ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ online desk
ದೇಶ

ಸಮಸ್ಯೆ ಪರಿಹಾರಕ್ಕೆ ಅಥವಾ ಅಗತ್ಯ ಬಿದ್ದಾಗ ಮಾತ್ರ ಜನ MNS ಬಗ್ಗೆ ಯೋಚಿಸುತ್ತಾರೆ, ಚುನಾವಣೆಯಲ್ಲಿ ಮರೆಯುತ್ತಾರೆ: ರಾಜ್ ಠಾಕ್ರೆ

ನೂತನ ವರ್ಷದ ಹಿನ್ನೆಲೆಯಲ್ಲಿ ಟ್ವಿಟರ್ ಸಂದೇಶ ನೀಡಿರುವ ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಫಲಿತಾಂಶಗಳನ್ನು ಹಿಂದೆ ಇರಿಸಿ, ಮುಂದುವರಿಯುವಂತೆ ಮನವಿ ಮಾಡಿದರು.

ಮುಂಬೈ: ಯಾವುದೇ ಸಮಸ್ಯೆ ಎದುರಾದಾಗ ಅದನ್ನು ಬಗೆಹರಿಸಲು, ಅವರಿಗೆ ಬೇಕಾದಾಗ ಮಾತ್ರ ಜನ ತಮ್ಮ ಪಕ್ಷದ ಬಗ್ಗೆ ಯೋಚನೆ ಮಾಡುತ್ತಾರೆ ಚುನಾವಣೆ ಸಂದರ್ಭದಲ್ಲಿ ಮರೆತುಬಿಡುತ್ತಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ನೂತನ ವರ್ಷದ ಹಿನ್ನೆಲೆಯಲ್ಲಿ ಟ್ವಿಟರ್ ಸಂದೇಶ ನೀಡಿರುವ ಠಾಕ್ರೆ, ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಫಲಿತಾಂಶಗಳನ್ನು ಹಿಂದೆ ಇರಿಸಿ, ಮುಂದುವರಿಯುವಂತೆ ಮನವಿ ಮಾಡಿದರು, ಶೀಘ್ರದಲ್ಲೇ ಅವರೊಂದಿಗೆ ಮಾತನಾಡುವುದಾಗಿ ಮತ್ತು ಮುಂದಿನ ಕ್ರಮದ ಬಗ್ಗೆ ವಿಶಾಲವಾದ ನಿರ್ದೇಶನವನ್ನು ನೀಡುವುದಾಗಿ ರಾಜ್ ಠಾಕ್ರೆ ಹೇಳಿದ್ದಾರೆ.

"....ಕೆಲವು ವಿಷಯಗಳು ಬದಲಾಗಿಲ್ಲ..... ಜನರು ಪ್ರತಿ ಸಮಸ್ಯೆಯ ಪರಿಹಾರಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಮತದಾನ ಮಾಡುವಾಗ ಅದನ್ನು ನಿರ್ಲಕ್ಷಿಸುತ್ತಾರೆ" ಎಂದು ಠಾಕ್ರೆ ಹೇಳಿದರು.

ನವೆಂಬರ್ 20 ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ 288 ವಿಧಾನಸಭಾ ಸ್ಥಾನಗಳ ಪೈಕಿ 125 ರಲ್ಲಿ ಎಂಎನ್‌ಎಸ್ ಸ್ಪರ್ಧಿಸಿತ್ತು ಆದರೆ ಯಾವುದೇ ಸ್ಥಾನ ಗಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ರಾಜ್ ಪುತ್ರ ಅಮಿತ್ ಠಾಕ್ರೆ ಕೂಡ ಮುಂಬೈನಲ್ಲಿ ಮಾಹಿಮ್‌ನಿಂದ ಸೋತಿದ್ದರು.

ಚುನಾವಣಾ ಫಲಿತಾಂಶದ ಕೆಲವೇ ವಾರಗಳಲ್ಲಿ, ರಾಜ್ಯದಲ್ಲಿ ಮರಾಠಿ ಭಾಷಿಕರ ವಿರುದ್ಧ "ದಬ್ಬಾಳಿಕೆ" ಪ್ರಾರಂಭವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ. ಈ ಪ್ರಕರಣಗಳಲ್ಲಿ MNS ಕ್ರಮ ತೆಗೆದುಕೊಳ್ಳುತ್ತದೆ ಎಂದು ಜನರು ನಿರೀಕ್ಷಿಸಿದ್ದರು, ನಿರೀಕ್ಷೆಯಂತೆ ಎಂಎನ್ಎಸ್ ಮಾಡಿದೆ ಎಂದು ಅವರು ಹೇಳಿದರು.

"ಮರಾಠಿ ಮಾನೂಸ್" (ಸ್ಥಳೀಯ ಮಹಾರಾಷ್ಟ್ರ) ನ್ನು ಕೇವಲ ಮತಕ್ಕಾಗಿ ಬಳಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಎಂಎನ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ