ಕಾರಿನಲ್ಲೇ ಪ್ರಾಣ ಬಿಟ್ಟ ಚಾಲಕ 
ದೇಶ

ತೀವ್ರ ಚಳಿ ಎಂದು ಕ್ಯಾಬ್ ನಲ್ಲೇ ಮಲಗಿದ ಚಾಲಕ, ಅಲ್ಲೇ ಸಾವು.. ಕಾರಣ ಏನು ಗೊತ್ತಾ?

ಉತ್ತರ ಪ್ರದೇಶದ ಮಥುರಾದ ಮನೀಶ್ ಗಂಧರ್ ಎಂಬ ಟ್ಯಾಕ್ಸಿ ಚಾಲಕ ತನ್ನ ಕಾರಿನೊಳಗೆ ಮೃತಪಟ್ಟಿರುವುದು ಪತ್ತೆಯಾಗಿದೆ.

ನೈನಿತಾಲ್: ಉತ್ತರಾಖಂಡದ ನೈನಿತಾಲ್ ನಲ್ಲಿ ಕಾರಿನಲ್ಲಿ ಮಲಗಿದ್ದ ಕಾರು ಚಾಲಕ ಅಲ್ಲಿಯೇ ಪ್ರಾಣ ಬಿಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಮಥುರಾದ ಮನೀಶ್ ಗಂಧರ್ ಎಂಬ ಟ್ಯಾಕ್ಸಿ ಚಾಲಕ ತನ್ನ ಕಾರಿನೊಳಗೆ ಮೃತಪಟ್ಟಿರುವುದು ಪತ್ತೆಯಾಗಿದೆ. ಟ್ಯಾಕ್ಸಿ ಚಾಲಕ ಡಿಸೆಂಬರ್ 27 ರಂದು ನೋಯ್ಡಾದಿಂದ ಪ್ರಯಾಣಿಕರನ್ನು ಕರೆದುಕೊಂಡು ಅದೇ ದಿನ ಪ್ರವಾಸಿ ತಾಣವಾದ ಉತ್ತರಾಖಂಡದ ನೈನಿತಾಲ್ ತಲುಪಿದನು.

ರಾೃತ್ರಿ ಪ್ರಯಾಣಿಕರು ರೂಮಿಗೆ ತೆರಳಿದರೆ ಚಾಲಕ ತನ್ನ ಕಾರಿನಲ್ಲೇ ಮಲಗಿದ್ದ, ರಾತ್ರಿ 9:00 ರ ಸುಮಾರಿಗೆ ಸುಖತಾಲ್‌ನಲ್ಲಿ ತನ್ನ ಕಾರನ್ನು ನಿಲ್ಲಿಸಿದ್ದ. ತೀವ್ರ ಚಳಿ ಇದ್ದಿದ್ದರಿಂದ ಬೆಚ್ಚಗಿರಲು ಇದ್ದಿಲಿಗೆ ಬೆಂಕಿ ಹಚ್ಚಿ ಅದನ್ನು ಕಾರಿನೊಳಗೆ ಇಟ್ಟು ಕಾರಿ ಕಿಟಕಿಗಳನ್ನು ಮುಚ್ಚಿ ಮಲಗಿದ್ದಾನೆ. ಆದರೆ ಇದ್ದಿಲಿನ ಹೊಗೆ ಹೊರಹೋಗಲಾಗದೇ ಕಾರಿನಲ್ಲೇ ಉಳಿದಿದ್ದರಿಂದ ಕಾರಿನಲ್ಲೇ ಉಸಿರುಗಟ್ಟಿ ಚಾಲಕ ದಾರುಣ ಸಾವನ್ನಪ್ಪಿದ್ದಾನೆ.

ಮರುದಿನ ಅಂದರೆ ಡಿಸೆಂಬರ್ 28 ರಂದು ಬೆಳಿಗ್ಗೆ, ಪಾರ್ಕಿಂಗ್ ಸಿಬ್ಬಂದಿ ಬಂದು ಕಾರಿನ ಚಾಲಕ ಪ್ರತಿಕ್ರಿಯಿಸಿಲ್ಲ. ಇದರಿಂದ ಅನುಮಾನಗೊಂಡ ಅವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರು ಬಂದು ಅವನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಆತ ಎಚ್ಚರವಾಗಲಿಲ್ಲ.

ಅಂತಿಮವಾಗಿ ಪೊಲೀಸರು ಕಿಟಕಿಯನ್ನು ಒಡೆದು ಅತನನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆತ ಎಚ್ಚರಗೊಂಡಿಲ್ಲ. ಕೊನೆಗೆ ಆತನ್ನು ಪರೀಕ್ಷಿಸಿದಾಗ ಆತ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಆತನನ್ನು ಪರಿಶೀಲಿಸಿದಾಗ ಆತನ ಬಾಯಿಂದ ನೊರೆ ಬಂದಿದೆ. ಇದು ಆತನ ದೇಹಕ್ಕೆ ವಿಷ ಹೊಕ್ಕಿರುವುದು ಸೂಚಿಸುತ್ತದೆ.

ಕೂಡಲೇ ಚಾಲಕನನ್ನು ಬಿಡಿ ಪಾಂಡೆ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಆತ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಟ್ಯಾಕ್ಸಿ ಚಾಲಕ ಮತ್ತು ಮಥುರಾ ಜಿಲ್ಲೆಯ ಸಿರೋಹಾ ಯಮುನಾಪರ್ ನಿವಾಸಿ ಮನೀಶ್ ಗಂಧರ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಐದು ದುಬಾರಿ ಕಾರುಗಳು, ಲಕ್ಸುರಿ ಜೀವನ: ಅನೇಕ 'ಕ್ರಿಮಿನಲ್ ಕೇಸ್' ಗಳು! ED ದಾಳಿ, ಯಾರಿದು ರಾವ್ ಇಂದರ್ ಜೀತ್ ಯಾದವ್? Video

ಬ್ಲಿಂಕಿಟ್ CFO ವಿಪಿನ್ ಕಪೂರಿಯಾ ರಾಜೀನಾಮೆ

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ 'ಮಾತೃ' ವಿಯೋಗ!

SCROLL FOR NEXT