ವಿಕ್ರಮ್ ಸಂಪತ್ 
ದೇಶ

ThinkEdu Conclave 2025: ಟಿಪ್ಪು ಸುಲ್ತಾನ್ ವೈಭವೀಕರಣ ಅವರಿಂದ ಹಿಂಸೆಗೊಳಗಾದ ಜನರಿಗೆ ಮಾಡುವ ಅಪಮಾನ- ಇತಿಹಾಸಕಾರ ವಿಕ್ರಮ್ ಸಂಪತ್

ವೀರರು, ಖಳನಾಯಕರು ಮತ್ತು ಬದುಕುಳಿದವರು ವಿಷಯ ಕುರಿತ ಅಧಿವೇಶನದಲ್ಲಿ ಸಂಡೆ ಸ್ಟ್ಯಾಂಡರ್ಡ್ ನ ಸಲಹಾ ಸಂಪಾದಕ ರವಿಶಂಕರ್ ಜೊತೆಗಿನ ಸಂವಾದದಲ್ಲಿ ತಮ್ಮ ಇತ್ತೀಚಿನ ‘Tipu Sultan: The Saga of Mysore’s Interregnum' ಪುಸ್ತಕ ಬಗ್ಗೆ ಸಂಪತ್ ಮಾತನಾಡಿದರು.

ಚೆನ್ನೈ: ಇತಿಹಾಸವನ್ನು ಅರ್ಥೈಸುವಾಗ ಅಥವಾ ಅರ್ಥಮಾಡಿಕೊಳ್ಳುವಾಗ ವಿಭಿನ್ನ ಅಭಿಪ್ರಾಯ, ವ್ಯಾಖ್ಯಾನಗಳನ್ನು ಕೇಳುವ ಅಗತ್ಯವಿದೆ ಎಂದು ಇತಿಹಾಸಕಾರ ವಿಕ್ರಮ್ ಸಂಪತ್ ಅವರು ಪ್ರತಿಪಾದಿಸಿದ್ದಾರೆ.

ಮಂಗಳವಾರ ಥಿಂಕ್‌ಎಡು ಕಾನ್‌ಕ್ಲೇವ್ 2025 ರ 13 ನೇ ಆವೃತ್ತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಕನಿಷ್ಠ ಪಕ್ಷ ವಿನಾಯಕ ದಾಮೋದರ್ ಸಾವರ್ಕರ್ ಅವರಂತಹ ವ್ಯಕ್ತಿಗಳ ಚರ್ಚೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.

ವೀರರು, ಖಳನಾಯಕರು ಮತ್ತು ಬದುಕುಳಿದವರು ವಿಷಯ ಕುರಿತ ಅಧಿವೇಶನದಲ್ಲಿ ಸಂಡೆ ಸ್ಟ್ಯಾಂಡರ್ಡ್ ನ ಸಲಹಾ ಸಂಪಾದಕ ರವಿಶಂಕರ್ ಜೊತೆಗಿನ ಸಂವಾದದಲ್ಲಿ ತಮ್ಮ ಇತ್ತೀಚಿನ ‘Tipu Sultan: The Saga of Mysore’s Interregnum' ಪುಸ್ತಕ ಬಗ್ಗೆ ಮಾತನಾಡಿದ ಸಂಪತ್, ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸುವುದು, ಅವರಿಂದ ಹಿಂಸೆಗೊಳಗಾದ ಸಮುದಾಯಗಳ ಭಾವನೆಗಳು ಮತ್ತು ಸಂವೇದನೆಗಳಿಗೆ ಮಾಡುವ ಅವಮಾನವಾಗಿದೆ ಎಂದು ವಾದಿಸಿದರು.

"ಐತಿಹಾಸಿಕ ವ್ಯಕ್ತಿಗಳನ್ನು ವೀರರು ಅಥವಾ ಖಳನಾಯಕರು ಎಂದು ವಿಂಗಡಿಸಲು ಸಾಧ್ಯವಾಗದಿದ್ದರೂ, ಟಿಪ್ಪು ಸುಲ್ತಾನ್ ಅವರಂತಹವರು ನಕಾರಾತ್ಮಕ ಕಡೆಗೆ ಹತ್ತಿರವಾಗಿರುತ್ತಾರೆ ಎಂಬುದಕ್ಕೆ ಪುರಾವೆಗಳಿವೆ ಎಂದರು. ಆಧುನಿಕ ಯುಗದ ಹಿಂದೆ ಹಿಂಸಾಚಾರ ವ್ಯಾಪಕವಾಗಿ ಹರಡಿದ್ದರಿಂದ ನಾಗರಿಕ ಸಮಾಜದ ಮೇಲೆ ಹಾನಿಯನ್ನುಂಟು ಮಾಡಿತ್ತು. ಕೆಲವು ಸಂದರ್ಭಗಳಲ್ಲಿ ಈ ಹಿಂಸಾಚಾರ ದೇವರ ಹೆಸರಿನಲ್ಲಿ ನಡೆದು ನರಮೇದಕ್ಕೂ ಕಾರಣವಾಗಿತ್ತು. ಟಿಪ್ಪು ಸುಲ್ತಾನ್ ಒಂದೇ ದಿನದಲ್ಲಿ ನೂರಾರು ಸಮುದಾಯದವರನ್ನು ಹತ್ಯೆಗೈದ ಕಾರಣ ಶೋಕ ಸೂಚಕವಾಗಿ ದೀಪಾವಳಿಯನ್ನು ಆಚರಿಸುವುದನ್ನು ಬಿಟ್ಟುಬಿಡುವ ಮಂಡಯಂ ಅಯ್ಯಂಗಾರ್‌ಗಳು ಮತ್ತು ಟಿಪ್ಪು ಜಯಂತಿಯ ಸ್ಮರಣಾರ್ಥ ಮಂಗಳೂರಿನ ಕ್ರಿಶ್ಚಿಯನ್ ಸಮುದಾಯದ ಪ್ರತಿರೋಧವನ್ನು ಉಲ್ಲೇಖಿಸಿದರು.

ಕರ್ನಾಟಕದ ಪಠ್ಯಪುಸ್ತಕಗಳಲ್ಲಿ ವೀರ್ ಸಾವರ್ಕರ್ ಅವರು ಜೈಲಿನಲ್ಲಿದ್ದಾಗ ಬುಲ್ ಬುಲ್ ಹಕ್ಕಿಗಳ ರೆಕ್ಕೆಗಳ ಮೇಲೆ ಹಾರಿದ್ದಾರೆ ಎಂಬ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಇತಿಹಾಸಕಾರ ಸಂಪತ್, ಕನಿಷ್ಠ ಪಕ್ಷ ಸಾವರ್ಕರ್ ಅವರಂತಹ ವ್ಯಕ್ತಿಗಳ ಬಗ್ಗೆ ಚರ್ಚಿಸುವ ಪರಿಸ್ಥಿತಿ ಇದೆ ಎಂದು ಹೇಳಿದರು.

ಸಾವರ್ಕರ್ ಅವರ ಕವಿತೆಯೊಂದನ್ನು ಹಾಡಿದ್ದಕ್ಕಾಗಿ ಆಲ್ ಇಂಡಿಯಾ ರೇಡಿಯೊದಿಂದ ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರನ್ನು ಕೆಲಸದಿಂದ ತೆಗೆದುಹಾಕಿದ ಘಟನೆಯನ್ನು ತಿಳಿಸಿದರು.

ಸಾವರ್ಕರ್‌ಗೆ ಇಂದಿರಾ ಗಾಂಧಿಯವರ ಹೃದಯಪೂರ್ವಕ ಶ್ಲಾಘನೆಯನ್ನೂ ಸ್ಮರಿಸಿದ ಸಂಪತ್, ಒಂದು ವೇಳೆ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾಗಿದ್ದರೆ ಅವರು ಏಕೆ ಹಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಇತಿಹಾಸದ ರಾಜಕೀಯಕರಣದಲ್ಲಿ ಸಾವರ್ಕರ್ "ಪತನ ವ್ಯಕ್ತಿ" ಆದರು ಎಂದು ಅವರು ವಾದಿಸಿದರು. ಮೂಲಗಳ ಕೊರತೆ ಮತ್ತು ಅವುಗಳ ಲಭ್ಯತೆ, ಭಾಷಾ ಅಡೆತಡೆಗಳು ಮತ್ತು ಪ್ರಾಚೀನ ಪಠ್ಯಗಳಲ್ಲಿನ ಕಥೆ ಹೇಳುವ ಜಟಿಲದಿಂದ ಸತ್ಯವನ್ನು ಬೇರ್ಪಡಿಸುವ ತೊಂದರೆ ಸೇರಿದಂತೆ ಇತಿಹಾಸದ ದೃಷ್ಟಿಕೋನಗಳ ಸವಾಲುಗಳನ್ನು ಅವರು ಪ್ರತಿಪಾದಿಸಿದರು.

ಜ್ಞಾನ ಮತ್ತು ಐತಿಹಾಸಿಕ ಮೂಲ ನಾಶದ ಬಗ್ಗೆ ಮಾತನಾಡಿದ ಅವರು, ಭಕ್ತಿಯಾರ್ ಖಿಲ್ಜಿ ನಳಂದಾವನ್ನು ಸುಟ್ಟುಹಾಕಿದ್ದರಿಂದ ಅಲ್ಲಿದ್ದ ಮನುಸ್ಮೃತಿಗಳು ಸುಟ್ಟುಹೋದವು. ನಳಂದಾವನ್ನು ನಾಶಪಡಿಸಿದ ವ್ಯಕ್ಕಿಯ ಹೆಸರನ್ನು ಇದೀಗ ಭಕ್ತಿಯಾರ್‌ಪುರ ಇಟ್ಟಿರುವುದು ಒಂದು ವಿಡಂಬನೆಯಾಗಿದೆ ಎಂದು ಅವರು ಹೇಳಿದರು.

ಫೌಂಡೇಶನ್ ಫಾರ್ ಇಂಡಿಯನ್ ಹಿಸ್ಟಾರಿಕಲ್ ಅಂಡ್ ಕಲ್ಚರಲ್ ರಿಸರ್ಚ್‌ನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಸಂಪತ್, ಈ ಪ್ರತಿಷ್ಠಾನವು ಹೆಸರಾಂತ ಇತಿಹಾಸಕಾರ ಸರ್ ಜಾದುನಾಥ್ ಸರ್ಕಾರ್ ಅವರ ಹೆಸರಿನಲ್ಲಿ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಇತಿಹಾಸವನ್ನು ಅರಿಯಲು ಮತ್ತು ಸಂಶೋಧಿಸಲು ವಾರ್ಷಿಕವಾಗಿ ಎಂಟರಿಂದ ಒಂಬತ್ತು ವಿದ್ವಾಂಸರಿಗೆ ಧನಸಹಾಯ ನೀಡುತ್ತದೆ ಎಂದು ತಿಳಿಸಿದರು.

ಪ್ರತಿಷ್ಠಾನದ ಯೋಜನಾ ಗುಂಪು ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಯೋಜನೆ ಪ್ರೋತ್ಸಾಹಿಸುತ್ತಿದ್ದು, ಮರುಶೋಧಿಸಲಾದ ನಳಂದಾ ವಿಶ್ವವಿದ್ಯಾಲಯದಿಂದ ಪ್ರಾರಂಭಿಸಿ, ಭಾರತದಲ್ಲಿ ಬೌದ್ಧಧರ್ಮದ ಉಗಮ ಮತ್ತು ಕ್ಷೀಣತೆಯನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಭಾಷಾ ವಿದ್ವಾಂಸರು ಸೇರಿದಂತೆ ಬಹುಶಿಸ್ತೀಯ ತಂಡವು ಅಧ್ಯಯನ ಮಾಡುತ್ತಿದೆ. ಇದಲ್ಲದೇ ಯುವ ಎಂಬ ಯೋಜನೆಯಡಿಯಲ್ಲಿ ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಇತಿಹಾಸ ಕುರಿತು ಆಸಕ್ತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT