ಅರವಿಂದ್ ಕೇಜ್ರಿವಾಲ್  
ದೇಶ

ಯಮುನಾ ನದಿಗೆ ಹರ್ಯಾಣ ಸರ್ಕಾರ ವಿಷ ಬೆರೆಸುತ್ತಿದೆ ಹೇಳಿಕೆ: ಉತ್ತರದಿಂದ ತೃಪ್ತವಾಗದ ಚುನಾವಣಾ ಆಯೋಗದಿಂದ ಕೇಜ್ರಿವಾಲ್ ಗೆ ಪತ್ರ

ನಾಳೆ ಬೆಳಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಇಸಿಐ ಹಲವಾರು ನಿರ್ದಿಷ್ಟ ಅಂಶಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ಕೋರಿದೆ, ವಿಫಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ನವದೆಹಲಿ: ಹರಿಯಾಣ ಸರ್ಕಾರ ಯಮುನಾ ನದಿಯಲ್ಲಿ "ವಿಷ ಬೆರೆಸುತ್ತಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೀಡಿರುವ ಪ್ರತಿಕ್ರಿಯೆಗೆ ಭಾರತೀಯ ಚುನಾವಣಾ ಆಯೋಗ (ECI) ಅತೃಪ್ತಿ ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ನರಮೇಧವನ್ನು ಉಂಟುಮಾಡುವ ಉದ್ದೇಶದಿಂದ ಹರಿಯಾಣ ಸರ್ಕಾರವು ಯಮುನಾ ನದಿಗೆ ವಿಷ ಬೆರೆಸಿದೆ ಎಂದು ದೆಹಲಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನೀಡಿರುವ ಸಾರ್ವಜನಿಕ ಹೇಳಿಕೆಗೆ ಸಂಬಂಧಪಟ್ಟಂತೆ ನೀಡಿರುವ ನೊಟೀಸ್ ಗೆ ಕೇಜ್ರಿವಾಲ್ ಅವರ ಉತ್ತರವು ಸಂಪೂರ್ಣವಾಗಿ ಮೌನವಾಗಿದೆ ಎಂದು ಇಸಿಐ ಹೇಳಿದೆ.

ನಾಳೆ ಬೆಳಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಇಸಿಐ ಹಲವಾರು ನಿರ್ದಿಷ್ಟ ಅಂಶಗಳ ಕುರಿತು ಹೆಚ್ಚಿನ ಸ್ಪಷ್ಟೀಕರಣವನ್ನು ಕೋರಿದೆ, ವಿಫಲವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ಕೇಜ್ರಿವಾಲ್ ಅವರು ನೊಟೀಸ್ ಗೆ ಉತ್ತರ ನೀಡಿದ್ದರೂ, ಯಮುನಾ ನದಿಗೆ ವಿಷ ಬೆರೆಸಿದ ಆರೋಪದ ಕುರಿತು ಅವರ ಹೇಳಿಕೆಯ ನಿರ್ಣಾಯಕ ವಿಷಯವನ್ನು ಪರಿಹರಿಸಲು ವಿಫಲವಾಗಿದೆ ಎಂದು ಚುನಾವಣಾ ಆಯೋಗದ ಪತ್ರದಲ್ಲಿ ತಿಳಿಸಿದೆ.

ಈ ಹೇಳಿಕೆಯನ್ನು ದೃಢೀಕರಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನು ಪುರಾವೆಗಳನ್ನು ಒದಗಿಸಲಾಗಿಲ್ಲ ಎಂದ ಚುನಾವಣಾ ಆಯೋಗ ಹೆಚ್ಚು ವಿವರವಾದ ಉತ್ತರವನ್ನು ಸಲ್ಲಿಸಲು ಕೇಜ್ರಿವಾಲ್‌ಗೆ ಸೂಚಿಸಿದೆ.

ಹರಿಯಾಣ ಸರ್ಕಾರವು ಯಮುನಾ ನದಿಯಲ್ಲಿ ಬೆರೆಸಿದೆ ಎಂದು ಹೇಳಲಾದ ವಿಷದ ಪ್ರಮಾಣ ಮತ್ತು ಸ್ವರೂಪ, ಅದನ್ನು ಪತ್ತೆಹಚ್ಚುವ ವಿಧಾನ, ಸ್ಥಳ ಮತ್ತು ದೆಹಲಿ ಪ್ರದೇಶಕ್ಕೆ ವಿಷಕಾರಿ ನೀರು ಪ್ರವೇಶಿಸುವುದನ್ನು ತಡೆಯುವಲ್ಲಿ ದೆಹಲಿ ಜಲ ಮಂಡಳಿಯ ಎಂಜಿನಿಯರ್‌ಗಳ ಪಾತ್ರದ ಬಗ್ಗೆ ಸ್ಪಷ್ಟನೆ ನೀಡುವಂತೆ ಆಯೋಗವು ಕೇಜ್ರಿವಾಲ್ ಅವರನ್ನು ಕೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ