ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ 
ದೇಶ

ನೀವು ಹಿಂದಿ ಹೇರದಿದ್ದರೆ, ಡಿಎಂಕೆ ಅದನ್ನು ವಿರೋಧಿಸುವುದಿಲ್ಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್

ಆಪಾದಿತ ಹಿಂದಿ ಹೇರಿಕೆ ವಿಷಯದ ಕುರಿತು ಪಕ್ಷದವರಿಗೆ ಪತ್ರ ಬರೆದಿರುವ ಸ್ಟಾಲಿನ್, ಸ್ವಾಭಿಮಾನವು ತಮಿಳರ 'ಅನನ್ಯ' ಸ್ವಭಾವವಾಗಿದೆ ಎಂದು ಹೇಳಿದರು.

ಚೆನ್ನೈ: ತಮಿಳುನಾಡಿನ ಮೇಲೆ ಹಿಂದಿಯನ್ನು ಹೇರದಿದ್ದರೆ ಡಿಎಂಕೆ ವಿರೋಧಿಸುವುದಿಲ್ಲ ಮತ್ತು ತಮಿಳರ ಮೇಲೆ ಭಾಷೆಯನ್ನು ಬಲವಂತವಾಗಿ ಹೇರುವುದು ಅವರ ಸ್ವಾಭಿಮಾನದ ಜೊತೆ ಆಟವಾಡಿದಂತಾಗುತ್ತದೆ ಎಂದು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಬುಧವಾರ ಹೇಳಿದ್ದಾರೆ.

ಆಪಾದಿತ ಹಿಂದಿ ಹೇರಿಕೆ ವಿಷಯದ ಕುರಿತು ಪಕ್ಷದವರಿಗೆ ಪತ್ರ ಬರೆದಿರುವ ಸ್ಟಾಲಿನ್, ಸ್ವಾಭಿಮಾನವು ತಮಿಳರ 'ಅನನ್ಯ' ಸ್ವಭಾವವಾಗಿದೆ ಎಂದು ಹೇಳಿದರು.

'ಡಿಎಂಕೆ ಇನ್ನೂ ಹಿಂದಿಯನ್ನು ಏಕೆ ವಿರೋಧಿಸುತ್ತಿದೆ ಎಂದು ಕೇಳುವವರಿಗೆ, ನಿಮ್ಮಲ್ಲಿ ಒಬ್ಬನಾಗಿ ನಾನು ಅವರಿಗೆ ಪ್ರತಿಕ್ರಿಯೆ ನೀಡುತ್ತೇನೆ. ಏಕೆಂದರೆ ನೀವು ಅದನ್ನು ಇನ್ನೂ ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದೀರಿ. ನೀವು ಹಿಂದಿಯನ್ನು ಹೇರದಿದ್ದರೆ ನಾವು ವಿರೋಧಿಸುವುದಿಲ್ಲ; ತಮಿಳುನಾಡಿನಲ್ಲಿ ಹಿಂದಿ ಪದಗಳಿಗೆ ಕಪ್ಪು ಮಸಿ ಬಳಿಯುವುದಿಲ್ಲ. ಸ್ವಾಭಿಮಾನವು ತಮಿಳರ ವಿಶಿಷ್ಟ ಲಕ್ಷಣವಾಗಿದೆ ಮತ್ತು ಅದರೊಂದಿಗೆ ಆಟವಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ' ಎಂದಿದ್ದಾರೆ.

ರಾಜ್ಯದಲ್ಲಿ ಉಂಟಾಗಿರುವ ತೀವ್ರ ಭಾಷಾ ಗದ್ದಲದ ನಡುವೆ ಸ್ಟಾಲಿನ್ ಈ ಹೇಳಿಕೆ ನೀಡಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಡಿಎಂಕೆ ಆರೋಪಿಸಿದೆ. ಇದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.

ಈ ವಿಚಾರವು ಡಿಎಂಕೆ ಮತ್ತು ರಾಜ್ಯ ಬಿಜೆಪಿ ಘಟಕದ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಇದರ ಉಸ್ತುವಾರಿ ವಹಿಸಿದ್ದಾರೆ.

1937-39ರ ನಡುವೆ ರಾಜ್ಯದಲ್ಲಿ ನಡೆದ ಹಿಂದಿ ವಿರೋಧಿ ಆಂದೋಲನಗಳನ್ನು ಸ್ಟಾಲಿನ್ ತಮ್ಮ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ಇವಿ ರಾಮಸ್ವಾಮಿ 'ಪೆರಿಯಾರ್' ಸೇರಿದಂತೆ ವಿವಿಧ ನಾಯಕರು ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಕೆಲವು ಬಿಜೆಪಿ ನಾಯಕರು ರೈಲ್ವೆ ನಿಲ್ದಾಣಗಳಲ್ಲಿ ಹಿಂದಿ ಹೆಸರುಗಳನ್ನು ಬದಲಿಸುವುದರಿಂದ ರಾಜ್ಯಕ್ಕೆ ಆಗಮಿಸುವ ಉತ್ತರ ಭಾರತದ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಿದ್ದರು ಮತ್ತು ಆದರೆ ತಮಿಳಿನ ಬಗ್ಗೆಯೂ ಅವರಿಗೆ ಅಂತಹ ಕಾಳಜಿ ಇರಬೇಕಿತ್ತು' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕಾಶಿ ಸಂಗಮಂ ಮತ್ತು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಉತ್ತರ ಪ್ರದೇಶದಲ್ಲಿನ ನಾಮಫಲಕಗಳಲ್ಲಿ ತಮಿಳು ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಿವೆಯೇ?. ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಈ ಪ್ರಶ್ನೆಗಳನ್ನು ಕೇಳಬೇಕು ಎಂದಿದ್ದಾರೆ.

'ಇತರ ಭಾರತೀಯ ಭಾಷೆಗಳಲ್ಲಿ ಘೋಷಣೆಗಳನ್ನು ಮಾಡಲಾಗಿದೆಯೇ. ತಮಿಳನ್ನು ವಿರೋಧಿಸುವ ಮತ್ತು ಪದೇ ಪದೇ ತಮಿಳುನಾಡಿಗೆ ದ್ರೋಹ ಮಾಡುವ ಸಂಘಟನೆಗೆ ಸೇರಿದವರು ಹೇಗೆ ತಮಿಳರ ಮತ್ತು ಅವರ ಕಲ್ಯಾಣಕ್ಕಾಗಿ ಧ್ವನಿ ಎತ್ತುತ್ತಾರೆ. ದ್ರಾವಿಡ ಚಳವಳಿಗೆ ಯಾವುದೇ ಭಾಷೆಯ ಬಗ್ಗೆ ದ್ವೇಷವಿಲ್ಲ. ತಮಿಳು ಯಾವುದೇ ಭಾಷೆಯನ್ನು ಶತ್ರು ಎಂದು ಪರಿಗಣಿಸಿ ಅದನ್ನು ನಾಶಪಡಿಸಿಲ್ಲ. ಅದು ತಮಿಳಿನ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಿದರೆ, ಅಂತಹ ಬೇರೆ ಭಾಷೆಗೆ ಅವಕಾಶ ನೀಡಿಲ್ಲ' ಎಂದು ಸ್ಟಾಲಿನ್ ಹೇಳಿದರು.

ತಮಿಳುನಾಡಿನ ದ್ವಿಭಾಷಾ ನೀತಿ (ತಮಿಳು ಮತ್ತು ಇಂಗ್ಲಿಷ್) ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ಉತ್ತಮ ಪ್ರಗತಿಯೊಂದಿಗೆ ರಾಜ್ಯವು ಉನ್ನತ ಸ್ಥಾನದಲ್ಲಿದೆ. ಕೇಂದ್ರದ ಬಿಜೆಪಿ ಸರ್ಕಾರವು ದಕ್ಷಿಣ ರಾಜ್ಯಕ್ಕೆ "ದ್ರೋಹ" ಮಾಡಿದೆ ಎಂದು ಆರೋಪಿಸಿದ ಅವರು, ತಮಿಳು ರಕ್ಷಣೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT