ಅಮೆರಿಕಾದಿಂದ ಭಾರತೀಯರನ್ನು ಕರೆತಂದ ವಿಮಾನ  online desk
ದೇಶ

ಅಮೆರಿಕಾದಿಂದ ಗಡಿಪಾರಾಗಿ ಬಂದವರ ವಿಮಾನ ಅಮೃತಸರಕ್ಕೇ ಏಕೆ ಬರುತ್ತಿದೆ?: ಸರ್ಕಾರ ಬಿಚ್ಚಿಟ್ಟ ಮಾಹಿತಿ ಇದು...

ಈ ವಿಮಾನಗಳು ಪ್ರತಿ ಬಾರಿಯೂ ಅಮೃತಸರದಲ್ಲೇ ಲ್ಯಾಂಡ್ ಆಗುತ್ತಿರುವ ಬಗ್ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪಂಜಾಬ್ ಸಿಎಂ ಆಕ್ಷೇಪಗಳಿಗೆ ಕೇಂದ್ರ ಸರ್ಕಾರ ಕೊನೆಗೂ ಉತ್ತರ ನೀಡಿದೆ.

ನವದೆಹಲಿ: ಅಮೆರಿಕಾದಿಂದ ಗಡಿಪಾರಾದ ಭಾರತೀಯರನ್ನು ಹೊತ್ತು ತರುತ್ತಿರುವ ವಿಮಾನಗಳು 3 ಬ್ಯಾಚ್ ಗಳಲ್ಲಿ ಭಾರತಕ್ಕೆ ಆಗಮಿಸಿವೆ.

ಈ ವಿಮಾನಗಳು ಪ್ರತಿ ಬಾರಿಯೂ ಅಮೃತಸರದಲ್ಲೇ ಲ್ಯಾಂಡ್ ಆಗುತ್ತಿರುವ ಬಗ್ಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪಂಜಾಬ್ ಸಿಎಂ ಆಕ್ಷೇಪಗಳಿಗೆ ಕೇಂದ್ರ ಸರ್ಕಾರ ಕೊನೆಗೂ ಉತ್ತರ ನೀಡಿದೆ.

ಫೆಬ್ರವರಿ 5 ರಿಂದ ಭಾರತಕ್ಕೆ ಬಂದ ಮೂರು ವಿಮಾನಗಳ ಅಂಕಿ-ಅಂಶಗಳನ್ನು ಹಂಚಿಕೊಂಡಿದೆ. ಅಮೆರಿಕದ ಮಿಲಿಟರಿ ವಿಮಾನಗಳಲ್ಲಿ ಗಡೀಪಾರು ಮಾಡಲಾದ 333 ಜನರಲ್ಲಿ ಒಟ್ಟು 126 ಜನರು ಪಂಜಾಬ್ ನಿವಾಸಿಗಳಾಗಿದ್ದಾರೆ. ನಂತರ ನೆರೆಯ ಹರಿಯಾಣದಿಂದ 110 ಮತ್ತು ಗುಜರಾತ್‌ನಿಂದ 74 ಜನರಿದ್ದಾರೆ.

ಗಡಿಪಾರಾದರ ಪೈಕಿ ಅತಿ ಹೆಚ್ಚಿನ ಸಂಖ್ಯೆಯ ಜನರು ಪಂಜಾಬ್ ನವರಾದ್ದರಿಂದ ವಿಮಾನಗಳು ಅಮೃತ್ ಸರದಲ್ಲೇ ಲ್ಯಾಂಡ್ ಆಗುತ್ತಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಗಡಿಪಾರಾದವರ ಪೈಕಿ 8 ಮಂದಿ ಉತ್ತರ ಪ್ರದೇಶದವರು, ಐದು ಮಂದಿ ಮಹಾರಾಷ್ಟ್ರದವರು, ತಲಾ ಎರಡು ಹಿಮಾಚಲ ಪ್ರದೇಶ, ಚಂಡೀಗಢ, ರಾಜಸ್ಥಾನ ಮತ್ತು ಗೋವಾದಿಂದ ಮತ್ತು ತಲಾ ಒಂದು ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಿಂದ ಬಂದವರಾಗಿದ್ದಾರೆ.

ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಚಾರದ ಭರವಸೆಗಳಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಮೂರು ಮಿಲಿಟರಿ ವಿಮಾನಗಳು ಗಡಿಪಾರು ಮಾಡಲ್ಪಟ್ಟವರನ್ನು ಹೊತ್ತೊಯ್ದು ಭಾರತಕ್ಕೆ ಬಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT