ಜರ್ಮನ್ ಪ್ರವಾಸಿಗನ ಮೇಲೆ ಆನೆ ದಾಳಿ 
ದೇಶ

ಭೀಕರ Video: ಒಂಟಿ ಸಲಗದ ದಾಳಿಗೆ ಸ್ಥಳದಲ್ಲೇ ಜೀವ ಬಿಟ್ಟ ಜರ್ಮನ್ ಬೈಕರ್

ತಮಿಳುನಾಡಿನ ಕೊಯಮತ್ತೂರಿನ ವಾಲ್ಪಾರೈ ಬಳಿಯ ಘಾಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 77 ವರ್ಷ ವಯಸ್ಸಿನ ಜರ್ಮನ್ ಪ್ರವಾಸಿಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ.

ಕೊಯಮತ್ತೂರು: ತನ್ನ ದುಬಾರಿ ಬೈಕ್ ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಜರ್ಮನಿ ಮೂಲದ ಪ್ರವಾಸಿಗನ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತಮಿಳುನಾಡಿನ ಕೊಯಮತ್ತೂರಿನ ವಾಲ್ಪಾರೈ ಬಳಿಯ ಘಾಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 77 ವರ್ಷ ವಯಸ್ಸಿನ ಜರ್ಮನ್ ಪ್ರವಾಸಿಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದಾಗಿ ಜರ್ಮನ್ ಪ್ರವಾಸಿಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೈಕ್‌ನಲ್ಲಿ ತೆರಳುತ್ತಿದ್ದ ಜರ್ಮನ್‌ ಪ್ರವಾಸಿಗ ಆನೆಯನ್ನು ನೋಡಿದರೂ ಆನೆ ರಸ್ತೆ ಪಕ್ಕಕ್ಕಿದೆ. ಮತ್ತೊಂದು ಬದಿಯಲ್ಲಿ ತಾನು ಹೋಗಬಹುದು ಎಂದು ಭಾವಿಸಿ ವೇಗವಾಗಿ ಬೈಕ್ ನುಗ್ಗಿಸಿದ್ದಾನೆ. ಈ ವೇಳೆ ಬೈಕ್ ನ ಶಬ್ಧ ಕೇಳಿ ತಿರುಗಿದ ಕಾಡಾನೆ ಏಕಾಏಕಿ ಪ್ರವಾಸಿಗನ ಬೈಕ್ ನತ್ತ ನುಗ್ಗಿ ದಾಳಿ ಮಾಡಿದೆ.

ಮೊದಲು ಆತನನ್ನು ತಳ್ಳಿದ ಆನೆ ಬಳಿಕ ಹಿಂದೆ ಬಂದಿತ್ತು. ಆದರೆ ಆತ ಯಾವಾಗ ಮತ್ತೆ ಎದ್ದು ಬರಲು ಪ್ರಯತ್ನಿಸಿದನೋ ಆಗ ಮತ್ತೆ ಆತನ ಮೇಲೆ ದಾಳಿ ಮಾಡಿದೆ. ಈ ವೇಳೆ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೈಕ್‌ನ ಹಿಂದೆ ಬರುತ್ತಿದ್ದವರು ವಿಡಿಯೊ ಚಿತ್ರೀಕರಿಸಿದ್ದು, ಜರ್ಮನ್‌ ಪ್ರವಾಸಿಗ ಬೈಕ್‌ ಬಿಟ್ಟು ಕಾಡಿನೊಳಗೆ ಓಡಿಹೋದರೂ ಬಿಡದೆ ಆನೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಈ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು 77 ವರ್ಷದ ಜರ್ಮನ್ ಪ್ರಜೆ ಮೈಕೆಲ್ ಎಂದು ಗುರುತಿಸಲಾಗಿದೆ. ಆನೆ ದಾಳಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!