ನವದೆಹಲಿ: 2023 ರಲ್ಲಿ ಉತ್ತರಾಖಂಡ್ ನಲ್ಲಿ ಸಂಭವಿಸಿದ್ದ ಸಿಲ್ಕ್ಯಾರ ಸುರಂಗ ಕುಸಿತ ಘಟನೆಯಲ್ಲಿ ಕಾರ್ಮಿಕರನ್ನು ರಕ್ಷಿಸಿದ್ದ ರ್ಯಾಟ್ ಹೋಲ್ ಮೈನಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದ 12 ಮಂದಿ ರಾಷ್ಟ್ರಪತಿ ಪದಕ ಗೌರವಕ್ಕೆ ಭಾಜನರಾಗಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ಈ ಬಾರಿ 49 ಮಂದಿಗೆ ಜೀವನ್ ರಕ್ಷಾ ಪದಕಗಳನ್ನು ರಾಷ್ಟ್ರಪತಿಗಳು ಘೋಷಿಸಲಾಗಿದೆ ಈ ಪೈಕಿ ಸಿಲ್ಕ್ಯಾರ ಟನಲ್ ನಲ್ಲಿ ಕಾರ್ಮಿಕರ ಜೀವ ರಕ್ಷಿಸಿದ್ದ 12 ಮಂದಿಯೂ ಇದ್ದಾರೆ.
ವ್ಯಕ್ತಿಯ ಜೀವ ಉಳಿಸುವಲ್ಲಿನ ಶ್ಲಾಘನೀಯ ಕಾರ್ಯಕ್ಕಾಗಿ ಪ್ರಶಸ್ತಿಗಳನ್ನು 76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತ್ತದೆ ಎಂದು ಸರ್ಕಾರಿ ಹೇಳಿಕೆ ತಿಳಿಸಿದೆ.
12 ಇಲಿ ಗಣಿಗಾರರ (rat mining) ತಂಡ ಮತ್ತು ಇತರ ಐದು ಜನರಿಗೆ ಮರಣೋತ್ತರವಾಗಿ ಸೇರಿದಂತೆ 17 ವ್ಯಕ್ತಿಗಳಿಗೆ ಸರ್ವೋತ್ತಮ ಜೀವನ ರಕ್ಷಾ ಪದಕವನ್ನು ನೀಡಲಾಗುತ್ತಿದೆ.
ಬಿಹಾರದ ಪಿಂಟು ಕುಮಾರ್ ಸಾಹ್ನಿ, ಕೇರಳದ ಮನೇಶ್ ಕೆ ಎಂ, ಸಿಕ್ಕಿಂನ ದವಾ ಶೆರಿಂಗ್ ಲೆಪ್ಚಾ ಮತ್ತು ಪೆಮಾ ತೇನ್ಸಿಂಗ್ ಲಚುಂಗ್ಪಾ ಮತ್ತು ರಕ್ಷಣಾ ಸಚಿವಾಲಯದ ಗನ್ನರ್ ಅನಿಸ್ ಕುಮಾರ್ ಗುಪ್ತಾ ಅವರನ್ನು ಮರಣೋತ್ತರವಾಗಿ ಪ್ರಶಸ್ತಿಗೆ ಹೆಸರಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
Rat miners ನ ತಂಡದ ಸದಸ್ಯರಾದ ವಕೀಲ್ ಹಸನ್, ಮುನ್ನಾ ಖುರೇಷಿ, ಅಂಕುರ್ ಕುಮಾರ್, ಮೋನು ಕುಮಾರ್, ದೇವೇಂದ್ರ, ಮೊಹಮ್ಮದ್ ರಶೀದ್, ಫಿರೋಜ್ ಖುರೇಷಿ, ಜತಿನ್ ಕಶ್ಯಪ್, ಸೌರಭ್ ಕಶ್ಯಪ್, ಮೊಹಮ್ಮದ್ ಇರ್ಷಾದ್, ನಸ್ರುದ್ದೀನ್ ಮತ್ತು ನಸೀಮ್ 26 ಗಂಟೆಗಳ ಕಾಲ ಕೆಲಸ ಮಾಡಿದ್ದರು. ವಿರಾಮವಿಲ್ಲದೆ ಕಾರ್ಮಿಕರನ್ನು ರಕ್ಷಿಸಲು ಶ್ರಮಿಸಿದ್ದರು.
ಸರ್ವೋತ್ತಮ ಜೀವನ ರಕ್ಷಾ ಪದಕ, ಉತ್ತಮ ಜೀವನ ರಕ್ಷಾ ಪದಕ ಮತ್ತು ಜೀವನ ರಕ್ಷಾ ಪದಕ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
"ಪ್ರಶಸ್ತಿಯು ಪದಕ, ಕೇಂದ್ರ ಗೃಹ ಸಚಿವರು ಸಹಿ ಮಾಡಿದ ಪ್ರಮಾಣಪತ್ರ ಮತ್ತು ಒಟ್ಟು ಮೊತ್ತದ ವಿತ್ತೀಯ ಭತ್ಯೆಯನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರು ಸೇರಿರುವ ಆಯಾ ಕೇಂದ್ರ ಸಚಿವಾಲಯಗಳು/ಸಂಸ್ಥೆಗಳು/ರಾಜ್ಯ ಸರ್ಕಾರಗಳು ಇದನ್ನು ಪ್ರಶಸ್ತಿ ಪುರಸ್ಕೃತರಿಗೆ ಪ್ರದಾನ ಮಾಡುತ್ತವೆ" ಎಂದು ಹೇಳಿಕೆ ತಿಳಿಸಿದೆ.