ಸ್ಫೋಟದಲ್ಲಿ ಮಡಿದ ಸಂತ್ರಸ್ತರ ಕುಟುಂಬಸ್ಥರು 
ದೇಶ

ತೆಲಂಗಾಣ ಔಷಧ ಘಟಕ ಸ್ಫೋಟ: ಹಳೇಯ ಯಂತ್ರೋಪಕರಣದಿಂದ ಅವಘಡ; ಬದಲಿಸಲು ಮನವಿ ಸಲ್ಲಿಸಿದ್ದರೂ ಕಿವಿಗೊಡದ ಸಿಗಾಚಿ!

ಯಾವುದೇ ಸಂಸ್ಥೆಯು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಸಮಿತಿಯು ಅದರ ಬಗ್ಗೆ ನಿರ್ಧರಿಸುತ್ತದೆ. ಈ ಘಟಕವು ಯಾವುದೇ NOC ಗೆ ಅರ್ಜಿ ಸಲ್ಲಿಸಿಲ್ಲ ಮತ್ತು ಆದ್ದರಿಂದ ನಾವು ಅದನ್ನು ನೀಡಿಲ್ಲ" ಎಂದು ಅಧಿಕಾರಿ ಹೇಳಿದರು.

ಸಿಂಗಾರೆಡ್ಡಿ: ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಹಳೆಯ ಯಂತ್ರೋಪಕರಣಗಳನ್ನು ಬಳಸುತ್ತಿತ್ತು, ಬದಲಾಯಿಸಲು ಹಲವು ಬಾರಿ ಮನವಿ ಮಾಡಿದ್ದರು, ನಿರ್ಲಕ್ಷ್ಯಿಸಿದ್ದ ಸಂಸ್ಥೆ ಹಳೇಯ ಯಂತ್ರೋಪಕರಣಗಳನ್ನೆ ಬಳಸಲು ಕಾರ್ಮಿಕರನ್ನು ಒತ್ತಾಯಿಸುತ್ತಿತ್ತು ಎಂದು ಆಡಳಿತ ಮಂಡಳಿಯ ವಿರುದ್ಧ ದಾಖಲಿಸಲಾದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಎರಡು ದಿನಗಳ ಹಿಂದೆ ಕಂಪನಿಯ ಪಾಶಮೈಲಾರಂ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 36 ಜನರು ಸಾವನ್ನಪ್ಪಿದರು ಸುಮಾರು 17 ಮಂದಿ ಗಾಯಗೊಂಡಿದ್ದಾರೆ, ಸಂತ್ರಸ್ತರ ಕುಟುಂಬದ ಸದಸ್ಯರ ದೂರಿನ ಆಧಾರದ ಮೇಲೆ ಸಂಗರೆಡ್ಡಿ ಪೊಲೀಸರು ಸೋಮವಾರ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ), 110 (ಶಿಕ್ಷಾರ್ಹ ನರಹತ್ಯೆಗೆ ಯತ್ನಿಸುವುದು) ಮತ್ತು 117ರ (ಸ್ವಯಂಪ್ರೇರಿತವಾಗಿ ತೀವ್ರ ಗಾಯ ಉಂಟುಮಾಡುವುದು) ಅಡಿಯಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದಾರೆ.

ದೂರುದಾರರ ತಂದೆ ಮತ್ತು ಸಿಗಾಚಿ ಕಂಪನಿಯ ಇತರ ಉದ್ಯೋಗಿಗಳು ಸಿಗಾಚಿ ಕಂಪನಿಯ ಆಡಳಿತ ಮಂಡಳಿಗೆ ಈಗಾಗಲೇ ಹಲವಾರು ಬಾರಿ ಯಂತ್ರೋಪಕರಣಗಳನ್ನು ಬದಲಾಯಿಸುವ ಬಗ್ಗೆ ಮನವಿ ಮಾಡಿದ್ದರು. ಏಕೆಂದರೆ ಅವು ತುಂಬಾ ಹಳೆಯದಾಗಿದ್ದವು ಅಪಾಯದ ಸಾಧ್ಯತೆಯ ಬಗ್ಗೆ ತಿಳಿಸಿದ್ದರು, ಹಳೇಯ ಯಂತ್ರೋಪಕರಣಗಳ ಬಳಕೆಯಿಂದ ಭಾರೀ ನಷ್ಟವನ್ನು ಉಂಟುಮಾಡಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಆದರೆ ಕಂಪನಿ ಆಡಳಿತ ಮಂಡಳಿಯು ಹಳೆಯ ಯಂತ್ರೋಪಕರಣಗಳನ್ನೇ ಬಳಸುತ್ತಿದ್ದರು, ಇದರಿಂದಾಗಿ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಯಶವಂತ್ ರಾಜನಾಲಾ ಎಂಬುವರು ದೂರು ದಾಖಲಿಸಿದ್ದಾರೆ, ಅವರ ತಂದೆ ರಾಜನಾಲಾ ವೆಂಕಟ್ ಜಗನ್ ಮೋಹನ್ ಕಳೆದ 20 ವರ್ಷಗಳಿಂದ ಸಿಗಾಚಿಯಲ್ಲಿ ಉದ್ಯೋಗಿಯಾಗಿದ್ದರು. ಯಶವಂತ್ ಅವರ ತಂದೆ ತಮ್ಮ ಕುಟುಂಬ ಸದಸ್ಯರಿಗೆ ಇದನ್ನೇ ಹಲವು ಬಾರಿ ಹೇಳಿದ್ದರು ಎಂದು ಹೇಳಿದರು. ಆದರೆ ಕಂಪನಿಯ ಕಡೆಯಿಂದ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.

ದುರಂತದ ದಿನದಂದು ಬೆಳಿಗ್ಗೆ 11 ಗಂಟೆಗೆ, ಯಶವಂತ್ ಅವರ ಚಿಕ್ಕಪ್ಪ (ಅವರ ತಂದೆಯ ಕಿರಿಯ ಸಹೋದರ ರಾಮ್ ಮೋಹನ್ ರಾವ್) ಅವರಿಗೆ ಕರೆ ಮಾಡಿ ಬೆಳಿಗ್ಗೆ 9.30 ರ ಸುಮಾರಿಗೆ ಸಿಗಾಚಿ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿಸಿದರು. ಕೆಲವು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರು, ಇತರರಿಗೆ ತೀವ್ರ ಸುಟ್ಟಗಾಯಗಳಾದವು. ಅವರು ತಕ್ಷಣ ಪತಂಚೇರು ಸರ್ಕಾರಿ ಏರಿಯಾ ಆಸ್ಪತ್ರೆಗೆ ಧಾವಿಸಿ ಅಲ್ಲಿ ಬಿದ್ದಿದ್ದ ತಮ್ಮ ತಂದೆಯ ಶವವನ್ನು ಗುರುತಿಸಿದರು.

ತೆಲಂಗಾಣ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಕಂಪನಿಗೆ ಇಲಾಖೆಯಿಂದ ಯಾವುದೇ ಎನ್ಒಸಿ ಪಡೆದಿಲ್ಲ ಎಂದು ಹೇಳಿದ್ದಾರೆ. ಸ್ಥಾವರದಲ್ಲಿ ಅಗ್ನಿಶಾಮಕ ಎಚ್ಚರಿಕೆಗಳು ಮತ್ತು ಶಾಖ ಸಂವೇದಕಗಳು ಸೇರಿದಂತೆ ಯಾವುದೇ ಸಾಕಷ್ಟು ಸುರಕ್ಷತಾ ಕ್ರಮಗಳು ಇರಲಿಲ್ಲ. "ನಿರಪೇಕ್ಷಣಾ ಪ್ರಮಾಣಪತ್ರವನ್ನು ಪಡೆಯಲು ಒಂದು ಪ್ರಕ್ರಿಯೆ ಇದೆ. ಇದು ಆನ್‌ಲೈನ್ ಪ್ರಕ್ರಿಯೆಯಾಗಿದೆ. ಯಾವುದೇ ಸಂಸ್ಥೆಯು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಸಮಿತಿಯು ಅದರ ಬಗ್ಗೆ ನಿರ್ಧರಿಸುತ್ತದೆ. ಈ ಘಟಕವು ಯಾವುದೇ NOC ಗೆ ಅರ್ಜಿ ಸಲ್ಲಿಸಿಲ್ಲ ಮತ್ತು ಆದ್ದರಿಂದ ನಾವು ಅದನ್ನು ನೀಡಿಲ್ಲ" ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT