ಸಬ್ ಲೆಫ್ಟಿನೆಂಟ್ ಆಸ್ತಾ ಪೂನಿಯಾ ನೌಕಾಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್
ಸಬ್ ಲೆಫ್ಟಿನೆಂಟ್(ಎಸ್ಎಲ್ಟಿ) ಆಸ್ತಾ ಪೂನಿಯಾ ನೌಕಾ ವಾಯುಯಾನದ ಫೈಟರ್ ಸ್ಟ್ರೀಮ್ಗೆ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿದ್ದಾರೆ.
ನವದೆಹಲಿ: ವಿಶಾಖಪಟ್ಟಣಂನ ಐಎನ್ಎಸ್ ದೇಗಾದಲ್ಲಿ ಎರಡನೇ ಮೂಲ ಹಾಕ್ ಕನ್ವರ್ಷನ್ ಕೋರ್ಸ್ನ ಭಾಗವಾಗಿ ಫೈಟರ್ ಪೈಲಟ್ ತರಬೇತಿ ಪಡೆದ ಮೊದಲ ಮಹಿಳೆಯನ್ನು ಭಾರತೀಯ ನೌಕಾಪಡೆ ಶುಕ್ರವಾರ ತನ್ನ ಫೈಟರ್ ಸ್ಟ್ರೀಮ್ಗೆ ಸೇರಿಸಿಕೊಂಡಿದೆ.
"ಸಬ್ ಲೆಫ್ಟಿನೆಂಟ್(ಎಸ್ಎಲ್ಟಿ) ಆಸ್ತಾ ಪೂನಿಯಾ ನೌಕಾ ವಾಯುಯಾನದ ಫೈಟರ್ ಸ್ಟ್ರೀಮ್ಗೆ ಸೇರ್ಪಡೆಗೊಂಡ ಮೊದಲ ಮಹಿಳೆಯಾಗಿದ್ದಾರೆ - ಇದು ಅಡೆತಡೆಗಳನ್ನು ಮುರಿದು ನೌಕಾಪಡೆಯಲ್ಲಿ ಮಹಿಳಾ ಫೈಟರ್ ಪೈಲಟ್ಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ" ಎಂದು ಭಾರತೀಯ ನೌಕಾಪಡೆ ಹೇಳಿದೆ.
ಭಾರತೀಯ ನೌಕಾಪಡೆಯು ಈಗಾಗಲೇ ಮಹಿಳಾ ಅಧಿಕಾರಿಗಳನ್ನು ಎಂಆರ್ ವಿಮಾನ ಮತ್ತು ಹೆಲಿಕಾಪ್ಟರ್ಗಳಲ್ಲಿ ಪೈಲಟ್ಗಳು ಮತ್ತು ನೇವಲ್ ಏರ್ ಆಪರೇಷನ್ ಆಫೀಸರ್ಗಳಾಗಿ ನೇಮಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
Watch | ನಾವು ಏರ್ ಕ್ರ್ಯಾಫ್ಟ್ ಕಳೆದುಕೊಂಡಿದ್ದೇವೆ...: ಆಪರೇಶನ್ ಸಿಂಧೂರ್ ಬಗ್ಗೆ ನೌಕಾಪಡೆ ಕ್ಯಾಪ್ಟನ್ ಹೇಳಿಕೆ
ಜುಲೈ 3, 2025 ರಂದು ಸಬ್ ಲೆಫ್ಟಿನೆಂಟ್ ಆಸ್ತಾ ಪೂನಿಯಾ, ಲೆಫ್ಟಿನೆಂಟ್ ಅತುಲ್ ಕುಮಾರ್ ಧುಲ್ ಅವರೊಂದಿಗೆ, ಎಸಿಎನ್ಎಸ್(ವಾಯು) ರಿಯರ್ ಅಡ್ಮಿರಲ್ ಜನಕ್ ಬೆವ್ಲಿ ಅವರಿಂದ ಪ್ರತಿಷ್ಠಿತ 'ವಿಂಗ್ಸ್ ಆಫ್ ಗೋಲ್ಡ್' ಅನ್ನು ಪಡೆದರು ಎಂದು ನೌಕಾಪಡೆ ತಿಳಿಸಿದೆ.
"ಎಸ್ಎಲ್ಟಿ ಆಸ್ತಾ ಪೂನಿಯಾ ಅವರನ್ನು ಫೈಟರ್ ಸ್ಟ್ರೀಮ್ಗೆ ಸೇರಿಸಿಕೊಳ್ಳುವ ಮೂಲಕ ನೌಕಾ ವಾಯುಯಾನದಲ್ಲಿ ಲಿಂಗ ಸಮಾನತೆ ಮತ್ತು ನಾರಿ ಶಕ್ತಿಯನ್ನು ಉತ್ತೇಜಿಸುವ ಬಗ್ಗೆ ಭಾರತೀಯ ನೌಕಾಪಡೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ, ಸಮಾನತೆ ಮತ್ತು ಅವಕಾಶದ ಸಂಸ್ಕೃತಿಯನ್ನು ಬೆಳೆಸುತ್ತದೆ" ಎಂದು ಪ್ರಕಟಣೆಯಲ್ಲಿ ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.