾವು, 100 ಕ್ಕೂ ಹೆಚ್ಚು ಜನರಿಗೆ ಗಾಯ

ಕಾರಣ: ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರ್ಯಾಲಿಗಾಗಿ ಸಾವಿರಾರು ಜನರು ಜಮಾಯಿಸಿದರು. ಆದರೆ ಅವರ ತಡವಾದ ಆಗಮನದಿಂದಾಗಿ ಜನಸಮೂಹ ಅವರ ವಾಹನದ ಕಡೆಗೆ ನುಗ್ಗಿ ಕಾಲ್ತುಳಿತಕ್ಕೆ ಕಾರಣವಾಯಿತು.

ನವೆಂಬರ್ 1: ಶ್ರೀಕಾಕುಳಂ

ಸಾವುನೋವುಗಳು: ಒಂಬತ್ತು ಜನರ ಸಾವು, ಕನಿಷ್ಠ 15 ಜನರಿಗೆ ಗಾಯ

ಕಾರಣ: ಏಕಾದಶಿಯಂದು ಕಾಶಿಬುಗ್ಗ ವೆಂಕಟೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕಾಗಿ 20,000 ಕ್ಕೂ ಹೆಚ್ಚು ಜನರು ಸೇರಿದ್ದರು, ಆದರೆ ಸಾಮಾನ್ಯವಾಗಿ ಅಲ್ಲಿ ಕೇವಲ 2,000 ಭಕ್ತರು ಮಾತ್ರ ಭೇಟಿ ನೀಡುತ್ತಾರೆ. ಹೆಚ್ಚಿನ ಜನದಟ್ಟಣೆ ಕಾಲ್ತುಳಿತಕ್ಕೆ ಕಾರಣವಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹಿರಂಗವಾಗಿ BJP- RSS ಹೊಗಳಿ, 'ವಿವಾದದ ಕಿಡಿ' ಹೊತ್ತಿಸಿದ ದಿಗ್ವಿಜಯ್ ಸಿಂಗ್!

Kogilu layout Demolition: ಅಕ್ರಮ ತೆರವು ಮಾಡಿಲ್ಲ, ವಲಸಿಗರಾದ್ರೂ ಮುಸ್ಲಿಂ ಕುಟಂಬಗಳಿಗೆ ಬೇರೆಡೆ ಜಾಗ ಕೋಡ್ತೀವಿ: ಸಿದ್ದರಾಮಯ್ಯ

ಚೀನಾ ರೈಲಿನ ವಿಶ್ವದಾಖಲೆ: ಕೇವಲ 2 ಸೆಕೆಂಡ್ ನಲ್ಲಿ 700 Kmph ವೇಗ! Video

'ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವನಷ್ಟು ಒಳ್ಳೆಯವನಲ್ಲ: ವಿಜಯಲಕ್ಷ್ಮಿಗೆ ತಿರುಗೇಟು ನೀಡಿದ ಕಿಚ್ಚ ಸುದೀಪ್!

Pushpa 2 ಕಾಲ್ತುಳಿತ ಪ್ರಕರಣ: ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ, ನಟ ಅಲ್ಲು ಅರ್ಜುನ್ 11ನೇ ಆರೋಪಿ!

SCROLL FOR NEXT