ಯೋಗಿ ಆದಿತ್ಯನಾಥ್  
ದೇಶ

ಸನಾತನ ಧರ್ಮ ಬಲಿಷ್ಠವಾಗಿದ್ದರೆ, ಭಾರತ ಬಲಿಷ್ಠವಾಗುತ್ತದೆ: ಯೋಗಿ ಆದಿತ್ಯನಾಥ್

ಮಹಾಕುಂಭದ ಭಾಗವಾಗಿರುವ ಎಲ್ಲಾ ಸಂತರು, ಭಕ್ತರು ಅಥವಾ ಪ್ರವಾಸಿಗರು ಸಹ ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ದರೆ, ಸನಾತನ ಧರ್ಮ ಬಲಿಷ್ಠವಾಗುತ್ತದೆ.

ಮಹಾಕುಂಭ: ಜನರು ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು, ನಮ್ಮ ಸನಾತನ ಧರ್ಮ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗಿರುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿರೋಧ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಜಾತಿ-ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಹೀಗೆ ಮಾಡುವುದು ದೇಶದ್ರೋಹಕ್ಕಿಂತ ಕಡಿಮೆಯಿಲ್ಲ ಎಂದು ಹೇಳಿದರು.

ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಭಜಿಸಬೇಕೆಂಬ ಕೆಲವು ಭಾಗಗಳ ಬೇಡಿಕೆಗೆ ಅವರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು, ಉತ್ತರ ಪ್ರದೇಶದ ಸಾಮರ್ಥ್ಯವು ಅದರ ಏಕತೆಯಲ್ಲಿದೆ ಎಂದು ಪ್ರಯಾಗ್ ರಾಜದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಬಗ್ಗೆ ಹೇಳಿದರು.

ಮಹಾಕುಂಭವು ಏಕತೆ ಮತ್ತು ಸಮಗ್ರತೆಯ ಸಂದೇಶ ಸಾರುತ್ತದೆ, ಇದು ಜಗತ್ತಿಗೆ ತಲುಪಬೇಕು. ಮಹಾಕುಂಭದ ಭಾಗವಾಗಿರುವ ಎಲ್ಲಾ ಸಂತರು, ಭಕ್ತರು ಅಥವಾ ಪ್ರವಾಸಿಗರು ಸಹ ಏಕತೆಯ ಸಂದೇಶವನ್ನು ಮುಂದಕ್ಕೆ ಕೊಂಡೊಯ್ದರೆ, ಸನಾತನ ಧರ್ಮ ಬಲಿಷ್ಠವಾಗುತ್ತದೆ. ಸನಾತನ ಧರ್ಮ ಬಲಿಷ್ಠವಾಗಿದ್ದರೆ, ನಮ್ಮ ದೇಶ ಬಲಿಷ್ಠವಾಗಿರುತ್ತದೆ ಎಂದು ಯೋಗಿ ಆದಿತ್ಯನಾಥ್ ಅವರು ಮಹಾಕುಂಭಮೇಳದಲ್ಲಿ "ನ್ಯೂಸ್ 18 ನೆಟ್‌ವರ್ಕ್" ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್