ನವದೆಹಲಿ: ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾ ಸುದ್ದಿಸಂಸ್ಥೆಗೆ ಇಡಿ ಶಾಕ್ ನೀಡಿದೆ. ವಿದೇಶಿ ನೇರ ಬಂಡವಾಳ ನಿಯಮಾವಳಿ ಉಲ್ಲಂಘನೆ ಆರೋಪದಡಿ ರೂ. 3.44 ಕೋಟಿ ದಂಡ ವಿಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇದೇ ಪ್ರಕರಣದಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟರ್ ಸಂಸ್ಥೆಯ ಮೂವರು ನಿರ್ದೇಶಕರಿಗೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಆರೋಪದಡಿ ತಲಾ ರೂ. 1. 14 ಕೋಟಿ ದಂಡವನ್ನು ED ವಿಧಿಸಿದೆ.
ಈ ಹಿಂದೆ ಕಾನೂನು ಉಲ್ಲಂಘನೆಗಾಗಿ ಬಿಬಿಸಿ ವರ್ಲ್ಡ್ ಇಂಡಿಯಾ ಹಾಗೂ ಅದರ ಮೂವರು ನಿರ್ದೇಶಕರಿಗೆ ಆಗಸ್ಟ್ 4,2023 ರಂದು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.
BBC ಶೇ. 100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಿರುವ ಸಂಸ್ಥೆಯಾಗಿದ್ದು, ಡಿಜಿಟಲ್ ಮಾಧ್ಯಮದ ಮೂಲಕ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಆದರೆ ವಿದೇಶಿ ನೇರ ಬಂಡವಾಳನ್ನು ಶೇ.26ಕ್ಕೆ ಇಳಿಸುವ ನಿಯಮವನ್ನು ಪಾಲಿಸಿರಲಿಲ್ಲ. ಶೇ.
100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಭಾರತ ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಮೂಲಗಳು ತಿಳಿಸಿವೆ.