ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಮುಖ್ಯಮಂತ್ರಿ ಅತಿಶಿಸ್ ಅಧಿಕೃತ ನಿವಾಸಕ್ಕೆ ತೆರಳಲು ಪ್ರವೇಶಿದಾಗ ತಡೆದಿರುವುದು  
ದೇಶ

'ಶೀಶ್ ಮಹಲ್' ವಿವಾದ: ದೆಹಲಿ ಸಿಎಂ ಬಂಗಲೆ ಪ್ರವೇಶಕ್ಕೆ ಆಪ್ ನ ಸೌರಭ್ ಭಾರದ್ವಾಜ್, ಸಂಜಯ್ ಸಿಂಗ್ ಗೆ ತಡೆ

ಅರವಿಂದ್ ಕೇಜ್ರಿವಾಲ್ ಅವರ ಅಧಿಕಾರಾವಧಿಯಲ್ಲಿ ಇದನ್ನು "ಶೀಶ್ ಮಹಲ್" ಆಗಿ ಪರಿವರ್ತಿಸಲಾಯಿತು ಎಂದು ಬಿಜೆಪಿ ಆರೋಪಿಸುತ್ತಿದೆ.

ನವದೆಹಲಿ: ಬಿಜೆಪಿಯ "ಶೀಶ್ ಮಹಲ್" ವಿವಾದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡುವಂತೆ ಆಹ್ವಾನ ನೀಡಿದ್ದ ಆಪ್ ನಾಯಕರಾದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್ ಅವರನ್ನು ದೆಹಲಿ ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಪ್ರವೇಶಿಸದಂತೆ ತಡೆದ ಘಟನೆ ನಡೆದಿದೆ.

ದೆಹಲಿಯ ಫ್ಲಾಗ್‌ಸ್ಟಾಫ್ ರಸ್ತೆ 6ರಲ್ಲಿರುವ ಬಂಗಲೆಯ ಮುಂಭಾಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ರಚಿಸಿ ಸಿಬ್ಬಂದಿಯನ್ನು ನಿಯೋಜಿಸಿ, ಆಪ್ ಮುಖಂಡರನ್ನು ಆವರಣಕ್ಕೆ ಪ್ರವೇಶಿಸದಂತೆ ತಡೆದಿದ್ದಾರೆ. ಆಪ್ ನಾಯಕರು ಮುಖ್ಯಮಂತ್ರಿಯವರ ನಿವಾಸಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದರು. ಅರವಿಂದ್ ಕೇಜ್ರಿವಾಲ್ ಅವರ ಅಧಿಕಾರಾವಧಿಯಲ್ಲಿ ಇದನ್ನು "ಶೀಶ್ ಮಹಲ್" ಆಗಿ ಪರಿವರ್ತಿಸಲಾಯಿತು ಎಂದು ಬಿಜೆಪಿ ಆರೋಪಿಸುತ್ತಿದೆ.

ನಿವಾಸಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಜಯ್ ಸಿಂಗ್ ಮತ್ತು ಸೌರಭ್ ಭಾರದ್ವಾಜ್ ಅವರು, ಮುಖ್ಯಮಂತ್ರಿ ನಿವಾಸ ಪ್ರವೇಶಿಸಲು ಅನುಮತಿ ಏಕೆ ಬೇಕು, ಅವರು ಅಧಿಕಾರಿಗಳೊಂದಿಗೆ ಒಳಗೆ ಹೋಗಲು ಅವಕಾಶ ನೀಡುವಂತೆ ಕೇಳಿಕೊಳ್ಳುವುದು ಕಂಡುಬಂತು ಎಂದರು.

ನಮ್ಮನ್ನು ತಡೆಯಲು ನಿಮಗೆ ಯಾರು ಸೂಚನೆ ನೀಡಿದ್ದಾರೆ, ನಾನು ಸಚಿವನಾಗಿದ್ದೇನೆ, ನಾನು ಪರಿಶೀಲನೆಗೆ ಬಂದಿದ್ದೇನೆ. ನೀವು ನನ್ನನ್ನು ಹೇಗೆ ಮತ್ತು ಯಾರ ಆದೇಶದ ಮೇರೆಗೆ ತಡೆಯುತ್ತೀರಿ, ನೀವು ಲೆಫ್ಟಿನೆಂಟ್ ಗವರ್ನರ್‌ನಿಂದ ನಿರ್ದೇಶನಗಳನ್ನು ಪಡೆದಿದ್ದೀರಾ? ಅವರೊಬ್ಬರೇ ನನ್ನ ಸ್ಥಾನಕ್ಕಿಂತ ಮೇಲೆ ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ ಎಂದು ಭಾರದ್ವಾಜ್ ಅಧಿಕಾರಿಯೊಬ್ಬರಿಗೆ ಹೇಳಿದ್ದು ಕೇಳಿಸಿತು.

ಈ ಎರಡೂ ಆಸ್ತಿಗಳು ಸರ್ಕಾರಿ ನಿವಾಸಗಳಾಗಿವೆ. ಅವುಗಳನ್ನು ತೆರಿಗೆದಾರರ ಹಣದಿಂದ ನಿರ್ಮಿಸಲಾಗಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿರ್ಮಿಸಲಾಗಿದೆ. ಹಣ ದುರುಪಯೋಗದ ಆರೋಪಗಳಿದ್ದರೆ, ಎರಡನ್ನೂ ತನಿಖೆ ಮಾಡಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರದ್ವಾಜ್, ‘ಭರವಸೆ ನೀಡಿದಂತೆ ಫ್ಲಾಗ್‌ಸ್ಟಾಫ್ ರಸ್ತೆ 6ರಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡಿ, ಬಿಜೆಪಿ ಆರೋಪಿಸಿರುವ ಗೋಲ್ಡನ್ ಕಮೋಡ್, ಈಜುಕೊಳ ಮತ್ತು ಮಿನಿ ಬಾರ್ ಪತ್ತೆಗೆ ಪ್ರಯತ್ನಿಸುತ್ತೇವೆ." ಎಂದು ಹೇಳಿದ್ದರು.

ಪ್ರಧಾನಿ ನಿವಾಸಕ್ಕೆ ಸಹ ವರದಿಗಾರರನ್ನು ಕರೆದೊಯ್ಯುವುದಾಗಿ ಹೇಳಿದ ಸಿಂಗ್ ಮತ್ತು ಭಾರದ್ವಾಜ್, ಪ್ರಧಾನ ಮಂತ್ರಿ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಾರೆ, 26 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಆಪ್ ಕರೆದಿದ್ದು, ಅದನ್ನು ರಾಜ್ ಮಹಲ್ ಎಂದು ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT