ಸ್ವದೇಶಕ್ಕೆ ಮರಳಿದ ಪಾಕಿಸ್ತಾನದ ಐವರು ಪ್ರಜೆಗಳು 
ದೇಶ

ಭಾರತದ ಜೈಲಿನಲ್ಲಿದ್ದ 'ವಾಟ್ಸಪ್ ಲವರ್' ಸೇರಿ ಪಾಕ್ ನ ಐವರು ಬಿಡುಗಡೆ! ಜೈಲು ಅಧಿಕಾರಿಗಳು ತೋರಿಸಿದ ಪ್ರೀತಿಗೆ ಫಿದಾ!

ಭಾರತ ಸರ್ಕಾರ ಬಿಡುಗಡೆ ಮಾಡಿದವರಲ್ಲಿ ಹರಿಯಾಣದಲ್ಲಿರುವ ತನ್ನ ಸಂಬಂಧಿಕರ ಪುತ್ರಿಯನ್ನು ಮದುವೆಯಾಗಲು ದೇಶದೊಳಗೆ ನುಸುಳಿದ್ದ 'WhatsApp ಪ್ರೇಮಿ' ಅಜ್ಮಲ್ ಹುಸೇನ್ ಸೇರಿದ್ದಾರೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವೇಷ, ಸೇಡು, ಜಗಳದ ನಡುವೆ ಕೆಲವೊಮ್ಮೆ ಉಭಯ ರಾಷ್ಟ್ರಗಳ ಜನರ ಪರಸ್ಪರ ಪ್ರೀತಿ, ಭಾವನಾತ್ಮಕ ಮತ್ತು ಮಾನವೀಯತೆಯ ಘಟನೆಗಳು ಗಮನ ಸೆಳೆಯುತ್ತವೆ. ಇಂತಹುದೇ ಭಾವನಾತ್ಮಕ ಸನ್ನಿವೇಶಕ್ಕೆ ಅಮೃತಸರದ ಅಟ್ಟಾರಿ ಗಡಿ ಇಂದು ಸಾಕ್ಷಿಯಾಯಿತು.

ಅಕ್ರಮವಾಗಿ ತಂಗಿದ್ದಕ್ಕಾಗಿ ಭಾರತದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದ ಐವರು ಪಾಕಿಸ್ತಾನಿ ಪ್ರಜೆಗಳು ಶುಕ್ರವಾರ ತಮ್ಮ ದೇಶಕ್ಕೆ ಮರಳಿದರು. ಈ ಸಂದರ್ಭದಲ್ಲಿ ಸೆರೆವಾಸದ ಅವಧಿಯಲ್ಲಿನ ಮಾನವೀಯ ಉಪಚರ ಹಾಗೂ ಜೈಲಿನಿಂದ ಬಿಡುಗಡೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಭಾರತ ಸರ್ಕಾರ ಬಿಡುಗಡೆ ಮಾಡಿದವರಲ್ಲಿ ಹರಿಯಾಣದಲ್ಲಿರುವ ತನ್ನ ಸಂಬಂಧಿಕರ ಪುತ್ರಿಯನ್ನು ಮದುವೆಯಾಗಲು ದೇಶದೊಳಗೆ ನುಸುಳಿದ್ದ 'WhatsApp ಪ್ರೇಮಿ' ಅಜ್ಮಲ್ ಹುಸೇನ್ ಸೇರಿದ್ದಾರೆ. 2022 ರಿಂದ ಪಂಜಾಬ್‌ನ ತರ್ನ್ ತರನ್‌ ಜೈಲಿನಲ್ಲಿದ್ದ ಹುಸೇನ್, ನನ್ನ ಲವರ್ ಭೇಟಿಯಾಗಲು ಅಕ್ರಮವಾಗಿ ಭಾರತಕ್ಕೆ ಬಂದದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ಹಳ್ಳಿಯೊಂದರಿಂದ ಬಂದಿದ್ದೇನೆ. ದೂರದ ಸಂಬಂಧಿಕರ ಪುತ್ರಿಯೊಂದಿಗೆ ದೀರ್ಘ ಕಾಲದಿಂದ ಸಂಬಂಧ ಹೊಂದಿದ್ದು, ವಾಟ್ಸಾಪ್ ಮೂಲಕ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾಗಿ ತಿಳಿಸಿದರು. ಬೇಹುಗಾರಿಕೆ ಪ್ರಕರಣದಲ್ಲಿ ಅಲ್ವಾರ್ ಜೈಲಿನಲ್ಲಿ 17 ವರ್ಷಗಳ ಜೈಲುವಾಸ ಅನುಭವಿಸಿ ಹಿಂದಿರುಗುತ್ತಿದ್ದ ಮತ್ತೋರ್ವ ಖೈದಿ ಜಾಫರ್ ಹುಸೇನ್ ಕೂಡ ನಿರಾಳವಾದಂತೆ ಕಂಡರು. ಭಾರತದ ಜೈಲು ಅಧಿಕಾರಿಗಳು ನಮ್ಮನ್ನು ಚೆನ್ನಾಗಿ ನಡೆಸಿಕೊಂಡರು ಎಂದು ಪಾಕಿಸ್ತಾನದ ಪಂಜಾಬ್‌ನ ಫೈಸಲಾಬಾದ್‌ನ ನಿವಾಸಿ ಹೇಳಿದರು.

ಬಿಡುಗಡೆಗೊಂಡ ಮತ್ತೊಬ್ಬ ಖೈದಿ ಮಸ್ರೂರ್, ಜೈಲಿನಲ್ಲಿ ಉತ್ತಮ ಉಪಚಾರಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಅಪರಾಧಿಯಾಗಿದ್ದರೂ, ಭಾರತದಲ್ಲಿ ನನಗೆ ಸಾಕಷ್ಟು ಪ್ರೀತಿ ಸಿಕ್ಕಿತು. ನಾನು ವಿದೇಶದಲ್ಲಿ ಇದ್ದೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು. 16 ವರ್ಷಗಳ ಕಾಲ ಭಾರತದ ಜೈಲಿನಲ್ಲಿದ್ದ ಕರಾಚಿ ನಿವಾಸಿ, ಪಾಕಿಸ್ತಾನದಲ್ಲಿರುವ ತನ್ನ ಪತ್ನಿಯನ್ನು ಭೇಟಿಯಾಗಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಬಿಡುಗಡೆಗೊಂಡ ಮತ್ತೊಬ್ಬ ಖೈದಿ ಮಸ್ರೂರ್, ಜೈಲಿನಲ್ಲಿ ಉತ್ತಮ ಉಪಚಾರಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಅಪರಾಧಿಯಾಗಿದ್ದರೂ, ಭಾರತದಲ್ಲಿ ನನಗೆ ಸಾಕಷ್ಟು ಪ್ರೀತಿ ಸಿಕ್ಕಿತು. ನಾನು ವಿದೇಶದಲ್ಲಿ ಇದ್ದೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು. 16 ವರ್ಷಗಳ ಕಾಲ ಭಾರತದ ಜೈಲಿನಲ್ಲಿದ್ದ ಕರಾಚಿ ನಿವಾಸಿ, ಪಾಕಿಸ್ತಾನದಲ್ಲಿರುವ ತನ್ನ ಪತ್ನಿಯನ್ನು ಭೇಟಿಯಾಗಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT