ಸನ್ನಿ ಲಿಯೋನ್ 
ದೇಶ

ಮಠಾಧೀಶರ ತೀವ್ರ ಆಕ್ಷೇಪ: ಮಥುರಾದಲ್ಲಿ ಆಯೋಜಿಸಿದ್ದ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದು!

ಸನ್ನಿ ಲಿಯೋನ್ ಅವರನ್ನು ಮಥುರಾಕ್ಕೆ ಆಹ್ವಾನಿಸುವ ಮೂಲಕ ಕೆಲವರು ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡಲು ಬಯಸುತ್ತಿದ್ದಾರೆ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ದಿನೇಶ್ ಫಲಹರಿ ತಿಳಿಸಿದ್ದಾರೆ.

ಮಥುರಾ: ಹೊಸ ವರ್ಷಾಚರಣೆ ಪ್ರಯುಕ್ತ ಉತ್ತರ ಪ್ರದೇಶದ ಮಥುರಾದಲ್ಲಿ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಅವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಸ್ಥಳೀಯ ಮಠಾಧೀಶರ ಆಕ್ಷೇಪಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನಾವು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪತ್ರ ಬರೆದಿದ್ದೇವೆ. ಇದು ಶ್ರೀಕೃಷ್ಣನ ಜನ್ಮಸ್ಥಳವಾಗಿದೆ. ಇಲ್ಲಿ ಶ್ರೀಕೃಷ್ಣ ಲೀಲೆ ಪ್ರದರ್ಶನ ನಡೆಯುತ್ತದೆ. ಜತೆಗೆ, ಪ್ರಾರ್ಥನೆ ಸಲ್ಲಿಸಲು ಧರ್ಮಗುರುಗಳು ಇಲ್ಲಿಗೆ ಬರುತ್ತಾರೆ. ಇಂತಹ ಸ್ಥಳದಲ್ಲಿ ಸನ್ನಿ ಲಿಯೋನ್ ಅವರನ್ನು ಕರೆಸಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸನ್ನಿ ಲಿಯೋನ್ ಅವರನ್ನು ಮಥುರಾಕ್ಕೆ ಆಹ್ವಾನಿಸುವ ಮೂಲಕ ಕೆಲವರು ಸನಾತನ ಧರ್ಮದ ಬಗ್ಗೆ ಅಪಪ್ರಚಾರ ಮಾಡಲು ಬಯಸುತ್ತಿದ್ದಾರೆ ಎಂದು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ದಿನೇಶ್ ಫಲಹರಿ ತಿಳಿಸಿದ್ದಾರೆ. ಸನ್ನಿ ಲಿಯೋನ್ ಅವರು ಅಶ್ಲೀಲತೆಯನ್ನು ಪ್ರಚಾರ ಮಾಡುತ್ತಾರೆ. ಅಂತವರನ್ನು ಬ್ರಿಜ್ ಭೂಮಿಯಿಂದ ದೂರವಿಡಬೇಕು ಎಂದೂ ದಿನೇಶ್ ಹೇಳಿದ್ದಾರೆ.

ಜನವರಿ 1ರಂದು ನಡೆಯಲಿದ್ದ ಲೈವ್ ಡಿಜೆ ಪ್ರದರ್ಶನದಲ್ಲಿ ಸನ್ನಿ ಲಿಯೋನ್‌ ಭಾಗವಹಿಸಬೇಕಿತ್ತು. ಆದರೆ, ಮಠಾಧೀಶರು ಮತ್ತು ಭಕ್ತಾದಿಗಳ ಭಾವನೆಗಳನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದ್ದು, ಟಿಕೆಟ್‌ ದರ ಮರುಪಾವತಿ ಮಾಡುತ್ತಿದ್ದೇವೆ ಎಂದು ಆಯೋಜಕರಲ್ಲಿ ಒಬ್ಬರಾದ ಮಿಥುಲ್ ಪಾಠಕ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

ಮೇ ತಿಂಗಳ ಭಾರತ-ಪಾಕಿಸ್ತಾನ ಸಂಘರ್ಷ ವೇಳೆ ಮಧ್ಯಸ್ಥಿಕೆ ವಹಿಸಿದ್ದು ನಾವೇ: ಚೀನಾ

ಭಾರತೀಯ ರೈಲ್ವೆ ಇತಿಹಾಸದಲ್ಲಿ ಮಹತ್ತರ ಸಾಧನೆ: ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ; ವಿಡಿಯೋ ಹಂಚಿಕೊಂಡ ಅಶ್ವಿನಿ ವೈಷ್ಣವ್

New Year ಗೆ ಆನ್ ಲೈನ್ ಫುಡ್ ಆರ್ಡರ್ ಗೆ ಸಮಸ್ಯೆ: ಒಕ್ಕೂಟಗಳಿಂದ ಇಂದು ಮೆಗಾ ಪ್ರತಿಭಟನೆ, 1.5 ಲಕ್ಷ ಕಾರ್ಮಿಕರು ಭಾಗಿ

ಕೇರಳಿಗರೊಂದಿಗೆ ಉತ್ತಮ ಬಾಂಧವ್ಯವಿದೆ, ಹುಳಿ ಹಿಂಡಬೇಡಿ: BJPಗೆ ಡಿಕೆ.ಶಿವಕುಮಾರ್

SCROLL FOR NEXT