ಅಕ್ರಮ ವಲಸಿಗರ ಗಡಿಪಾರು 
ದೇಶ

ಅಕ್ರಮ ವಲಸಿಗರ ವಿರುದ್ಧ ಅಮೆರಿಕದ ಒತ್ತಡ ಹೆಚ್ಚಿಸಿದ ಭಾರತದ 'ಅಸಹಕಾರ' ಟ್ಯಾಗ್!

ಅಮೆರಿಕ ಸೇರಿದಂತೆ ಯಾವುದೇ ದೇಶದಲ್ಲಿ ಅವಧಿ ಮೀರಿ ನೆಲೆಸಿರುವ ತನ್ನ ಎಲ್ಲಾ ಪ್ರಜೆಗಳ ರಾಷ್ಟ್ರೀಯತೆಯನ್ನು ಪರಿಶೀಲಿಸಿದ ನಂತರ, ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಭಾರತ ಹೇಳಿದೆ.

ನವದೆಹಲಿ: ಕಳೆದ ಡಿಸೆಂಬರ್‌ನಲ್ಲಿ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಅಡಿಯಲ್ಲಿರುವ ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ಜಾರಿ(ICE) ಭಾರತವನ್ನು 'ಅಸಹಕಾರ' ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಇದು ಟ್ರಂಪ್ ಆಡಳಿತ, ಕ್ಯೂಬಾ, ಇರಾನ್, ಪಾಕಿಸ್ತಾನ, ರಷ್ಯಾ ಮತ್ತು ವೆನೆಜುವೆಲಾದಂತಹ ರಾಷ್ಟ್ರಗಳೊಂದಿಗೆ ಭಾರತದ ಅಕ್ರಮ ವಲಸಿಗರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣವಾಗಿದೆ.

ಗಡಿಪಾರು ಪ್ರಕ್ರಿಯೆಯಲ್ಲಿ, ವಿದೇಶಿ ಸರ್ಕಾರಗಳು ತಮ್ಮ ಪ್ರಜೆಗಳೆಂದು ಶಂಕಿಸಲಾಗಿರುವ ವ್ಯಕ್ತಿಗಳ ಪೌರತ್ವವನ್ನು ಪರಿಶೀಲಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಮೆರಿಕ ಸರ್ಕಾರ ವಿನಂತಿಸುತ್ತದೆ. ಇದರಲ್ಲಿ ಸಂದರ್ಶನಗಳನ್ನು ನಡೆಸುವುದು, ಸೂಕ್ತವಾದ ಪ್ರಯಾಣ ದಾಖಲೆಗಳನ್ನು ನೀಡುವುದು ಮತ್ತು ನಿಗದಿತ ವಾಣಿಜ್ಯ ವಿಮಾನಗಳ ಮೂಲಕ ಅಥವಾ ಅಗತ್ಯವಿದ್ದರೆ, ವಿಶೇಷ ಚಾರ್ಟರ್ ವಿಮಾನಗಳ ಮೂಲಕ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವುದು ಒಳಗೊಂಡಿರುತ್ತದೆ.

ICE ಯೊಂದಿಗೆ ಸಹಕರಿಸಲು ವಿಫಲವಾದ ದೇಶಗಳನ್ನು "ಅಸಹಕಾರ" ಅಥವಾ "ಪ್ರತಿಭಟನಾಶೀಲ" ರಾಷ್ಟ್ರಗಳ ಪಟ್ಟಿಗೆ ಸೇರಿಸಲಾಗುತ್ತದೆ. ಅಮೆರಿಕ, ದಾಖಲೆ ರಹಿತವಾಗಿ ನೆಲೆಸಿರುವ ವಲಸಿಗರನ್ನು ಕಾನೂನು ಬದ್ಧವಾಗಿ ಹಿಂದಕ್ಕೆ ಕರೆಸಿಕೊಳ್ಳುವಂತೆ ಆಯಾ ದೇಶಗಳಿಗೆ ಮನವಿ ಮಾಡುತ್ತದೆ. ಇದಕ್ಕೆ ಸಹಕರಿಸದಿದ್ದರೆ ಅಥವಾ ಗಡಿಪಾರು ಪ್ರಕ್ರಿಯೆಗೆ ಅಡ್ದಿಯಾದರೆ "ಅಸಹಕಾರ" ರಾಷ್ಟ್ರಗಳ ಪಟ್ಟಿಗೆ ಸೇರಿಸುತ್ತದೆ.

ಅಮೆರಿಕ ಸೇರಿದಂತೆ ಯಾವುದೇ ದೇಶದಲ್ಲಿ ಅವಧಿ ಮೀರಿ ನೆಲೆಸಿರುವ ತನ್ನ ಎಲ್ಲಾ ಪ್ರಜೆಗಳ ರಾಷ್ಟ್ರೀಯತೆಯನ್ನು ಪರಿಶೀಲಿಸಿದ ನಂತರ, ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಭಾರತ ಹೇಳಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಇತ್ತೀಚೆಗೆ ಭಾರತ "ಅಕ್ರಮ ವಲಸೆಯನ್ನು ದೃಢವಾಗಿ ವಿರೋಧಿಸುತ್ತದೆ. ವಿಶೇಷವಾಗಿ ಇದು ಇತರ ರೀತಿಯ ಸಂಘಟಿತ ಅಪರಾಧಗಳಿಗೆ ಸಂಬಂಧಿಸಿರುತ್ತದೆ" ಎಂದು ಹೇಳಿದ್ದಾರೆ.

"ಭಾರತ-ಅಮೆರಿಕ ವಲಸೆ ಮತ್ತು ಚಲನಶೀಲತೆ ಸಹಕಾರದ ಭಾಗವಾಗಿ, ಎರಡೂ ರಾಷ್ಟ್ರಗಳು ಅಕ್ರಮ ವಲಸೆಯನ್ನು ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಜೊತೆಗೆ ಭಾರತದಿಂದ ಅಮೆರಿಕಕ್ಕೆ ಕಾನೂನುಬದ್ಧ ವಲಸೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಸಹಕಾರವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT