ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಟೋಲ್ ಪ್ಲಾಜಾದಲ್ಲಿ ತನ್ನ ಸರದಿಗಾಗಿ ಕಾಯುತ್ತಾ ನಿಂತಿದ್ದ ದುಬಾರಿ ಬಿಎಂಡಬ್ಲ್ಯೂ ಕಾರಿನ ಹಿಂದೆ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ.
lorry carrying fly ash overturned on a BMW car
ಬಿಎಂಡಬಲ್ಯೂ ಕಾರಿನ ಮೇಲೆ ಬಿದ್ದ ಟ್ಯಾಂಕರ್
Updated on

ಅಮರಾವತಿ: ಬೆಂಗಳೂರಿನಲ್ಲಿ ಸಂಭವಿಸಿದ್ದ ವೋಲ್ವೋ (VOLVO) ಕಾರು ದುರಂತದಲ್ಲಿ ಖ್ಯಾತ ಉದ್ಯಮಿಯ ಇಡೀ ಕುಟುಂಬ ಸಾವನ್ನಪ್ಪಿದ್ದ ಪ್ರಕರಣ ಹಸಿರಾಗಿರುವಂತೆಯೇ ಅಂತಹುದೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹೌದು.. ಆಂಧ್ರ ಪ್ರದೇಶದ ಎನ್ ಟಿಆರ್ ಜಿಲ್ಲೆಯ ಕಂಚಿಕಾಚೆರ್ಲಾ ಮಂಡಲದ ಕೀಸರಾ ಟೋಲ್ ಪ್ಲಾಜಾದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಟೋಲ್ ಪ್ಲಾಜಾದಲ್ಲಿ ತನ್ನ ಸರದಿಗಾಗಿ ಕಾಯುತ್ತಾ ನಿಂತಿದ್ದ ದುಬಾರಿ ಬಿಎಂಡಬ್ಲ್ಯೂ ಕಾರಿನ ಹಿಂದೆ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ.

ಹಾರು ಬೂದಿ ತುಂಬಿದ್ದ ಟ್ಯಾಂಕರ್ ಕಾರಿನ ಮೇಲೆ ಬೀಳುತ್ತಲೇ ಐಶಾರಾಮಿ ಬಿಎಂಡಬ್ಲ್ಯೂ ಕಾರು ಅಪ್ಪಚ್ಚಿಯಾಗಿದ್ದು, ಕಾರಿನೊಳಗಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತ ಚಾಲಕ ಆಂಧ್ರ ಪ್ರದೇಶ ಹೈಕೋರ್ಟ್ ವಕೀಲ ಎಂದು ಗುರುತಿಸಲಾಗಿದೆ.

lorry carrying fly ash overturned on a BMW car
40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ರೂ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಹೈದರಾಬಾದ್ ಮಾರ್ಗದಲ್ಲಿ ಟ್ಯಾಂಕರ್ ಕೀಸಾರಾ ಟೋಲ್ ಪ್ಲಾಜಾ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಟ್ಯಾಂಕರ್ ವೇಗದಲ್ಲಿತ್ತು. ಚಾಲಕನು ಟೋಲ್ ಪ್ಲಾಜಾ ಸಮೀಪ ಬಂದಾಗ ಬ್ರೇಕ್ ಹಾಕಿದ್ದಾನೆ. ಬ್ರೇಕ್ ವೈಫಲ್ಯವಾಗಿ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ.

ಈ ವೇಳೆ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ತಿಳಿದುಬಂದಿಲ್ಲ. ಘಟನೆ ಬಳಿಕ ಸ್ಥಳೀಯ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕಾರಿನಿಂದ ದೊಡ್ಡ ಟ್ಯಾಂಕರ್ ಅನ್ನು ತೆಗೆದುಹಾಕಲು ಕ್ರೇನ್ಗಳನ್ನು ಬಳಸಲಾಗಿದೆ.

ಈ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಟೋಲ್ ಗೇಟ್ ಸಮೀಪದಲ್ಲೇ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಾಹನಗನ್ನು ಬೇರೆಡೆಗೆ ತಿರುಗಿಸಿದರು ಎನ್ನಲಾಗಿದೆ.

ಸಿಸಿಟಿವಿ ವಿಡಿಯೋ ವೈರಲ್

ಇನ್ನು ಘಟನೆಯ ವಿಡಿಯೋ ಟೋಲ್ ಪ್ಲಾಜಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com