ಅಮಿತ್ ಶಾ 
ದೇಶ

ದೆಹಲಿಯಲ್ಲಿ "ಸುಳ್ಳಿನ ಆಳ್ವಿಕೆ ಅಂತ್ಯ, ಅಭಿವೃದ್ಧಿಯ ಹೊಸ ಯುಗ ಆರಂಭ": ಅಮಿತ್ ಶಾ

ದೆಹಲಿಯ ಜನ ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ 'ಶೀಷ್ ಮಹಲ್' ಅನ್ನು ನಾಶಮಾಡುವ ಮೂಲಕ ದೆಹಲಿಯನ್ನು ಆಪ್ ಮುಕ್ತಗೊಳಿಸುವ ಕೆಲಸ ಮಾಡಿದ್ದಾರೆ.

ನವದೆಹಲಿ: 27 ವರ್ಷಗಳ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲು ಸಜ್ಜಾಗುತ್ತಿರುವಂತೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ "ಸುಳ್ಳಿನ ಆಳ್ವಿಕೆ" ಕೊನೆಗೊಂಡಿದೆ ಮತ್ತು ಇದು ದೆಹಲಿಯಲ್ಲಿ ಅಭಿವೃದ್ಧಿ ಹಾಗೂ ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದು ಶನಿವಾರ ಹೇಳಿದ್ದಾರೆ.

ಚುನಾವಣೆ ಫಲಿತಾಂಶದ ಬಳಿಕ X ನಲ್ಲಿ ಪೋಸ್ಟ್ ಮಾಡಿದ ಅಮಿತ್ ಶಾ, "ದೆಹಲಿ ಕೆ ದಿಲ್ ಮೇ ಮೋದಿ (ದೆಹಲಿ ಜನರ ಹೃದಯದಲ್ಲಿ ಮೋದಿ ಇದ್ದಾರೆ)" ಎಂದು ಹೇಳಿದರು.

"ದೆಹಲಿಯ ಜನ ಸುಳ್ಳು, ವಂಚನೆ ಮತ್ತು ಭ್ರಷ್ಟಾಚಾರದ 'ಶೀಷ್ಮಹಲ್' ಅನ್ನು ನಾಶಮಾಡುವ ಮೂಲಕ ದೆಹಲಿಯನ್ನು ಆಪ್ ಮುಕ್ತಗೊಳಿಸುವ ಕೆಲಸ ಮಾಡಿದ್ದಾರೆ. ದೇಶಾದ್ಯಂತ ಸಾರ್ವಜನಿಕರಿಗೆ ಸುಳ್ಳು ಭರವಸೆಗಳನ್ನು ನೀಡುವವರಿಗೆ ಇದು ಒಂದು ಪಾಠವಾಗಲಿದೆ ಎಂದಿದ್ದಾರೆ.

ಇಂದಿನಿಂದ ದೆಹಲಿಯಲ್ಲಿ ಅಭಿವೃದ್ಧಿ ಮತ್ತು ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ದೆಹಲಿಯ ಜನ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ತಿಳಿಸಿದ್ದಾರೆ.

"ಇದು 'ಮೋದಿ ಗ್ಯಾರಂಟಿ' ಗೆಲುವು ಮತ್ತು ಮೋದಿಜಿಯವರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ದೆಹಲಿಯ ಜನ ನಂಬಿಕೆ ಇಟ್ಟಿದ್ದಾರೆ. ಈ ಬೃಹತ್ ಜನಾದೇಶಕ್ಕಾಗಿ ದೆಹಲಿ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಮೋದಿಜಿಯವರ ನೇತೃತ್ವದಲ್ಲಿ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂಬರ್-1 ರಾಜಧಾನಿಯನ್ನಾಗಿ ಮಾಡಲು ದೃಢನಿಶ್ಚಯ ಮಾಡಿದೆ" ಎಂದು ಅಮಿತ್ ಶಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ ವೈರಲ್..! ಅಮಾನತು

ಭಾರತದ ಪದವೀಧರರಲ್ಲಿ ಶೇ. 40 ರಷ್ಟು ಜನರಿಗೆ ಉದ್ಯೋಗ ಸಿಗುತ್ತಿಲ್ಲ: ವರದಿ

Railway Exam: ಕನ್ನಡಕ್ಕೆ ಕೊಕ್, ಕರವೇ ಹೋರಾಟದಿಂದ ಮುಂದೂಡಿಕೆ, ಪ್ರಧಾನಿ ಮೋದಿ, ಸೋಮಣ್ಣ ವಿರುದ್ಧ ಸಿದ್ದು ಗರಂ!

'ಬೆಂಗಳೂರಿನ 1.5 ಲಕ್ಷ ರೂ.ಗಿಂತ ನನ್ನ ಊರಿನ 65,000 ರೂ. ಸಂಬಳ ಉತ್ತಮ': ವ್ಯಕ್ತಿ ಪೋಸ್ಟ್ ವೈರಲ್

ರಾತ್ರಿಯಿಡೀ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ

SCROLL FOR NEXT