ನಂದಿನಿ ಸಾಂದರ್ಭಿಕ ಚಿತ್ರ 
ದೇಶ

Maha Kumbh Mela: 1 ಕೋಟಿ ಕಪ್ ಚಹಾ ವಿತರಣೆ; ಗಿನ್ನಿಸ್ ದಾಖಲೆ ಮಾಡಲು KMF ಮುಂದು!

ಚಾಯ್ ಪಾಯಿಂಟ್ ಮಹಾ ಕುಂಭ ಮೇಳದ ಆವರಣದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಿದೆ. ಈ ಮಳಿಗೆಗಳು ಐತಿಹಾಸಿಕ ಮೇಳದ ಸಂದರ್ಭದಲ್ಲಿ 1 ಕೋಟಿ ಕಪ್ ಗೂ ಹೆಚ್ಚು ಚಹಾವನ್ನು ನೀಡಲು ಸಿದ್ಧವಾಗಿವೆ.

ಬೆಂಗಳೂರು: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕಾಗಿ ಚಾಯ್ ಪಾಯಿಂಟ್ ಜೊತೆಗೆ 1 ಕೋಟಿ ಕಪ್ ಚಹಾ ವಿತರಿಸಲಾಗುವುದು ಎಂದು ಕರ್ನಾಟಕ ಹಾಲು ಒಕ್ಕೂಟ- ಕೆಎಂಎಫ್ ಸೋಮವಾರ ತಿಳಿಸಿದೆ.

ಈ ಸಹಭಾಗಿತ್ವದ ಭಾಗವಾಗಿ ಚಾಯ್ ಪಾಯಿಂಟ್ ಮಹಾ ಕುಂಭ ಮೇಳದ ಆವರಣದಲ್ಲಿ 10 ಮಳಿಗೆಗಳನ್ನು ಸ್ಥಾಪಿಸಿದೆ. ಈ ಮಳಿಗೆಗಳು ಐತಿಹಾಸಿಕ ಮೇಳದ ಸಂದರ್ಭದಲ್ಲಿ 1 ಕೋಟಿ ಕಪ್ ಗೂ ಹೆಚ್ಚು ಚಹಾವನ್ನು ನೀಡಲು ಸಿದ್ಧವಾಗಿವೆ.

ಈ ಮೂಲಕ ಒಂದು ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ಅತಿ ಹೆಚ್ಚು ಕಪ್ ಚಹಾ ಮಾರಾಟ ಮಾಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು KMF ಹೊಂದಿದೆ. ಮಹಾ ಕುಂಭಮೇಳದಲ್ಲಿ ಪ್ರತಿ ಕಪ್ ಚಹಾವು ನಂದಿನಿಯ ಉತ್ತಮ-ಗುಣಮಟ್ಟದ ಹಾಲನ್ನು ಹೊಂದಿರುತ್ತದೆ. ಇದು ಚಹಾ ಪ್ರಿಯರಲ್ಲಿ ಸಂತೋಷಕರ ಅನುಭವ ನೀಡುತ್ತದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ವಿದ್ಯುಕ್ತವಾಗಿ ಆರಂಭವಾಗಿರುವ ಮಹಾ ಕುಂಭ ಮೇಳ ಫೆಬ್ರವರಿ 26 ರವರೆಗೆ ನಡೆಯಲಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷೆಯಿದೆ.ಚಹಾದ ಜೊತೆಗೆ, ಚಾಯ್ ಪಾಯಿಂಟ್ ಸ್ಟೋರ್‌ಗಳಲ್ಲಿ ಸಿಹಿತಿಂಡಿಗಳು, ಮಿಲ್ಕ್‌ಶೇಕ್‌ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳು ದೊರೆಯಲಿವೆ.

ಈ ಸಹಯೋಗ ಉತ್ತರದ ಭಾರತದ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ನಂದಿನಿಯ ಬದ್ಧತೆ ಮತ್ತು ರಾಷ್ಟ್ರವ್ಯಾಪಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ತಲುಪಿಸಲು ಅದರ ಸಮರ್ಪಣೆಯನ್ನು ತೋರಿಸುತ್ತದೆ.ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇವೆ ಎಂದು ಕೆಎಂಎಫ್ ಎಂಡಿ ಬಿ ಶಿವಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT