ರಾಹುಲ್ ಗಾಂಧಿ 
ದೇಶ

ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ: 'ಭಯಾನಕ ದ್ವೇಷ' ದ ಅಪರಾಧ, BJP ವಿರುದ್ಧ ರಾಹುಲ್ ಗಾಂಧಿ ಕಿಡಿ!

ಡಿಸೆಂಬರ್ 9 ರಂದು ಡೆಹ್ರಾಡೂನ್‌ನಲ್ಲಿ ನಡೆದಿದ್ದ ಜನಾಂಗೀಯ ನಿಂದನೆಯನ್ನು ವಿರೋಧಿಸಿದ ಪಶ್ಚಿಮ ತ್ರಿಪುರಾ ಜಿಲ್ಲೆಯ ನಂದನ್‌ನಗರದ 24 ವರ್ಷದ ಏಂಜೆಲ್ ಚಕ್ಮಾ ಮೇಲೆ ಆರು ಜನರ ಗುಂಪು ಹಲ್ಲೆ ನಡೆಸಿತ್ತು

ನವದೆಹಲಿ: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆಯನ್ನು 'ಭಯಾನಕ ದ್ವೇಷದ ಅಪರಾಧ' ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೇ ಆಡಳಿತಾರೂಢ ಬಿಜೆಪಿ ದ್ವೇಷವನ್ನು 'ಸಾಮಾನ್ಯಗೊಳಿಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.

ಡಿಸೆಂಬರ್ 9 ರಂದು ಡೆಹ್ರಾಡೂನ್‌ನಲ್ಲಿ ನಡೆದಿದ್ದ ಜನಾಂಗೀಯ ನಿಂದನೆಯನ್ನು ವಿರೋಧಿಸಿದ ಪಶ್ಚಿಮ ತ್ರಿಪುರಾ ಜಿಲ್ಲೆಯ ನಂದನ್‌ನಗರದ 24 ವರ್ಷದ MBA ವಿದ್ಯಾರ್ಥಿ ಏಂಜೆಲ್ ಚಕ್ಮಾ ಮೇಲೆ ಆರು ಜನರ ಗುಂಪು ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 26 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ,

ದ್ವೇಷವು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ಡೆಹ್ರಾಡೂನ್‌ನಲ್ಲಿ ಏಂಜೆಲ್ ಚಕ್ಮಾ ಮತ್ತು ಅವರ ಸಹೋದರ ಮೈಕೆಲ್‌ಗೆ ಏನಾಯಿತು ಎಂಬುದು ಭಯಾನಕ ದ್ವೇಷದ ಅಪರಾಧ ಎಂದಿದ್ದಾರೆ.

ದ್ವೇಷವು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ವಿಶೇಷವಾಗಿ ನಮ್ಮ ಯುವ ಜನತೆಗೆ ವಿಷಕಾರಿ ಅಂಶಗಳನ್ನು ತುಂಬುವ ಮೂಲಕ ಮತ್ತು ಬೇಜವಾಬ್ದಾರಿತನದ ಹೇಳಿಕೆಗಳಿಂದ ಅದನ್ನು ಸಾಮಾನ್ಯಗೊಳಿಸಲಾಗುತ್ತಿದೆ. ಆಡಳಿತಾರೂಢ ಬಿಜೆಪಿಯ ದ್ವೇಷದ ನಾಯಕತ್ವದಿಂದ ಇದನ್ನು ಸಾಮಾನ್ಯ ಎಂಬಂತೆ ಮಾಡಲಾಗುತ್ತಿದೆ. ಭಾರತವನ್ನು ಗೌರವ ಮತ್ತು ಏಕತೆಯ ಮೇಲೆ ನಿರ್ಮಿಸಲಾಗಿದೆ. ಭಯ ಮತ್ತು ನಿಂದನೆ ಮೇಲೆ ಅಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮದು ಪ್ರೀತಿ ಮತ್ತು ವೈವಿಧ್ಯತೆಯ ದೇಶವಾಗಿದೆ. ನಾವು ಸಹ ಭಾರತೀಯರನ್ನು ಗುರಿಯಾಗಿಟ್ಟುಕೊಂಡು ದೂರ ನೋಡುವ ಸತ್ತ ಸಮಾಜವಾಗಬಾರದು. ನಮ್ಮ ದೇಶ ಏನಾಗಲು ಅವಕಾಶ ನೀಡುತ್ತಿದ್ದೇವೆ ಎಂಬುದನ್ನು ನಾವು ಪ್ರತಿಬಿಂಬಿಸಬೇಕು ಮತ್ತು ಎದುರಿಸಬೇಕು. ನನ್ನ ಆಲೋಚನೆಗಳು ಚಕ್ಮಾ ಕುಟುಂಬ ಮತ್ತು ತ್ರಿಪುರಾ ಮತ್ತು ಈಶಾನ್ಯದ ಜನರೊಂದಿಗೆ ಇವೆ. ನಿಮ್ಮನ್ನು ನಮ್ಮ ಸಹ ಭಾರತೀಯ ಸಹೋದರ ಸಹೋದರಿಯರೆಂದು ಕರೆಯಲು ನಾವು ಹೆಮ್ಮೆಪಡುತ್ತೇವೆ" ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಬಗ್ಗೆ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

ಪೊಲೀಸರ ಪ್ರಕಾರ, ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿ ಬಂಧನಕ್ಕೆ ಮಾಹಿತಿ ನೀಡುವವರಿಗೆ ಉತ್ತರಾಖಂಡ ಪೊಲೀಸರು 25,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ಈ ಮಧ್ಯೆ ಪ್ರಮುಖ ಆರೋಪಿ ಬಂಧನಕ್ಕೆ ಮಾಹಿತಿ ನೀಡುವವರಿಗೆ ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಸೋಮವಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.

ಏಂಜೆಲ್ ಚಕ್ಮಾಗೆ ನ್ಯಾಯ ಕೋರಿ ತಿಪ್ರಾ ಸ್ಥಳೀಯ ವಿದ್ಯಾರ್ಥಿಗಳ ಒಕ್ಕೂಟದಡಿ ಸಾವಿರಾರು ವಿದ್ಯಾರ್ಥಿಗಳು ಭಾನುವಾರ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದರು. ಹತ್ಯೆಗೆ ಕಾರಣರಾದ ಎಲ್ಲರನ್ನು ಬಂಧಿಸಲಾಗುವುದು ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ ಎಂದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಭಾನುವಾರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅವನನ್ನು ಗಲ್ಲಿಗೇರಿಸುವವರೆಗೂ ಹೋರಾಟ': ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

ಭಾರತೀಯ ಸೇನೆಗೆ 79,000 ಕೋಟಿ ರೂ. ಮೌಲ್ಯದ 'ಆಧುನಿಕ ಶಸ್ತ್ರಾಸ್ತ್ರ' ಖರೀದಿಗೆ DAC ಅನುಮೋದನೆ!

ಉಕ್ರೇನ್ - ರಷ್ಯಾ ಸಮರ ಕೊನೆಗೊಳಿಸಲು ಸಭೆ: ಟ್ರಂಪ್‌ಗೆ 50 ವರ್ಷಗಳ ಭದ್ರತಾ ಗ್ಯಾರಂಟಿ ಕೇಳಿದ ಝೆಲೆನ್ಸ್ಕಿ

ರಷ್ಯಾ ಸೇನೆಗೆ ಸೇರಿದ್ದ10 ಭಾರತೀಯರ ಸಾವು: ವರದಿ

Horrific Video: Mahindra Bolero ವಾಹನದ ಮೇಲೆ ಬಿದ್ದ ಟ್ರಕ್, ಕಾರು ಅಪ್ಪಚ್ಚಿ, ಚಾಲಕ ಸಾವು!

SCROLL FOR NEXT