ಪವಿತ್ರ ಸ್ನಾನ ಮಾಡಿದ ರೆಮೋ ಡಿಸೋಜಾ 
ದೇಶ

Maha Kumbh 2025: ಪಾಕ್ ನಿಂದ ಪ್ರಾಣ ಬೆದರಿಕೆ? ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ Remo D'Souza

ಕಪ್ಪು ಬಟ್ಟೆ ಧರಿಸಿ, ಮುಖವನ್ನು ಭಾಗಶಃ ಮುಚ್ಚಿಕೊಂಡು, ಘಾಟ್ ಬಳಿ ನಿಂತು ದೋಣಿ ವಿಹಾರ ಮಾಡಿ, ಪವಿತ್ರ ಆಚರಣೆಯನ್ನು ಮಾಡುತ್ತಿದ್ದ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.

ಪ್ರಯಾಗ್ ರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಸುದ್ದಿಗೆ ಗ್ರಾಸವಾಗಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿ ಸೋಜಾ ಪಾಲ್ಗೊಂಡಿದ್ದು, ಮಾತ್ರವಲ್ಲದೇ ಪವಿತ್ರ ಸ್ನಾನ ಮಾಡಿದ್ದಾರೆ. ಮಹಾ ಕುಂಭಮೇಳಕ್ಕೆ ವೇಷ ಧರಿಸಿ ಆಗಮಿಸಿದ ರೆಮೋ ಡಿಸೋಜಾ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕಪ್ಪು ಬಟ್ಟೆ ಧರಿಸಿ, ಮುಖವನ್ನು ಭಾಗಶಃ ಮುಚ್ಚಿಕೊಂಡು, ಘಾಟ್ ಬಳಿ ನಿಂತು ದೋಣಿ ವಿಹಾರ ಮಾಡಿ, ಪವಿತ್ರ ಆಚರಣೆಯನ್ನು ಮಾಡುತ್ತಿದ್ದ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.

ಮತ್ತೊಂದು ವೀಡಿಯೊದಲ್ಲಿ ರೆಮೋ ಅವರು ಶ್ರೀ ಕೈಲಾಸಾನಂದ ಗಿರಿ ಅವರೊಂದಿಗೆ ಕುಳಿತು ಆಶೀರ್ವಾದ ಪಡೆಯುತ್ತಿರುವುದನ್ನು ತೋರಿಸಲಾಗಿದೆ.

ರೆಮೋ ಕುಟುಂಬಕ್ಕೆ ಜೀವ ಬೆದರಿಕೆ?

ಇನ್ನು ಈ ಹಿಂದೆ ಇದೇ ನೃತ್ಯ ನಿರ್ದೇಶಕ ರೆಮೋ ಅವರ ಪತ್ನಿ ಲಿಜೆಲ್ಲೆ ಡಿ'ಸೋಜಾ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ವರದಿಯಾಗಿತ್ತು. ಆದರೆ ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಲಿಜೆಲ್ಲೆ "ನಾವು ಮಾಧ್ಯಮಗಳಲ್ಲಿಯೂ ಇದರ ಬಗ್ಗೆ ಓದಿದ್ದೇವೆ. ನಮ್ಮ ಕಂಪನಿಯ ಇಮೇಲ್ ಐಡಿಯಲ್ಲಿ ಸಂಬಂಧವಿಲ್ಲದ ವಿಷಯದ ಬಗ್ಗೆ ಸ್ಪ್ಯಾಮ್ ಇಮೇಲ್‌ಗಳನ್ನು ಮಾತ್ರ ನಾವು ಸ್ವೀಕರಿಸಿದ್ದೇವೆ, ಅದನ್ನು ನಾವು ಪೊಲೀಸರಿಗೆ ವರದಿ ಮಾಡಿದ್ದೇವೆ. ಸೈಬರ್ ಇಲಾಖೆ ತನಿಖೆ ನಡೆಸುತ್ತಿದೆ ಮತ್ತು ಅವರು ಅದನ್ನು ಸ್ಪ್ಯಾಮ್ ಎಂದು ನಂಬಿದ್ದಾರೆ ಎಂದು ಹೇಳಿದ್ದಾರೆ.

ಪವಿತ್ರ ಸ್ನಾನದ ಮಹತ್ವ

ಸಂಪ್ರದಾಯದ ಪ್ರಕಾರ, ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಪಾಪಗಳು ಪರಿಹಾರವಾಗುತ್ತವೆ ಮತ್ತು ಆಧ್ಯಾತ್ಮಿಕ ವಿಮೋಚನೆ (ಮೋಕ್ಷ) ಉಂಟಾಗುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಪ್ರಯಾಗರಾಜ್‌ನಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಸೇರುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT